1. Home
  2. Entertainment
  3. ರಣ್’ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಬ್ರೇಕಪ್ ಗುಸುಗುಸು – ಅನುಮಾನ ಮೂಡಿಸಿದ ಆ ಟ್ವೀಟ್ ನಲ್ಲಿ‌ ಏನಿದೆ…!?

ರಣ್’ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಬ್ರೇಕಪ್ ಗುಸುಗುಸು – ಅನುಮಾನ ಮೂಡಿಸಿದ ಆ ಟ್ವೀಟ್ ನಲ್ಲಿ‌ ಏನಿದೆ…!?

ರಣ್’ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಬ್ರೇಕಪ್ ಗುಸುಗುಸು – ಅನುಮಾನ ಮೂಡಿಸಿದ ಆ ಟ್ವೀಟ್ ನಲ್ಲಿ‌ ಏನಿದೆ…!?
0

ನ್ಯೂಸ್ ಆ್ಯರೋ : ಬಾಲಿವುಡ್‌ನ ಸೂಪರ್ ಹಿಟ್ ಜೋಡಿಗಳಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಕೂಡ ಒಂದು. ಆನ್ ಸ್ಕ್ರೀನ್ ಮತ್ತು ಆಫ್ ದಿ ಸ್ಕ್ರೀನ್ ಎರಡರಲ್ಲೂ ಈ ಜೋಡಿ ಮಾದರಿ. ದೀಪಿಕಾ ಮತ್ತು ರಣ್ವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಸಿನಿಮಾ ರಾಮ್ ಲೀಲಾ. ಈ ಸಿನಿಮಾದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾದರು. ಈ ಚಿತ್ರೀಕರಣ ವೇಳೆ ಪ್ರಾರಂಭವಾದ ಪ್ರೀತಿ ಬಳಿಕ ಹಸೆಮಣೆ ಏರುವಂತೆ ಮಾಡಿತು. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ದೀಪಿಕಾ ಮತ್ತು ರಣ್ವೀರ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾದಲ್ಲಿ ರಣ್ವೀರ್ ಮತ್ತು ದೀಪಿಕಾ ಇಬ್ಬರೂ ಅತೀ ಹೆಚ್ಚು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇಬ್ಬರ ರೊಮ್ಯಾಂಟಿಕ್ ದೃಶ್ಯಗಳು ನೋಡುಗರನ್ನು ಬೆರಗಾಗಿಸಿತ್ತು

ಆದರೀಗ ಇಷ್ಟು ಅನ್ಯೋನ್ಯವಾಗಿದ್ದ ಈ ತಾರಾ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಕೆಲ ದಿನಗಳಿಂದ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿ ಕೇಳಿಬರುತ್ತಿದೆ.

ಅಷ್ಟಕ್ಕೂ ದೀಪ್​ವೀರ್ ಲೈಫ್ ಅಲ್ಲಿ ಆಗಿದ್ದೇನು..? ಅವರಿಬ್ಬರ ಮಧ್ಯೆ ಮುನಿಸು ಮೂಡಿದ್ದೇಕೆ ಆಗಿದ್ದೇಯಾ..? ಈ ವಂದತಿ ಹಿಂದಿರುವ ಅಸಲಿ ವಿಷಯವೇನು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

ಪದ್ಮಾವತ್, ಬಾಜಿರಾವ್ ಮಸ್ತಾನಿ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಜೋಡಿ ರಣ್‌ವೀರ್ ಮತ್ತು ದೀಪಿಕಾ ನಿಜ ಜೀವನದಲ್ಲೂ ಬೆಸ್ಟ್ ಜೋಡಿ ಎನಿಸಿಕೊಂಡಿದ್ದಾರೆ. ಆದರೆ ಆದರ್ಶ ಜೋಡಿಗಳಲ್ಲಿ ಒಂದಾಗಿರುವ ದೀಪ್‌ವೀರ್ ಜೋಡಿ ವೈವಾಹಿಕ ಬದುಕಲ್ಲಿ ಏನು ಸರಿಯಿಲ್ಲ ಎಂಬ ವದಂತಿ ಹರಿದಾಡುತ್ತಿದ್ದು, ಇದಕ್ಕೆಲ್ಲ ಕಾರಣ ಆಗಿರುವುದು ಉಮೈರ್ ಸಂಧು ಅವರ ಟ್ವೀಟ್.

ಹೌದು.. ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯ ಮತ್ತು ಸಿನಿಮಾ ವಿಮರ್ಶಕ ಉಮೈರ್ ಸಂಧು ಮಾಡಿರುವ ಟ್ವೀಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ರಣ್‌ವೀರ್ ಮತ್ತು ದೀಪಿಕಾ ನಡುವೆ ಎಲ್ಲವೂ ಸರಿಯಿಲ್ಲ ಎಂದು ಟ್ವೀಟ್ ಮಾಡಿರುವ ಈ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯನಾಗಿರುವ ಉಮೈರ್ ಸಂಧು ಭಾರತದ ಸಿನಿಮಾಗಳನ್ನು ವಿಮರ್ಶೆ ಮಾಡುತ್ತಾರೆ. ರೀವ್ಯೂ ಮಾಡುವ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ಇವರ ಖಾತೆಯನ್ನು ಬಹಳಷ್ಟು ಸಿನಿಪ್ರಿಯರು ಫಾಲೋ ಮಾಡುತ್ತಾರೆ. ಇದೇ ಉಮೈರ್ ಸಂಧು ಏಕಾಏಕಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಸಂಸಾರದ ಬಿರುಕಿನ ಬಗ್ಗೆ ಉಮೈರ್ ಸಂಧು ಟ್ವೀಟ್​ ಮಾಡಿದ್ದು, ಉಮೈರ್ ಸಂಧು ಅವರ ಟ್ವೀಟ್, ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

ಆದರೀಗ ಈ ಬಗ್ಗೆ ಸ್ವತಃ ನಟ ರಣ್​ವೀರ್​ ಸಿಂಗ್ ಮೌನ ಮುರಿದಿದ್ದು, ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ವದಂತಿಯ ಬಗ್ಗೆ ರಣವೀರ್ ಸಿಂಗ್​ ಪ್ರತಿಕ್ರಿಯಿಸಿದ್ದಾರೆ. ಈ ಗಾಸಿಪ್ ಕುರಿತು ರಣವೀರ್ ಗೆ ನೇರವಾಗಿ ಪ್ರಶ್ನೆ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್​ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷ ಆಯ್ತು, ಎಲ್ಲವೂ ಸರಿ ಇದೆ, ಆ ದೇವರಿಗೆ ಧನ್ಯವಾದ’ ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ಹೇಳಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..