ಅವತಾರ್ 2ಗೆ ಪ್ರೇರಣೆಯಾಗಿರುವುದು ಹಿಂದೂ ಪುರಾಣ – ಅಚ್ಚರಿ ಸಂಗತಿ ಬಿಚ್ಚಿಟ್ಟ ಜಗಮೆಚ್ಚಿದ ನಿರ್ದೇಶಕ ಕ್ಯಾಮರೂನ್

ನ್ಯೂಸ್ ಆ್ಯರೋ : ಟೈಟಾನಿಕ್ ಎಂಬ ದುರಂತ ಪ್ರೇಮ ಕಥನವನ್ನು ಮಹಾದೃಶ್ಯ ಕಾವ್ಯವನ್ನಾಗಿ ಮಾಡಿ ತೋರಿಸಿ ಇತಿಹಾಸ ನಿರ್ಮಿಸಿದ್ದು ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್. ಇವರು 2009ರಲ್ಲಿ ನಿರ್ದೇಶಿಸಿದ್ದ ಅವತಾರ್ ಒನ್ ಚಿತ್ರ ಮತ್ತೊಮ್ಮೆ ದಾಖಲೆಯ ಪುಟವನ್ನು ಸೇರಿತ್ತು. ಇದೀಗ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರದ ಮೂಲಕ ಮತ್ತೊಮ್ಮೆ ವಿಶ್ವವನ್ನು ಗೆದ್ದಿದ್ದಾರೆ. ಹೊಸ ವರ್ಷದ ಬರುವಿಕೆಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಇದೀಗ ಜಗತ್ತಿನಾದ್ಯಂತ ಸದ್ಯ ಅವತಾರ್ ದಿ ವೇ ಆಫ್ ವಾಟರ್ ಹವಾ ಜೋರಾಗಿದೆ.
ಅವತಾರ್ ದಿ ವೇ ಆಫ್ ವಾಟರ್ ಸಿನಿಮಾದ ಒಂದೊಂದೇ ದೃಶ್ಯಗಳನ್ನು ನೋಡಿದ ಪ್ರೇಕ್ಷಕರು ಜೇಮ್ಸ್ ಕ್ಯಾಮರೂನ್ ನಿರ್ದೇಶನಕ್ಕೆ ಮತ್ತೊಮ್ಮೆ ಮನಸೋತಿದ್ದಾರೆ. ಚಿತ್ರದ ಪ್ರತಿಯೊಂದು ಫ್ರೇಮ್, ಗ್ರಾಫಿಕ್ ಡಿಸೈನ್ ಹೊಸ ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದಲ್ಲಿ ಕನ್ನಡವೂ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಸಿನಿ ಪ್ರೇಮಿಗಳು ಅವತಾರ್ಗೆ ಉಘೇ ಉಘೇ ಅಂತಿದ್ದಾರೆ.
ಸಿನಿಮಾ ನೋಡಿ ಬಂದವರಿಗೆ ಕಾಡುವ ಪ್ರಶ್ನೆ ಎಂದರೆ ಜೇಮ್ಸ್ ಕ್ಯಾಮರೂನ್‌ಗೆ ಇಂತಹ ಯೋಚನೆಗಳು ಎಲ್ಲಿದ್ದ ಬಂತು ಎಂಬುದು. ಇದೀಗ ಈ ಸಿನಿಮಾಗೆ ಸ್ಫೂರ್ತಿಯಾಗಿರುವುದು ಹಿಂದೂ ಪುರಾಣ ಕಥೆಗಳು ಎಂಬುದು ಅಚ್ಚರಿಯಾ ಸಂಗತಿ.
ಕ್ಯಾಮರೂನ್ ಸಿನಿಮಾಗೆ ಪ್ರೇರಣೆಯಾಗಿರುವುದು ಹಿಂದೂ ಸಂಪ್ರದಾಯ:
ನಾನು ಹಿಂದೂ ಸಂಪ್ರದಾಯವನ್ನು ಫಾಲೋ ಮಾಡುವುದಿಲ್ಲ. ಆದರೆ, ನನಗೆ ಹಿಂದೂ ಧರ್ಮದ ನಂಬಿಕೆಗಳ ಬಗ್ಗೆ ತುಂಬಾ ಹಿಂದಿನಿಂದಲೂ ತಿಳಿದಿದೆ. ಅಲ್ಲಿನ ಸಂಪ್ರದಾಯಗಳು ನನಗೆ ಆಕರ್ಷನೀಯ ಎನಿಸುತ್ತದೆ. ನಾನು ಈ ವಿಶಾಲ ಜಗತ್ತಿನಲ್ಲಿರುವ ಎಲ್ಲಾ ಜನರ ಆಧ್ಯಾತ್ಮ ಭಾವನೆಗಳಿಗೆ ಹತ್ತಿರವಾಗುವಂತಹ ಸಿನಿಮಾಗಳನ್ನು ಮಾಡಲು ಸದಾ ಪ್ರಯತ್ನಿಸುತ್ತೇನೆ. ನಾನು ಮಾಡುವ ಸಿನಿಮಾಗಳು ಕ್ರಿಶ್ಚಿಯನ್ನಿಯರಿಗೆ ಮಾತ್ರವೋ, ಯಹೂದಿಗಳಿಗೋ ಅಥವಾ ಹಿಂದೂಗಳಿಗೆ ಮಾತ್ರ ಅನ್ವಯಿಸುವಂತಹದ್ದಾಗಿರೋದಿಲ್ಲ.
ಹಿಂದೂ ಧರ್ಮದ ಪುರಾಣದಲ್ಲಿ ಬರೋ ದೇವಾನು ದೇವತೆಗಳ ಕಥೆಗಳು ಯಾರನ್ನೇ ಆದ್ರೂ ಮಂತ್ರಮುಗ್ಧರಾಗಿ ಮಾಡ್ತಾವೆ. ಆ ಕಥೆಗಳನ್ನು ಕೇಳಿ ಅದೆಷ್ಟೋ ಜನ ತಮ್ಮ ಜೀವನವನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯವೇ ದೇವರು ಅಂತ ಹೆಜ್ಜೆ ಹಾಕ್ತಿದ್ದಾರೆ. ಇನ್ನು ಸಿನಿಮಾ ನಿರ್ದೇಶಕರು ಅದನ್ನು ತಮ್ಮ ವೃತ್ತಿಗೆ ಬಳಸಿಕೊಳ್ತಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಿರ್ದೇಶಕನಾದವನು ಕಲ್ಪನೆಯನ್ನು ಜಗತ್ತನ್ನು ಜನ ಮೆಚ್ಚುವ ರೀತಿಯಲ್ಲಿ ತೋರಿಸಬೇಕು. ಈ ವಿಚಾರದಲ್ಲಿ ಜೇಮ್ಸ್ ಕ್ಯಾಮರಾನ್ ದೈತ್ಯ ಪ್ರತಿಭೆ. ಈ ಪ್ರತಿಭೆಗೆ ಪ್ರೇರಣೆ ಆಗಿರೋದೇ ಹಿಂದೂ ಪುರಾಣ ಅನ್ನೋದೇ ವಿಶೇಷ.