1. Home
  2. Entertainment
  3. ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಗೆ ಎದುರಾಯ್ತು ಕಂಟಕ – ಬಾಲಿವುಡ್ ನಟಿ ಹಾಟ್ ಸ್ಟಾರ್ ಮೇಲೆ ಬಿತ್ತು ಕೇಸ್..!!

ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಗೆ ಎದುರಾಯ್ತು ಕಂಟಕ – ಬಾಲಿವುಡ್ ನಟಿ ಹಾಟ್ ಸ್ಟಾರ್ ಮೇಲೆ ಬಿತ್ತು ಕೇಸ್..!!

ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ಗೆ ಎದುರಾಯ್ತು ಕಂಟಕ – ಬಾಲಿವುಡ್ ನಟಿ ಹಾಟ್ ಸ್ಟಾರ್ ಮೇಲೆ ಬಿತ್ತು ಕೇಸ್..!!
0

ನ್ಯೂಸ್ ಆ್ಯರೋ : ನಟಿ ಉರ್ಫಿ ಜಾವೇದ್ ಅವರು ಯಾವಾಗಲೂ ಟ್ರೆಂಡ್​ ಸೃಷ್ಟಿ ಮಾಡುತ್ತಾರೆ. ಅವರ ಪ್ರತಿ ಡ್ರೆಸ್​ ಕೂಡ ನೆಟ್ಟಿಗರ ಕಣ್ಣು ಕುಕ್ಕುತ್ತದೆ. ವಿಚಿತ್ರವಾಗಿ ಬಟ್ಟೆ ಹಾಕುವ ವಿಚಾರದಿಂದ ಅವರು ಅನೇಕ ಬಾರಿ ಟ್ರೋಲ್​ ಆಗಿದ್ದುಂಟು. ಹಾಗಂತ ಅವರು ಟ್ರೋಲ್​ಗಳಿಗೆ ಬಗ್ಗಿಲ್ಲ. ಯಾರು ಏನೇ ಹೇಳಿದರೂ ತಮಗೆ ಬೇಕಾದ ರೀತಿಯಲ್ಲೇ ಬಟ್ಟೆ ಧರಿಸುತ್ತಾರೆ. ತೀರಾ ನಾಜೂಕಿನ ಬಟ್ಟೆ ಧರಿಸಿ ನಡೆದು ಬರುವಾಗ ‘ಹುಷಾರು ಮೇಡಂ.. ಸ್ವಲ್ಪ ಯಾಮಾರಿದರೂ ಅಪಾಯ ಗ್ಯಾರಂಟಿ’ ಅಂಥ ಎಚ್ಚರಿಕೆ ನೀಡಿದವರೂ ಇದ್ದಾರೆ. ಆದರೂ ಉರ್ಫಿ ಜಾವೇದ್​ ತಲೆ ಕೆಡಿಸಿಕೊಳ್ಳುವವರಲ್ಲ.

ಆದರೀಗ ಫ್ಯಾಷನ್ ಐಕಾನ್ ಎಂದೇ ಕರೆಸಿಕೊಳ್ಳುವ ಉರ್ಫಿ ಜಾವೇದ್ ಗೆ ಕಂಟಕ ಎದುರಾಗಿದ್ದು, ಅವರ ವಿರುದ್ಧ ವ್ಯಕ್ತಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಉರ್ಫಿ ಜಾವೇದ್ ಡಾನ್ಸ್ ಮಾಡಿರುವ ”ಹಿ ಹಿ ಯೇ ಮಜೂರಿ’ ಹಾಡು ಬಿಡುಗಡೆಗೊಂಡಿದೆ. ಹಾಡಿನಲ್ಲಿ ಉರ್ಫಿ ಅತ್ಯಂತ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬಟ್ಟೆಗಳು ಅತ್ಯಂತ ಅಶ್ಲೀಲವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಬರೆಯಲಾಗಿದೆ. ಅಕ್ಟೋಬರ್ 11ರಂದು ಈ ಹಾಡು ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗಿದೆ.9 ಮಿಲಿಯನ್ ವೀಕ್ಷಣಿ ಕಂಡಿದೆ.

ಇನ್ನೂ ಇತ್ತೀಚೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೊರುವ ಒಂದು ವಿಡಿಯೋ ಹಂಚಿಕೊಂಡಿದ್ದ ಉರ್ಫಿ, ಅದರಲ್ಲೂ ಅತೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದರು. ಉರ್ಫಿ ಎದೆಯ ಭಾಗದಲ್ಲಿ ಯಾವುದೇ ಬಟ್ಟೆ ಹಾಕದೇ, ಬದಲಿಗೆ ಒಂದು ಕೈ ಅಡ್ಡ ಇಟ್ಟುಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದರು. ಎದುರು ಭಾಗದಲ್ಲಿ ದೀಪ ಹಚ್ಚಿಟ್ಟುಕೊಂಡಿದ್ದು, ಒಂದು ಕೈಯಲ್ಲಿ ಸ್ವೀಟ್ ಹಿಡಿದುಕೊಂಡಿದ್ದರು.

ಅಲ್ಲದೇ ಕೆಲ ತಿಂಗಳ ಹಿಂದೆ, ‘ನನ್ನ ಇಷ್ಟದಂತೆ ನಾನು ಬದುಕುತ್ತಿದ್ದೇನೆ, ಬದುಕುತ್ತೇನೆ, ನನ್ನ ಬಟ್ಟೆಗಳ ಬಗ್ಗೆ ನಿಮಗೆ ಯೋಚನೆ ಬೇಡವೇ ಬೇಡ. ನಾನು ಲಕ್ನೋದಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದಿದ್ದೇನೆ. ಆದರೆ ಆಗಲೂ ನನಗೆ ಬಟ್ಟೆ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಯಾವ ಬಟ್ಟೆ ಇಷ್ಟವೋ ಆ ಬಟ್ಟೆ ಹಾಕಿಕೊಳ್ಳುವುದೇ ನನಗೆ ಖುಷಿ ನೀಡುತ್ತದೆ. ಜನರು ನನ್ನ ಬಗ್ಗೆ ಏನು ಹೇಳ್ತಾರೆ ಅಂತ ತಲೆಕೆಡಿಸಿಕೊಳ್ಳೋದಿಲ್ಲ. ನಾನು ಅನೇಕ ಕ್ಷೇತ್ರಗಳಿಂದ ಸ್ಫೂರ್ತಿ ಪಡೆದು, ಆ ಮೂಲಕ ಬಟ್ಟೆ ವಿನ್ಯಾಸ ಮಾಡಿಕೊಳ್ಳುವೆ. ಹೀಗೆಲ್ಲ ಮಾಡಿ ಮೊದಲು ತಪ್ಪು ಮಾಡುತ್ತಿದ್ದೇನಾ ಅಂತ ಭಯ ಆಗ್ತಿತ್ತು, ಆದರೆ ಈಗ ಹಾಗೆ ಆಗೋದಿಲ್ಲ. ಈಗೆಲ್ಲ ಈ ರೀತಿಯ ವಿಚಾರಗಳು ನನಗೆ ಈಗ ಬೇಸರ ಮಾಡೋದಿಲ್ಲ. ಪಬ್ಲಿಸಿಟಿಗೋಸ್ಕರ ನಾನು ಈ ರೀತಿ ಮಾಡುತ್ತಿಲ್ಲ’ ಎಂದು ಉರ್ಫಿ ಹೇಳಿಕೆ ನೀಡಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..