ಟಾಲಿವುಡ್ ಗೆ ಹಾರಿದ ಚುಟು ಚುಟು ಹುಡುಗಿ ಆಶಿಕಾ – ಹೀರೋ ಯಾರು ಗೊತ್ತಾ..?

ನ್ಯೂಸ್ ಆ್ಯರೋ : ಅಪ್ಪಟ ಕನ್ನಡತಿಯಾಗಿರುವ ಆಶಿಕಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗ ಬಳಗವನ್ನು ಹೊಂದಿದ್ದಾರೆ. ಆಕೆಯ ಪೋಸ್ಟ್ ಆಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕನ್ನಡದ ಮಿಲ್ಕ್ ಬ್ಯೂಟಿ ಎಂದರೆ ಎಂದು ಕೂಡ ಕರೆಸಿಕೊಳ್ಳುವ ಅಶಿಕಾ ರಂಗನಾಥ್ 2016ರಲ್ಲಿ ಬಿಡುಗಡೆಯಾಗಿದ್ದ ಕ್ರೇಜಿ ಬಾಯ್ ಎಂಬ ಸಿನಿಮಾದ ಮೂಲಕ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿದ್ದು ಬಳಿಕ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು.

ಆದರೆ ನಟಿ ಆಶಿಕಾ ರಂಗನಾಥ್ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟಿದ್ದು ಮಾತ್ರ Rambo 2 ಸಿನಿಮಾ. ಶರಣ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಆಶಿಕಾ ‘ಚುಟು ಚುಟು’ ಹಾಡಿನ ಮೂಲಕ ಪಡ್ಡೆ ಹುಡುಗರ ಮನಸ್ಸಿಗೆ ಹತ್ತಿರವಾದರು. ಇದೀಗ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ.
ಸುಮಾರು 11 ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಆಶಿಕಾ ತೆಲುಗು ಸಿನಿಮಾ ಒಪ್ಪಿಕೊಂಡಿದ್ದು, ‘ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು.. ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಟಾಲಿವುಡ್ ನಟ ನಂದಮೂರಿ ಕಲ್ಯಾಣ್‌ರಾಮ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ತಮಿಳಿನ ನಟ ಸಿದ್ದಾರ್ಥ್ ಅಭಿನಯದ ಮುಂದಿನ ಚಿತ್ರಕ್ಕಾಗಿ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿದ್ದರು. ಈ ಸುದ್ದಿಯನ್ನು ಸ್ವತಃ ನಟಿ ಹೇಳಿಕೊಂಡಿದ್ದರು. ಇದೀಗ ಆ ಚಿತ್ರದ ಚಿತ್ರೀಕರಣ ಮುಗಿಯುವ ಮುನ್ನವೇ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಇನ್ನೂ ಚಂದನವನದ ಸಾಕಷ್ಟು ಸಿನಿಮಾಗಳಲ್ಲಿ ನಟಿ ತೊಡಗಿಗೊಂಡಿದ್ದು ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ಹಂತದಲ್ಲಿದೆ. ಇದನ್ನು ಹೊರತು ಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸುತ್ತಿದ್ದಾರೆ.