1. Home
  2. Entertainment
  3. Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ
0

ನ್ಯೂಸ್ ಆ್ಯರೋ‌ : ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರನ್ನು ಕೊಲ್ಲುವುದಾಗಿ ಅಯೋಧ್ಯೆಯ ಮಠಾಧೀಶರು ಬೆದರಿಕೆ ಹಾಕಿದ್ದಾರೆ.

ಶಾರುಖ್ ಖಾನ್ ನಟನೆಯ ‘ಪಠಾನ್’ ಚಿತ್ರದ ‘ಬೇಶರಾಮ್ ರಂಗ್’ ಹಾಡಿನ ಸುತ್ತಲಿನ ಇಡೀ ವಿವಾದದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನ ನೀಡಲಾಗಿದೆ, ಇದರಲ್ಲಿ ಅವರು ಬಿಕಿನಿ ಧರಿಸಿದ ದೀಪಿಕಾ ಪಡುಕೋಣೆ ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದು, ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದಕ್ಕೆ ಹಲವಾರು ಗುಂಪುಗಳು ಮತ್ತು ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ, ‘ಶಾರುಖ್ ಅವರನ್ನು ಎಂದಾದರೂ ಭೇಟಿಯಾದರೆ ಅವರನ್ನ ಜೀವಂತವಾಗಿ ಸುಡುವ ಮಟ್ಟಕ್ಕೆ ಹೋಗುತ್ತೇನೆ’ ಎಂದು ಹೇಳಿದರು ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

ಇದೇ ವೇಳೆ ‘ಬೇಶರಮ್ ರಂಗ್’ ಹಾಡಿನ ತಯಾರಕರು ಕೇಸರಿ ಬಣ್ಣವನ್ನು ಬಳಸುವ ಮೂಲಕ ಹಿಂದೂ ಧರ್ಮಕ್ಕೆ ಅವಮಾನಿಸಿದ್ದಾರೆ. ‘ನಮ್ಮ ಸನಾತನ ಧರ್ಮದ ಜನರು ಈ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಸುಟ್ಟಿದ್ದೇವೆ. ನಾನು ಜಿಹಾದಿ ಶಾರುಖ್ ಖಾನ್ ಭೇಟಿ ಮಾಡಿದರೆ, ನಾನು ಅವರನ್ನ ಜೀವಂತವಾಗಿ ಸುಡುತ್ತೇನೆ’ ಎಂದು ಹೇಳಿರುವುದಾಗಿ ಮಾಧ್ಯಮ ತನ್ನ ವರದಿಯಲ್ಲಿ ಹೇಳಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..