ಗುರುತೇ ಸಿಗದಂತೆ ಬದಲಾಗಿದ್ದಾರೆ ಬಾಲಿವುಡ್ ಟಾಪ್ ಹೀರೋಯಿನ್ – ಯಾರು ಆ ನಟಿ? ಆಗಿದ್ದೇನು ಗೊತ್ತಾ?

ನ್ಯೂಸ್ ಆ್ಯರೋ : 1990ರಲ್ಲಿ ತೆರೆಗೆ ಬಂದ ಆಶಿಕಿ ಸಿನಿಮಾದ ಮೂಲಕ ಸಿನಿ ರಸಿಕರ ಪಾಲಿನ ಫೆವರೇಟ್ ಆಗಿದ್ದ ನಟಿ ಅನು ಅಗರ್ವಾಲ್ ಇಂದು ಗುರುತೇ ಸಿಗದಂತೆ ಬದಲಾಗಿ ಬಿಟ್ಟಿದ್ದಾರೆ. ಆಶಿಕಿ 2 ಸಿನಿಮಾ ಬಂದು ಹಿಟ್ ಆದ ನಂತರ ಆಶಿಕಿ 3 ಬಗ್ಗೆ ಚರ್ಚೆ ನಡೆಯುತ್ತಿರುವಾಗಲೆ ಮೊದಲ ಸಿನಿಮಾದ ನಟಿ ಮುನ್ನೆಲೆಗೆ ಬಂದಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಖ್ಯಾತ ನಟಿ ಎನಿಸಿಕೊಂಡಿದ್ದ ಅನು ಅಗರ್ವಾಲ್ ಈಗ ಯಾರಿಗೂ ಕೂಡ ಗುರುತೇ ಸಿಗದಂತೆ ಬದಲಾಗಿ ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಸುರಸುಂದರಿಯಾಗಿದ್ದ ನಟಿ, ಆ ಒಂದು ದಿನ ನಡೆದ ದುರ್ಘಟನೆ ಆಕೆಯ ಜೀವನವನ್ನೇ ಬದಲಿಸಿದೆ.
ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಅಮೋಘ ಯಶಸ್ಸು ಕಂಡ ಅನು ಅಗರ್ವಾಲ್ ಅವರಿಗೆ ಅನೇಕ ಅವಕಾಶಗಳು ಸಿಕ್ಕವು. ಆದರೆ ಹೇಳಿಕೊಳ್ಳುವಂತ ಸಕ್ಸಸ್ ಸಿಗಲಿಲ್ಲ. ಈ ಮಧ್ಯೆ 1999 ರಲ್ಲಿ ಅವರಿಗೆ ಅಪಘಾತ ಸಂಭವಿಸಿತು. ಘಟನೆಯಲ್ಲಿ ಸಂಪೂರ್ಣ ಮುಖ ವಿರೂಪಗೊಂಡಿತು, ಹೀಗಾಗಿ ಬಣ್ಣದ ಲೋಕದಿಂದ ದೂರ ಉಳಿದುಬಿಟ್ರು.

ಅಪಘಾತದ ನಂತರ ಅವರು ಕೋಮಾಕ್ಕೆ ಹೋಗಿದ್ದರು. ಸುಮಾರು 29 ದಿನಗಳ ನಂತರ ಪ್ರಜ್ಞೆ ಬಂದ ನಂತರ ಎಲ್ಲವನ್ನೂ ಮರೆತಿದ್ದರು. ನೆನಪಿನ ಶಕ್ತಿ ಕಳೆದುಕೊಂಡಿದ್ದ ನಟಿ ಸುಮಾರು 3 ವರ್ಷಗಳ ಕಾಲ ಚಿಕಿತ್ಸೆಗೆ ಪಡೆದುಕೊಂಡಿದ್ದರು. ಮುಖ ವಿರೂಪಗೊಂಡಿದ್ದ ಕಾರಣ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನು ನಾನು ಎಲ್ಲಿಯೂ ಕಣ್ಮರೆಯಾಗಿಲ್ಲ, ನಾನೇ ಚಿತ್ರಗಳಿಗೆ ಸಹಿ ಮಾಡುವುದನ್ನು ನಿಲ್ಲಿಸಿದೆ ಎಂದಿದ್ದಾರೆ. ಅಪಘಾತ ಸಂಭವಿಸಿ ಇಡೀ ಜೀವನವೇ ಬದಲಾಯಿತು. ನಾನು ಹಲವಾರು ಮೂಳೆ ಮುರಿತಕ್ಕೆ ಒಳಗಾಗಿ, ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.


ನಾನು ನಟನೆಗೆ ಮರಳಲು ಬಯಸಿದರೆ, ನಾನು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಅನೇಕರು ಸಲಹೆ ನೀಡಿದ್ದರು. ಆದರೆ ನಾನು ಬದುಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ, ಸುಂದರವಾಗಿ ಕಾಣಲು ಅಲ್ಲ, ಹೀಗಾಗಿ ನಾನು ನಟನೆಯತ್ತ ಆಕರ್ಷಿತಳಾಗಿರಲಿಲ್ಲ. ನೈಸರ್ಗಿಕವಲ್ಲದ ಯಾವುದಕ್ಕೂ ನಾನು ಆಕರ್ಷಿತಳಾಗುವುದಿಲ್ಲ ಯೋಗ ನನಗೆ ಬಹಳಷ್ಟು ಕಲಿಸಿದೆ, ಅದರಲ್ಲಿ ನಾವು ಮುಖದ ಮೇಲೆ ಮಾತ್ರವಲ್ಲದೆ ಇಡೀ ದೇಹದ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
21ನೇ ವಯಸ್ಸಿಗೆ ಸಿನಿ ಜಗತ್ತಿಗೆ ಕಾಲಿಟ್ಟಿದ್ದ ಅನು ಚಿಕ್ಕ ವಯಸ್ಸಿನಲ್ಲಿ ಸ್ಟಾರ್ ಆದರು. ಒಂದು ಅಪಘಾತ ಅವರನ್ನು ಬಣ್ಣದ ಲೋಕದಿಂದ ದೂರ ಉಳಿಯುವಂತೆ ಮಾಡಿತು. ಸದ್ಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಗಡಿಸಿಕೊಂಡಿರುವ ಅನು ಅಗರ್ವಾಲ್ ಫೌಂಡೇಶನ್ ಒಂದನ್ನು ನಡೆಸುತ್ತಿದ್ದಾರೆ.