1. Home
  2. Entertainment
  3. ನಾನು ಆತನ‌ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ಬಿಗ್ ಬಾಸ್ ಗೆ ಹೋಗ್ಬೇಕು ಎಂದ ನಟಿ‌ ಶರ್ಲಿನ್ – ಈಕೆ ಹೇಳಿದ್ದು ಯಾರಿಗೆ ಗೊತ್ತಾ…!?

ನಾನು ಆತನ‌ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ಬಿಗ್ ಬಾಸ್ ಗೆ ಹೋಗ್ಬೇಕು ಎಂದ ನಟಿ‌ ಶರ್ಲಿನ್ – ಈಕೆ ಹೇಳಿದ್ದು ಯಾರಿಗೆ ಗೊತ್ತಾ…!?

ನಾನು ಆತನ‌ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ಬಿಗ್ ಬಾಸ್ ಗೆ ಹೋಗ್ಬೇಕು ಎಂದ ನಟಿ‌ ಶರ್ಲಿನ್ – ಈಕೆ ಹೇಳಿದ್ದು ಯಾರಿಗೆ ಗೊತ್ತಾ…!?
0

ನ್ಯೂಸ್ ಆ್ಯರೋ : ನಟ, ನಿರ್ದೇಶಕ ಹಾಗೂ ಖ್ಯಾತ ನಿರ್ದೇಶಕಿ ಫರಾ ಖಾನ್​ ಅವರ ಸಹೋದರ ಸಾಜಿದ್​ ಖಾನ್​ ಅವರ ವಿರುದ್ಧ ಹಾಟ್​ ಹಾಗೂ ಹಸಿ ಬಿಸಿ ದೃಶ್ಯಗಳಿಂದಲೇ ಖ್ಯಾತಿ ಪಡೆದಿರುವ ನಟಿ ಶರ್ಲಿನ್​ ಚೋಪ್ರಾ ಮೀಟೂ ಆರೋಪ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಆದರೀಗ ಮತ್ತೊಂದು ಹಸಿಬಿಸಿ ಸುದ್ದಿ ಬಿಟೌನ್ ನಲ್ಲಿ ಸದ್ದು ಮಾಡುತ್ತಿದ್ದು, ಸಾಕಷ್ಟು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿರುವ ಸಿನಿಮಾ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಶರ್ಲಿನ್​ ಚೋಪ್ರಾ ತಿರುಗಿಬಿದಿದ್ದಾರೆ.

ಹೌದು.. ಕಾಮಸೂತ್ರ 3ಡಿ ಸಿನಿಮಾದ ಮೂಲಕ ಸಿನಿ ಪ್ರಿಯರಿಗೆ ಪರಿಚಿತವಾದ ನಟಿ ಶರ್ಲಿನ್​ ಚೋಪ್ರಾ. ಕತೆ ಹಾಗೂ ಪಾತ್ರಕ್ಕೆ ಅಗತ್ಯ ಬಿದ್ದರೆ ಯಾವ ರೀತಿ ಬೇಕಾದರೂ ನಟಿಸುತ್ತೇನೆ ಎಂದು ಹೇಳಿಕೆ ಕೊಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದರೊಂದಿಗೆ ಬಾಲಿವುಡ್​ ಸೇರಿದಂತೆ ದಕ್ಷಿಣ ಸಿನಿ ರಂಗದಲ್ಲೂ ಸಹ ಆಗಾಗ ಪಾತ್ರಕ್ಕಾಗಿ ಸದ್ದು ಮಾಡುವ ಪಲ್ಲಂಗದ ವಿಷಯವಾಗಿಯೂ ಈ ನಟಿ ಗುಡುಗಿದ್ದರು.

ಈ ವಿಷಯದಲ್ಲಿ ಸಾಕಷ್ಟು ಬಾರಿ ಧ್ವನಿ ಎತ್ತಿದ್ದ ನಟಿ ಶರ್ಲಿನ್​ ಚೋಪ್ರಾ ನಿರ್ದೇಶಕ ಸಾಜಿದ್ ಖಾನ್ ವಿರುದ್ದ ಕಿಡಿಕಾರಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಸಾಜಿದ್ ಖಾನ್ ಮೇಲೆ ಸಾಕಷ್ಟು ಮೀಟೂ ಆರೋಪಗಳು ಕೇಳಿ ಬಂದಿದ್ದು, ಅನೇಕ ಹೀರೋಯಿನ್​ಗಳು ನಿರ್ದೇಶಕನ ವಿರುದ್ಧ ತಿರುಗಿಬಿದ್ದಿದ್ದರು.

ಈಗ ಅದೇ ಸಾಜಿದ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 16’ಕ್ಕೆ ಎಂಟ್ರಿ ಕೊಟ್ಟಿದ್ದು. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ಸಲ್ಮಾನ್ ಖಾನ್ ಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಸಾಜಿದ್ ಖಾನ್ ವಿರುದ್ಧ #MeToo ಆರೋಪ ಮಾಡಿದ 9 ಮಹಿಳೆಯರಲ್ಲಿ ಶೆರ್ಲಿನ್ ಚೋಪ್ರಾ ಕೂಡ ಒಬ್ಬರಾಗಿದ್ದು, ನಟಿ ಶೆರ್ಲಿನ್ ಚೋಪ್ರಾ ತಾವೂ ಸಹ ಬಿಗ್ ಬಾಸ್ ಮನೆಗೆ ಹೋಗುವ ಮನವಿ ಮಾಡಿದ್ದಾರೆ. ಅಲ್ಲಿ ಅವರು ಸಾಜಿದ್ ಖಾನ್ ಗುಪ್ತಾಂಗಕ್ಕೆ ರೇಟಿಂಗ್ ಕೊಡುವುದಾಗಿ ಹೇಳಿದ್ದಾರೆ.

“ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿ, ಅವನಿಗೆ ರೇಟಿಂಗ್ ನೀಡಬೇಕು ಎಂದುಕೊಂಡಿದ್ದಾನೆ. ಬದುಕುಳಿದವರು ತನ್ನ ಕಿರುಕುಳಗಾರನೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ಭಾರತ ವೀಕ್ಷಿಸಲಿ. ಸಲ್ಮಾನ್ ಖಾನ್‌ ಈ ಬಗ್ಗೆ ಒಂದು ನಿಲುವು ತೆಗೆದುಕೊಳ್ಳಬೇಕು” ಎಂದು ಶೆರ್ಲಿನ್ ಚೋಪ್ರಾ ಅವರು ಟ್ವೀಟ್ ಮಾಡಿದ್ದಾರೆ.

ಅಲ್ಲದೇ ‘ಸಲ್ಮಾನ್ ಖಾನ್ ಅವರು ಒಂದು ನಿಲುವು ತೆಗೆದುಕೊಳ್ಳಬೇಕು’ ಎಂದು ಕೋರಿದ್ದು, ‘ಸಾಜಿದ್ ಖಾನ್ ನನಗೆ ಗುಪ್ತಾಂಗ ತೋರಿಸಿದ್ದರು. ಅದಕ್ಕೆ 0-10ರ ಅಂತರದಲ್ಲಿ ರೇಟಿಂಗ್ ನೀಡಲು ಹೇಳಿದ್ದರು. ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಬೇಕು ಹಾಗೂ ಅವರ ಗುಪ್ತಾಂಗಕ್ಕೆ ರೇಟಿಂಗ್ ನೀಡಬೇಕು. ಕಿರುಕುಳ ನೀಡುವವನ ಜತೆ ಸಂತ್ರಸ್ತೆಯು ಹೇಗೆ ವರ್ತಿಸುತ್ತಾಳೆ ಎಂಬುದನ್ನು ಭಾರತ ನೋಡಲಿ. ದಯವಿಟ್ಟು ಒಂದು ನಿಲುವು ತೆಗೆದುಕೊಳ್ಳಿ’ ಎಂದು ಶೆರ್ಲಿನ್ ವಿನಂತಿಸಿಕೊಂಡಿದ್ದಾರೆ.

ಇನ್ನೂ ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್ ನಿಂದ ಹೊರಹಾಕುವಂತೆ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ.

MeToo ಆಂದೋಲನದ ಸಂದರ್ಭದಲ್ಲಿ ಹಲವಾರು ಮಹಿಳೆಯರು ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಹಾಗಾಗಿ ಅವರನ್ನು ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಹೊರಹಾಕಬೇಕೆಂದು ಮಲಿವಾಲ್ ಒತ್ತಾಯಿಸಿದ್ದಾರೆ.

“#MeToo ಆಂದೋಲನದ ಸಂದರ್ಭದಲ್ಲಿ ಹತ್ತು ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ, ಅದು ತಪ್ಪು. ನಾನು ಅನುರಾಗ್ ಠಾಕೂರ್ ಅವರಿ ಗೆ ಪತ್ರ ಬರೆದಿದ್ದೇನೆ. ಈ ಕಾರ್ಯಕ್ರಮದಿಂದ ಸಾಜಿದ್ ಖಾನ್ ಅವರನ್ನು ಹೊರಹಾಕಬೇಕು ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..