1. Home
  2. Entertainment
  3. ಪವಿತ್ರಾ ಲೋಕೇಶ್ ಮತ್ತು ನರೇಶ್ ಬಂಧನದಲ್ಲಿ ಬಿರುಕು – ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಜೋಡಿ ಬೇರೆಯಾಗಿದ್ದೇಕೆ?

ಪವಿತ್ರಾ ಲೋಕೇಶ್ ಮತ್ತು ನರೇಶ್ ಬಂಧನದಲ್ಲಿ ಬಿರುಕು – ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಜೋಡಿ ಬೇರೆಯಾಗಿದ್ದೇಕೆ?

ಪವಿತ್ರಾ ಲೋಕೇಶ್ ಮತ್ತು ನರೇಶ್ ಬಂಧನದಲ್ಲಿ ಬಿರುಕು – ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಜೋಡಿ ಬೇರೆಯಾಗಿದ್ದೇಕೆ?
0

ನ್ಯೂಸ್ ‌ಆ್ಯರೋ‌ : ದಕ್ಷಿಣ ಸಿನಿ ರಂಗದಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದ ನಟಿ ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವಿನ ಜಗಳ ನಾನಾ ವಿವಾದಕ್ಕೆ ಕಾರಣವಾಗಿತ್ತು. ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರನೂ ಆಗಿರುವ ಪೋಷಕ ನಟ ನರೇಶ್ ಹೆಂಡತಿಗೆ ಡಿವೋರ್ಸ್ ನೀಡದೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿತ್ತು. ಅಲ್ಲಿಂದ ಶುರುವಾದ ವಿವಾದ ಮೂವರ ಬಾಳಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ರಮ್ಯಾ ರಘುಪತಿ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ರೆ, ಅತ್ತ ರಮ್ಯಾ ರಘುಪತಿ ಇವರಿಬ್ಬರ ಮೇಲೆ ಪ್ರತ್ಯಾರೋಪ ಮಾಡಿದ್ರು.
ಆದರೆ ಇದೀಗ ಈ ಜೋಡಿಗಳ ಮಧ್ಯೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿ ಟಿ ಟೌನ್ ಅಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಕೂತುಹಲ ಕೆರಳಿಸಿದೆ.

ಹೌದು.. ಟಾಲಿವುಡ್ ನಟ ನರೇಶ್ ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಕೌಟುಂಬಿಕ ಕಹಲ ಬೀದಿಗೆ ಬಂದಿದಲ್ಲದೇ ನರೇಶ್​ ಅವರು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಮೈಸೂರಿನ ಖಾಸಗಿ ಹೋಟೆಲ್‌ನ ಒಂದೇ ರೂಮ್‌ನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದ್ದರು. ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಲಿವ್ ಇನ್ ರಿಲೇಷನ್‌ ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು. ಇದೀಗ ಇಬ್ಬರೂ ಜತೆಯಲ್ಲಿ ಇಲ್ಲ, ಬೇರೆ ಆಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ.

ನರೇಶ್ ಮತ್ತು ತಮ್ಮ ಸಂಬಂಧದ ವದಂತಿ ಬಗ್ಗೆ ಪವಿತ್ರಾ ಈ ಹಿಂದೆ ಹೆಣ್ಣು ಮತ್ತು ಗಂಡು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೆ ಅವರ ಮಧ್ಯೆ ಏನೋ ಇದೆ ಎಂದು ಹೇಳುವುದು ಸರಿಯಲ್ಲ ಎಂದಿದ್ದರು. ನರೇಶ್ ಪತ್ನಿ ಮಾಡಿರುವ ಆಪಾದನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿ ನರೇಶ್ ಅವರ ಪತ್ನಿ ಬಗ್ಗೆ ನನಗೆ ತಿಳಿದಿಲ್ಲ. ಅವರು ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಒಡವೆ, ಆಭರಣಗಳನ್ನು ನಾನು ನರೇಶ್ ಅವರಿಂದ ಪಡೆದಿದ್ದೆ ಎಂಬ ಆಪಾದನೆ ನನ್ನ ಮೇಲೆ ಹೊರಿಸಿದ್ದಾರೆ.

ಆದರೆ ಇದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾನು ಸ್ವತಃ ದುಡಿದು ಒಡವೆಗಳನ್ನು ಮಾಡಿಕೊಂಡಿದ್ದೇನೆ. ಅದಕ್ಕೆ ಸಾಕ್ಷಿಗಳು ಕೂಡ ನನ್ನಲ್ಲಿವೆ. ನರೇಶ್ ಅವರು ಶ್ರೀಮಂತ ವ್ಯಕ್ತಿ ಆಗಿರಬಹುದು. ನನ್ನ ಬಳಿ ಅಷ್ಟಾಗಿ ಹಣ ಇಲ್ಲದಿರಬಹುದು. ಆದರೆ ನಾನು ಕಷ್ಟಪಟ್ಟು ದುಡಿದ ಹಣದಿಂದ ಒಡವೆಗಳನ್ನು ಮಾಡಿಸಿಕೊಂಡಿದ್ದೇನೆ ಎಂದು ಗರಂ ಆಗಿ ಉತ್ತರಿಸಿದ್ದರು. ಆದರೆ ಇದೀಗ ಟಾಲಿವುಡ್ ಅಂಗಳದಲ್ಲಿ ನರೇಶ್ ಮತ್ತು ಪವಿತ್ರಾ ನಡುವಿನ ಸಂಬಂಧ ಹಲಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಪವಿತ್ರಾ ಲೋಕೇಶ್ ಹಾಗೂ ನರೇಶ್‌ಗೆ ಅಷ್ಟಾಗಿ ಸಿನಿಮಾಗಳು ಬರುತ್ತಿಲ್ಲ. ಇಬ್ಬರ ನಡುವೆ ಬಾಂಧವ್ಯ ಇಲ್ಲ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿದ ಸಿನಿಮಾಗಳು ಹಿಟ್ ಆಗಿದ್ದವು. ಇದೀಗ ಇಬ್ಬರಿಗೂ ಆಫರ್ ಕಡಿಮೆಯಾಗಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ. ವಿವಾದಕ್ಕೆ ಸಿಲುಕಿರುವ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಎಂತಲೂ ಸುದ್ದಿಯಾಗಿದೆ. ಆದರೀಗ ಇಬ್ಬರ ಬ್ರೇಕಪ್ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ನರೇಶ್‌ ಹಾಗೂ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಬೇಕಿದೆ.

ಪವಿತ್ರಾ ಲೋಕೇಶ್ ಜತೆಗಿನ ಸ್ನೇಹದ ಬಗ್ಗೆ ಈ ಹಿಂದೆ ನಟ ನರೇಶ್ ಪವಿತ್ರಾ ನನಗೆ ನಾಲ್ಕು ವರ್ಷಗಳಿಂದ ಪರಿಚಯ ಇದುವರೆಗೆ 6 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನ ವೈಯಕ್ತಿಕ ಜೀವನದಲ್ಲಿ ನೊಂದು ಖಿನ್ನತೆಯ ಮಟ್ಟಕ್ಕೆ ಹೋಗಿದ್ದ ವೇಳೆ ಪವಿತ್ರಾ ಲೋಕೇಶ್ ಸಿನೆಮಾ ಸೆಟ್‌ನಲ್ಲಿ ಕಷ್ಟ ಸುಖ ಮಾತನಾಡುವಾಗ ಆತ್ಮೀಯವಾಗಿ ನನಗೆ ಹತ್ತಿರವಾದರು. ಅವರು ನನಗೆ ಉತ್ತಮ ಸ್ನೇಹಿತೆ, ಮಾರ್ಗದರ್ಶಿ. ನಾವು ಮದುವೆಯಾಗಿಲ್ಲ, ಮುಂದೆ ಮದುವೆಯಾಗುತ್ತೇವೋ ಇಲ್ಲ ಸ್ನೇಹಿತರಾಗಿರುತ್ತೇವೋ ನಮ್ಮಿಬ್ಬರ ವೈಯಕ್ತಿಕ ನಿರ್ಧಾರ ಎಂದು ಹೇಳಿಕೆ ನೀಡಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..