1. Home
  2. Entertainment
  3. ದೊಡ್ಮನೆಯಿಂದ ಹೊರಬಿದ್ದ ಸಾನ್ಯ ಅಯ್ಯರ್ – 6ನೇ ವಾರಕ್ಕೆ ಆಟ ನಿಲ್ಲಿಸಿದ ಪುಟ್ಟಗೌರಿ

ದೊಡ್ಮನೆಯಿಂದ ಹೊರಬಿದ್ದ ಸಾನ್ಯ ಅಯ್ಯರ್ – 6ನೇ ವಾರಕ್ಕೆ ಆಟ ನಿಲ್ಲಿಸಿದ ಪುಟ್ಟಗೌರಿ

ದೊಡ್ಮನೆಯಿಂದ ಹೊರಬಿದ್ದ ಸಾನ್ಯ ಅಯ್ಯರ್ – 6ನೇ ವಾರಕ್ಕೆ ಆಟ ನಿಲ್ಲಿಸಿದ ಪುಟ್ಟಗೌರಿ
0

ನ್ಯೂಸ್ ಆ್ಯರೋ : ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಈ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್‌ ಬಾಸ್ ಓಟಿಟಿ ಸೀಸನ್‌ನಲ್ಲಿ ಎಂಟ್ರಿಯಾಗಿದ್ದ ಸಾನಿಯಾ ಅಯ್ಯರ್‌ ನಂತರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಅವರ ಜತೆ ಟಿವಿ ಬಿಗ್‌ ಬಾಸ್‌ ಶೋಗೆ ಸೆಲೆಕ್ಟ್ ಆಗಿದ್ದರು. ಇದೀಗ ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಶೋನಿಂದ ಹೊರಬಂದಿದ್ದಾರೆ.

ಕಿರುತೆರೆಯಲ್ಲಿ ಪುಟ್ಟಗೌರಿಯಾಗಿ ಖ್ಯಾತಿ ಗಳಿಸಿದ್ದ ಸಾನ್ಯ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮ್ಮ ನೇರ ಮಾತಿನ ಮೂಲಕ ತಮ್ಮದೇ ಶೈಲಿಯಲ್ಲಿ ಆಟವನ್ನು ಆಡಿದ್ದರು. ಓಟಿಟಿ ಹಾಗೂ ಟಿವಿ ಬಿಗ್‌ ಬಾಸ್‌ನ ಮೊದಲ ಮೂರು ವಾರದಲ್ಲಿ ಟಾಸ್ಕ್‌ ಅಲ್ಲದೆ ಎಲ್ಲರ ಜತೆ ಹೊಂದಿಕೊಂಡು ಮನರಂಜನೆ ನೀಡಿ ಕನ್ನಡಿಗರ ಮನ ಗೆದ್ದಿದ್ದರು. ಆದರೆ ಕಳೆದ ಎರಡು ವಾರದಲ್ಲಿ ಸಾನ್ಯ ಅವರು ತಮ್ಮ ಆಟಕ್ಕೆ ಸ್ವಲ್ಪ ಬ್ರೇಕ್ ನೀಡಿ, ಸೈಲೆಂಟ್ ಆಗಿದ್ದರು.

ರೂಪೀ ಜತೆಗಿತ್ತು ಅದ್ಭುತ ಸ್ನೇಹ:

ರೂಪೇಶ್ ಶೆಟ್ಟಿ ಜತೆಗಿನ ಸಾನ್ಯ ಅವರ ಗೆಳೆತನ ಬಿಗ್ ಬಾಸ್ ಮನೆ ಒಳಗಡೆ ಹಾಗೂ ಹೊರಗಡೆಯೂ ಭಾರೀ ಚರ್ಚೆಯಾಗುತ್ತಿತ್ತು. ಇಬ್ಬರ ಜೋಡಿ ನೋಡಲು ಕ್ಯೂಟ್ ಆಗಿತ್ತು.ನಮ್ಮ ನಡುವೆ ಯಾವುದೇ ಪ್ರೇಮವಿಲ್ಲ, ಇದೊಂದು ಫ್ಯೂರ್‌ ಸ್ನೇಹ ಎಂದಿದ್ದರು.

ಈ ವಾರ ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ದಿವ್ಯ ಉರುಡುಗ, ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯ ಅವರು ನಾಮಿನೇಟ್ ಆಗಿದ್ದರು. ಶನಿವಾರ ಅಂದರೆ ನವೆಂಬರ್ 5ರಂದು ನಡೆದ ಸಂಚಿಕೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ದಿವ್ಯ ಉರುಡುಗ ಅವರು ಸೇಫ್ ಆಗಿದ್ದರು. ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಸಾನ್ಯ ಅಯ್ಯರ್ ಅವರ ಜರ್ನಿ ಮುಕ್ತಾಯವಾಗಲಿದೆ.

ದೊಡ್ಮನೆಯಿಂದ ಈಗಾಗಲೇ ಐಶ್ವರ್ಯ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ನಂತರ ಇದೀಗ ಸಾನಿಯಾ ಹೊರ ಬಂದಿದ್ದಾರೆ. ಮುಂದಿನ ವಾರ ಇನ್ಯಾವ ಸ್ಪರ್ಧಿ ಹೊರಬರಬಹುದು ಎಂಬ ಕುತೂಹಲ ಹೆಚ್ಚಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..