1. Home
  2. Entertainment
  3. ಮದುವೆಯಾಗಿ ‌ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ತಂದೆ ತಾಯಿಯಾದ ನಯನತಾರಾ ವಿಘ್ನೇಶ್ – ಇದು ಹೇಗೆ ಸಾಧ್ಯ? ಹುಬ್ಬೇರಿಸಿದ ನೆಟ್ಟಿಗರು…!!

ಮದುವೆಯಾಗಿ ‌ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ತಂದೆ ತಾಯಿಯಾದ ನಯನತಾರಾ ವಿಘ್ನೇಶ್ – ಇದು ಹೇಗೆ ಸಾಧ್ಯ? ಹುಬ್ಬೇರಿಸಿದ ನೆಟ್ಟಿಗರು…!!

ಮದುವೆಯಾಗಿ ‌ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ತಂದೆ ತಾಯಿಯಾದ ನಯನತಾರಾ ವಿಘ್ನೇಶ್ – ಇದು ಹೇಗೆ ಸಾಧ್ಯ? ಹುಬ್ಬೇರಿಸಿದ ನೆಟ್ಟಿಗರು…!!
0

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿತ್ಯದ ಅಪ್ಡೇಟ್ ಹಾಗೂ ವೈಯಕ್ತಿಕ ಜೀವನದ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರುವ ನಟಿ ನಯನತಾರಾ ದಪಂತಿ ಈಗ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

ಕಾಲಿವುಡ್ ನ ಖ್ಯಾತ ನಟಿ ನಯನತಾರಾ ಅವರು ಅವಳಿ ಮಕ್ಕಳ ತಾಯಿಯಾಗಿದ್ದಾರೆ. ತಮ್ಮ ಮುದ್ದಿನ ಅವಳಿ ಮಕ್ಕಳ ಹೆಸರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡುವ ಮೂಲಕ ನಟಿ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಪತಿ ವಿಘ್ನೇಶ್ ಶಿವನ್ ಜತೆಗಿನ ಚಿತ್ರ ಹಂಚಿಕೊಂಡಿರುವ ನಟಿ ತಮ್ಮ ಅವಳಿ ಮಕ್ಕಳ ಕುರಿತಾದ ಮಾಹಿತಿಯನ್ನು ಶೇರ್ ಮಾಡಿದ್ದಾರೆ.

ಹೌದು.. ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಅವಳಿ ಮಕ್ಕಳಾಗಿದ್ದು, ಮದುವೆ ಆಗಿ ನಾಲ್ಕೇ ತಿಂಗಳಿಗೆ ತಾವು ಅವಳಿ ಜವಳಿ ಮಕ್ಕಳ ಪಾಲಕರಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ ಫೋಟೋವನ್ನು ಅಪ್ ಲೋಡ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಶಿವನ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಈ ಸಿಹಿ ಸುದ್ದಿಯನ್ನು ನಿರ್ದೇಶಕ ವಿಶ್ಲೇಶ್ ಶಿವನ್ ಅ.9ರಂದು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದು ನಯನತಾರಾ ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದು, ಬಾಡಿಗೆ ತಾಯ್ತನ ಅಥವಾ ದತ್ತು ಪಡೆಯುವ ಮೂಲಕ ದಂಪತಿ ಮಕ್ಕಳನ್ನು ಪಡೆದಿದ್ದು, ಅವಳಿ ಮಕ್ಕಳಿಗೆ ಉಯಿರ್(ಜೀವನ ಎಂದರ್ಥ) ಮತ್ತು ಉಲಗಮ್(ಅಂದರೆ ಪ್ರಪಂಚ) ಎಂದು ನಾಮಕರಣ ಮಾಡಿದ್ದಾರೆ.

ವಿಘ್ನೇಶ್‌ ಶಿವನ್ ಪೋಸ್ಟ್ ಶೇರ್ ಮಾಡಿ “ನಯನ ಮತ್ತು ನಾನು ಅಪ್ಪ, ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಿಮ್ಮಲ್ಲರ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ, ಎಲ್ಲರ ಹಾರೈಕೆಗಳ ಫಲವಾಗಿ ನಮಗೆ ಅವಳಿ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ಇರಲಿ” ಎಂದು ಬರೆದುಕೊಂಡಿದ್ದು, ಈ ಪೋಸ್ಟ್ ಗೆ ಚಿತ್ರರಂಗದವರಿಂದ ಅಭಿಮಾನಿಗಳವರೆಗೆ ನಯನತಾರಾ ದಂಪತಿಗೆ ಶುಭಾಶಯ ತಿಳಿಸಿದ್ದಾರೆ.

ಇನ್ನೂ ಈ ದಂಪತಿಯ ವಿವಾಹ ಜೂನ್ 9ರಂದು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನೇರವೇರಿತ್ತು. ಮದುವೆಗೂ ಮುನ್ನ ವಿಘ್ನೇಶ್ ಶಿವನ್ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ನಯನತಾರ ನನ್ನ ಮಕ್ಕಳ ತಾಯಿ ಆಗಲಿದ್ದಾರೆ ಎಂದು ಸುಳಿವು ನೀಡಿದ್ದರು. ಅಲ್ಲಿಗೆ ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಗಲಿದ್ದಾರೆ ಎಂಬುದು ದೃಢವಾಗಿತ್ತು. ಅದರಂತೆ ಕಳೆದ ಜೂನ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಇವರು ಹಸೆಮಣೆ ಏರಿದ್ದರು. ತಾವಿಷ್ಟ ಪಟ್ಟ ಗಣ್ಯರು ಈ ಮದುವೆಗೆ ಸಾಕ್ಷಿ ಆಗಿದ್ಧರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..