ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಕೆಂದುಟಿಗೆ ಫಿದಾ ಆದ ಗುರೂಜಿ – ಭವಿಷ್ಯ ಹೇಳೋ ನೆಪದಲ್ಲಿ ಗುರೂಜಿ ಹೇಳಿದ್ದೇನು?

ನ್ಯೂಸ್ ಆ್ಯರೋ : ‘ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು’ ಎಂದು ಹೇಳುತ್ತಲೇ ಫೇಮಸ್ ಆದ ಆರ್ಯವರ್ಧನ್ ಗುರೂಜಿ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಬಂದು ಎಲ್ಲರನ್ನೂ ರಂಜಿಸಿದ್ದಾರೆ. ಈಗ ಅವರು ಟಿವಿ ಸೀಸನ್ಗೆ ಎಂಟ್ರಿ ನೀಡಿದ್ದು, ದೊಡ್ಮನೆಯಲ್ಲಿ ಗುರೂಜಿ ತುಂಬಾ ಸ್ಮಾರ್ಟ್ ಆಟ ಆಡುತ್ತಿದ್ದಾರೆ. ನ್ಯೂಸ್ ಚಾನೆಲ್‌ಗಳಲ್ಲಿ ಕೂತುಕೊಂಡು ‘ನಾನು ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು’ ಎನ್ನುತ್ತಿದ್ದ ಆರ್ಯವರ್ಧನ್ ಗುರೂಜಿ ಸದ್ಯ ‘ಬಿಗ್ ಬಾಸ್’ ಮನೆಯಲ್ಲೂ ತಮ್ಮ ಜ್ಯೋತಿಷ್ಯ ವೃತ್ತಿಯನ್ನು ಆರಂಭಿಸಿಕೊಂಡಿದ್ದು, ತಮ್ಮ ಪ್ರತಿ ಸ್ಪರ್ಧಿ ಅಮೂಲ್ಯ ಅವರ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದಾರೆ.
ಹೌದು.. ಒಂದು ಕಡೆ ಟಾಸ್ಕ್ ನಡೆಯುತ್ತಿದ್ದರೆ, ಇತ್ತ ಗೂರುಜಿ ಪಂಚಾಂಗ ಇಲ್ಲದೇ ತುಟಿ ನೋಡಿ ಭವಿಷ್ಯ ನುಡಿದಿದ್ದು, ಗುರೂಜಿ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.
ಅಮೂಲ್ಯ ಗೌಡ ಹಾಗೂ ರಾಕೇಶ್ ಕುಳಿತಿದ್ದ ಗುರೂಜಿ ಸಂಭಾಷಣೆಗಿಳಿದಿದ್ದು, ಈ ವೇಳೆ ಶ್ವೇತ ವರ್ಣದ ಸಲ್ವಾರ್ ತೊಟ್ಟು ಮಿರ ಮಿರ ಮಿಂಚುತ್ತಿದ್ದ ಅಮೂಲ್ಯ ತಮ್ಮ ಕೆಂದುಟಿಗೆ ರೆಡ್ ಲಿಪ್ಸ್ಟಿಕ್ ಹಾಕಿದ್ದರು. ಇದನ್ನು ಗಮನಿಸಿದ ಆರ್ಯವರ್ಧನ್, ‘ನಿಮ್ಮ ತುಟಿ ನೋಡಿ ಭವಿಷ್ಯ ಹೇಳುತ್ತೇನೆ ಅಂದಿದ್ದು, ನಿಮ್ಮ ತುಟಿ ಚೂಪು ಇದೆ. ಹಾಗಿದ್ದರೆ ಅನೇಕರು ನಿಮ್ಮನ್ನು ಇಷ್ಟಪಡ್ತಾರೆ’ ಎಂದಿದ್ದು, ಈ ಮಾತನ್ನು ಕೇಳಿ ಅಮೂಲ್ಯ ನಾಚಿ ನೀರಾಗಿದ್ದಾರೆ.
ಇದನ್ನು ಕೇಳಿ ರಾಕೇಶ್ ಅಡಿಗಗೆ ಕುತೂಹಲ ಹೆಚ್ಚಿತು. ‘ನನ್ನ ತುಟಿ ನೋಡಿ ಜ್ಯೋತಿಷ್ಯ ಹೇಳಿ’ ಎಂದು ಕೇಳಿದರು ರಾಕೇಶ್. ‘ನೀನು ಬೇರೆಯವರನ್ನ ಹೆಚ್ಚು ಇಷ್ಟಪಡುತ್ತೀಯ. ಆದರೆ, ನಿನ್ನನ್ನು ಬೇರೆಯವರು ಇಷ್ಟಪಡಲ್ಲ’ ಎಂದಿದ್ದಾರೆ. ಈ ಸಂಭಾಷಣೆ ಕೇಳಿ ಉಳಿದ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದು, ಗುರೂಜಿ ರಾಕೇಶ್ ಗೆ ಟಾಂಗ್ ಕೊಟ್ಟಿದ್ದನ್ನು ನೋಡಿ ಬೆರಗಾಗಿದ್ದಾರೆ.
ಇನ್ನೂ ಬಿಗ್ ಮನೆಯ ಹೆಣ್ಣುಮಕ್ಕಳಿಗೂ ಗುರೂಜಿ ಫಾದರ್ ಫಿಗರೇ ಆಗಿದ್ದು, ಎಲ್ಲ ಹೆಂಗಳೆಯರು ಗೂರೂಜಿಯನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದಾರೆ. ಟಾಸ್ಕ್ ಗಳ ಜೊತೆ ಅಡುಗೆ ಮಾಡುವಲ್ಲೂ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯ ಸದಸ್ಯರ ಮನಸ್ಸು ಕದಿಯುತ್ತಿದ್ದು, ಗುರೂಜಿ ಎಲ್ಲಾರ ಇಷ್ಟದಂತೆ ಅಡುಗೆ ಮಾಡಿಕೊಡುತ್ತಿದ್ದಾರೆ.