1. Home
  2. Entertainment
  3. ಚಿತ್ರರಂಗದಿಂದ ದೂರ ಇಳಿಯಲಿದ್ದಾರಂತೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ! ಕಾರಣ ಏನು ಗೊತ್ತಾ ?

ಚಿತ್ರರಂಗದಿಂದ ದೂರ ಇಳಿಯಲಿದ್ದಾರಂತೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ! ಕಾರಣ ಏನು ಗೊತ್ತಾ ?

ಚಿತ್ರರಂಗದಿಂದ ದೂರ ಇಳಿಯಲಿದ್ದಾರಂತೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ! ಕಾರಣ ಏನು ಗೊತ್ತಾ ?
0

ನ್ಯೂಸ್ ಆ್ಯರೋ‌ : ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನೆಮಾ ಬಾಯ್ಕಾಟ್ ಬೆದರಿಕೆಗೆ ಅದು ಬಳಲಿ ಬೆಂಡಾಯಿತು. ನಿರೀಕ್ಷೆ ಮಟ್ಟ ತಲುಪುವುದು ಇರಲಿ, ಹಾಕಿದ ಬಂಡವಾಳ ಕೂಡ ವಾಪಸ್ಸು ಆಗಿಲ್ಲ. ಬಾಕ್ಸ್ ಆಫೀಸಿನಲ್ಲಿಯೂ ಅಂದುಕೊಂಡಷ್ಟು ಗಳಿಕೆ ಮಾಡಲಿಲ್ಲ . ಈ ಹಿಂದೆ ಅಸಹಿಷ್ಣತೆ ಬಗ್ಗೆ ಆಮೀರ್ ನೀಡಿದ್ದ ಹೇಳಿಕೆಯೇ ಇಷ್ಟೇಲ್ಲಾ ಪಜೀತಿಗೆ ಕಾರಣವಾಗಿದ್ದು, ಈ ಸೋಲಿನ ಬೆನ್ನಲ್ಲೇ ಆಮಿರ್​ ಖಾನ್​ ಮಹತ್ತರವಾದ ನಿರ್ಧಾರವೊಂದನ್ನು ಮಾಡಿದ್ದಾರೆ.

ಹೌದು ನಟ ಆಮೀರ್ ಖಾನ್ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ನೀಡಿದ್ದು, ನಟನೆಯಿಂದ ಕೆಲ ಸಮಯದವರೆಗೆ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಟ ಆಮಿರ್​ ಖಾನ್ ಗೆ ಸದ್ಯಕ್ಕೆ ಯಾಕೋ ಟೈಮ್​ ಕೈ ಕೊಟ್ಟಿದ್ದು, ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ. ವೃತ್ತಿ ಬದುಕಿನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಒಂದರ ಮೇಲೊಂದು ಸೋಲು ಕಾಣುತ್ತಿದ್ದಾರೆ. ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಆಮಿರ್​ ಖಾನ್​ ಕೂಡ ಬಣ್ಣದ ಲೋಕದಲ್ಲಿ ಹಲವು ಬಾರಿ ಏಳು-ಬೀಳುಗಳನ್ನು ಕಂಡಿದ್ದಾರೆ. ಆದರೆ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಸೋಲು ಅವರನ್ನು ಚಿಂತೆಗೀಡು ಮಾಡಿದ್ದು,ಸಿನಿಮಾ ಚೆನ್ನಾಗಿಲ್ಲದೇ ಸೋತರೆ ಒಂದು ಅರ್ಥ ಇರುತ್ತದೆ. ಆದರೆ ಬಹಿಷ್ಕಾರದ ಕಾರಣದಿಂದ ಸಿನಿಮಾ ಸೋತಿರುವುದು ಅವರಿಗೆ ಸಖತ್​ ಬೇಸರ ತರಿಸಿದೆ. ತುಂಬಾ ನಿರೀಕ್ಷೆಯನ್ನಿಟ್ಟುಕೊಂಡಿದ್ದ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ಬಹಿಷ್ಕಾರದ ಬಿಸಿಯಿಂದ ಹೀನಾಯವಾಗಿ ಸೋತಿದ್ದು, ಹಿಂದೊಮ್ಮೆ ಆಮೀರ್ ಖಾನ್ ಆಡಿದ್ದ ಭಾರತ ವಿರೋಧಿ ಮಾತುಗಳು ಅವರನ್ನು ಬೆಂಬಿಡದಂತೆ ಕಾಡುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲೂ ಜನರು ಆಮಿರ್ ವಿರುದ್ಧ ದ್ವೇಷ ಕಾರುತ್ತಿದ್ದು, ಈ ಬೆಳವಣಿಗೆಗಳಿಂದ ಬೇಸೆತ್ತ ಆಮಿರ್ ಖಾನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಆಮಿರ್ ಖಾನ್ ‘ನಾನು ನಟನೆಯಲ್ಲಿ ತೊಡಗಿಸಿಕೊಂಡಾಗ ನನಗೆ ಇನ್ನೇನೂ ನೆನಪಾಗುವುದಿಲ್ಲ. ಅದರಲ್ಲೇ ಕಳೆದು ಹೋಗುತ್ತೇನೆ. ಲಾಲ್ ಸಿಂಗ್ ಛಡ್ಡಾ ಸಿನಿಮಾ ಆದ ಬಳಿಕ ನಾನು ಚಾಂಪಿಯನ್ ಎಂಬ ಸಿನಿಮಾ ಮಾಡಬೇಕಿತ್ತು. ಅದ್ಭುತ ಕಥೆಯನ್ನೊಳಗೊಂಡ ಸಿನಿಮಾ ಅದಾಗಿತ್ತು. ಹೃದಯಸ್ಪರ್ಶಿ ಲವ್ ಸೋರಿ ಆಗಿತ್ತು. ಆ ಸಿನಿಮಾ ನಿರ್ಮಾಣ ಮಾಡಿ, ನಟಿಸಬೇಕು ಎಂದುಕೊಂಡಿದ್ದಾರೆ. ಆದರೆ ನನ್ನ ನಿರ್ಧಾರ ಬದಲಾಗಿದೆ. ನಟನೆಯಿಂದ ಕೆಲ ಕಾಲ ದೂರ ಉಳಿದು ಕುಟುಂಬದೊಂದಿಗೆ ಕಾಲ ಕಳೆಯಬೇಕು ಎಂದುಕೊಂಡಿದ್ದೇನೆ. ಮಕ್ಕಳೊಂದಿಗೆ, ತಾಯಿಯೊಂದಿಗೆ ಸಮಯ ಕಳೆಯುತೇನೆ’ ಎಂದು ಹೇಳಿದ್ದಾರೆ.

ನಾನು 35 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕೆಲಸ ಹೊರತು ಪಡಿಸಿ ಇನ್ನೆಲ್ಲೂ ಮನಸನ್ನು ಕೇಂದ್ರೀಕರಿಸಲಿಲ್ಲ. ಈಗ ನನ್ನ ಕುಟುಂಬದ ಕಡೆ ಗಮನ ಕೊಡುವ ಸಮಯ ಬಂದಿದೆ. ಇಷ್ಟುದಿನ ಇದ್ದುದಕ್ಕಿಂತಲೂ ವಿಭಿನ್ನವಾದ ಜೀವನ ನಡೆಸಲು ಮನಸಾಗಿದೆ. ಮುಂದಿನ ಒಂದರಿಂದ ಒಂದೂವರೆ ವರ್ಷ ನಾನು ನಟನೆಯಲ್ಲಿ ಇರುವುದಿಲ್ಲ’ ಎಂದು ಆಮೀರ್ ಖಾನ್ ತಿಳಿಸಿದ್ದಾರೆ.

ಇನ್ನೂ ಈ ಹಿಂದೆ ಕೂಡ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ಅವರಿಗೆ ಡಿಪ್ರೆಷನ್​ ಶುರುವಾಗಿದ್ದು, ಅವರು ಒಂಟಿಯಾಗಿ ಇರುತ್ತಿದ್ದಾರೆ. ಮಾಧ್ಯಮದವರ ಫೋನ್​ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದೆಲ್ಲ ಗಾಸಿಪ್​ ಹಬ್ಬಿತ್ತು.