ದೇಶದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಅವತಾರ್ 2 – ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹಿಂದಕ್ಕೆ ಸರಿದ ಕೆಜಿಎಫ್ 2

ನ್ಯೂಸ್ ಆ್ಯರೋ : ಅವತಾರ್ 2 ಬರುವಿಕೆಗೆ ಹಾಲಿವುಡ್ ಮಾತ್ರವಲ್ಲದೆ ಭಾರತದಲ್ಲೂ ಸಿನಿಮಾ ಕ್ರೇಜ್ ಬಹಳ ಜೋರಾಗಿದೆ. ಇದೀಗ ಜೇಮ್ಸ್ ಕ್ಯಾಮರೂನ್ ಹೊಸ ದೃಶ್ಯಕಾವ್ಯ ನೋಡಲು ಸಿನಿಪ್ರಿಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಲು ಸಜ್ಜಾಗಿದೆ.
ಟ್ರೇಲರ್‌ನಲ್ಲಿ ಬಹಳ ಕುತೂಹಲವನ್ನು ಮೂಡಿಸಿದ ಅವತಾರ್ 2 ಈ ಬಾರಿ ನೀರಿನ ಆಳದಲ್ಲಿ ಹೊಸ ಪ್ರಪಂಚ ಅನಾವರಣ ಆಗಲಿದೆ. ದೇಶಾದ್ಯಂತ 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳ ಮೇಲೆ ಸಿನಿಮಾ ಅಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿದ್ದು, ‘KGF- 2’ ದಾಖಲೆಯೊಂದು ಅಳಿಸಿ ಹೋಗಿದೆ. ಭಾರತದಲ್ಲೂ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಕನ್ನಡ ‘KGF- 2’ ಸಿನಿಮಾ ಹೊಸ ದಾಖಲೆಯನ್ನು ಸೃಷ್ಟಿ ಮಾಡಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ರೆಕಾರ್ಡ್‌ನ್ನು ಸೃಷ್ಟಿ ಮಾಡಿತ್ತು. ಇದೀಗ ಅಡ್ವಾನ್ಸ್ ಬುಕ್ಕಿಂಗ್ ವಿಚಾರದಲ್ಲಿ ಈಗ ‘KGF- 2’ ಮೀರಿಸಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಅವತಾರ್ 2 ಹೊಸ ದಾಖಲೆ ಮಾಡಲು ಸಜ್ಜಾಗಿದೆ.
ಇನ್ನು ವರ್ಷಾಂತ್ಯಕ್ಕೆ ಸಿನಿಮಾ ಬರುತ್ತಿರುವುದರಿಂದ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ. ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರದಲ್ಲಿ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಮೂಡಿದೆ. 2009ರಲ್ಲಿ ಸೂಪರ್ ಹಿಟ್ ಆಗಿದ್ದ ‘ಅವತಾರ್’ ಸೀಕ್ವೆಲ್ ನೋಡೋಕೆ ಸಿನಿರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವುದು ಗೊತ್ತಾಗುತ್ತಿದೆ.
ದೇಶದಲ್ಲಿ ಹೊಸ ಹವಾ ಸೃಷ್ಟಿಸಿದ ಅವತಾರ್ 2
ಫಸ್ಟ್ ವೀಕೆಂಡ್‌ನಲ್ಲಿ ‘ಅವತಾರ್- 2’ ಸಿನಿಮಾ ನೋಡೋಕೆ ಈಗಾಗಲೇ 4,41,960 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಈ ಹಿಂದೆ ಇದೇ ರೀತಿಯ ಕ್ರೇಜ್ ಕೆಜಿಎಫ್ 2ಗೆ ಸೃಷ್ಟಿಯಾಗಿತ್ತು. ‘KGF’ ಸೀಕ್ವೆಲ್ ನೋಡೊಕೆ 4,11,000 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದು ದಾಖಲೆಯಾಗಿತ್ತು. ಆ ಮೂಲಕ ಮಲ್ಟಿಫ್ಲೆಕ್ಸ್‌ಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ‘ಅವತಾರ್- 2’ ಬ್ಲಾಕ್‌ಬಸ್ಟರ್ ‘KGF – 2’ನ ಹಿಂದಿಕ್ಕಿದೆ. ಹಾಲಿವುಡ್ ಚಿತ್ರವೊಂದಕ್ಕೆ ಭಾರತದಲ್ಲಿ ಈ ಮಟ್ಟಿಗೆ ಕ್ರೇಜ್ ಇರುವುದು ವಿಶೇಷ.
ಮನಸೋತ ಜೇಮ್ಸ್ ಕ್ಯಾಮರೂನ್ ಕೈಚಳಕ
‘ಅವತಾರ್’ ಪ್ರೀಕ್ವೆಲ್‌ನಲ್ಲಿ ವಿಭಿನ್ನ ಪ್ರಪಂಚವನ್ನು ವಿಚಿತ್ರ ಜೀವಿಗಳನ್ನು ತೋರಿಸಿದ್ದ ಜೇಮ್ಸ್ ಕ್ಯಾಮರೂನ್, ಅವತಾರ್ 2ನಲ್ಲಿ ಭಿನ್ನವಾದ ಜೀವಿಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಬಾರಿ ಸಮುದ್ರದ ಆಳದಲ್ಲಿ ಬಹುತೇಕ ಸನ್ನಿವೇಶಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಮುಂದಿನ ವರ್ಷ ‘ಅವತಾರ್- 3’ ಬಿಡುಗಡೆಗೆ ಡೇಟ್ ಫಿಕ್ಸ್:
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬಹಳ ಹಿಂದೆಯೇ ‘ಅವತಾರ್’ ಸರಣಿಯ 2, 3, 4, 5 ಸಿನಿಮಾಗಳನ್ನು ಮಾಡುವುದಾಗಿ ಹೇಳಿದ್ದರು. ಪಾರ್ಟ್ -2 ಸಕ್ಸಸ್ ಕಂಡರೆ ಮಾತ್ರ 4 ಮತ್ತು 5ನೇ ಸಿನಿಮಾ ಇರುತ್ತೆ ಎಂದು ಇತ್ತೀಚೆಗೆ ಹೇಳಿ ಶಾಕ್ ಕೊಟ್ಟಿದ್ದರು. ಇದೀಗ ಅವತಾರ್ 3 ಸಿನಿಮಾ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.