1. Home
  2. Entertainment
  3. ಧನುಷ್ ಮತ್ತು ಐಶ್ವರ್ಯ ಡೈವೋರ್ಸ್ ವಾಪಾಸ್ – ರಜನಿಕಾಂತ್ ಸರ್ಕಸ್ ಸಫಲ; ಮತ್ತೆ ಕೂಡಿಬಾಳೋಕೆ ಸಜ್ಜಾದ ಸ್ಟಾರ್ ಜೋಡಿ‌..!!

ಧನುಷ್ ಮತ್ತು ಐಶ್ವರ್ಯ ಡೈವೋರ್ಸ್ ವಾಪಾಸ್ – ರಜನಿಕಾಂತ್ ಸರ್ಕಸ್ ಸಫಲ; ಮತ್ತೆ ಕೂಡಿಬಾಳೋಕೆ ಸಜ್ಜಾದ ಸ್ಟಾರ್ ಜೋಡಿ‌..!!

ಧನುಷ್ ಮತ್ತು ಐಶ್ವರ್ಯ ಡೈವೋರ್ಸ್ ವಾಪಾಸ್ – ರಜನಿಕಾಂತ್ ಸರ್ಕಸ್ ಸಫಲ; ಮತ್ತೆ ಕೂಡಿಬಾಳೋಕೆ ಸಜ್ಜಾದ ಸ್ಟಾರ್ ಜೋಡಿ‌..!!
0

ನ್ಯೂಸ್ ಆ್ಯರೋ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ತಮಿಳು ನಟ ಧನುಷ್ ವಿವಾಹ ವಿಚ್ಛೇದನ ಕುರಿತಾದ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಹಲವು ಬಾರಿ ಈ ಜೋಡಿಯ ವಿಚ್ಛೇದನದ ಸುದ್ದಿ ಸಾಕಷ್ಟು ಸದ್ದು ಮಾಡಿದ್ದು, ಕಳೆದ ಜನವರಿ 18ರಂದು ’18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿ, ನಾವಿಬ್ಬರು ಬೇರೆಯಾಗುತ್ತಿದ್ದೇವೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ವಿಚ್ಛೇದನ ಪಡೆದ ನಂತರ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಸಂದರ್ಭ ಬಂದಿದ್ದರೂ, ಒಟ್ಟಿಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕಿತ್ತು ಈ ಜೋಡಿ. ಆದರೆ, ಸಿನಿಮಾ ಸಂಬಂಧಿ ಕೆಲಸಗಳಿಗೆ ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡಿದ್ದರು. ಮಕ್ಕಳ ಜೊತೆಯೂ ಧನುಷ್ ಹಲವು ಬಾರಿ ಕಾಣಿಸಿಕೊಂಡಿದ್ದರು. ಐಶ್ವರ್ಯ ಸಿನಿಮಾ ಮಾಡುವಲ್ಲಿ ಬ್ಯುಸಿಯಾಗಿದ್ದರೆ, ಧನುಷ್ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆದರೀಗ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ತಮ್ಮ ಸಂಸಾರಿಕ ಜೀವನಕ್ಕೆ ಸಂಬಂಧಿಸಿದಂತೆ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು, ಈ ಜೋಡಿ ಡಿವೋರ್ಸ್ ಹಿಂಪಡೆಯುವ ಮೂಲಕ ಮತ್ತೆ ಕೂಡಿ ಬಾಳಲು ನಿರ್ಧರಿಸಿದ್ದು, ಆಗಿದ್ದೆಲ್ಲವನ್ನೂ ಮರೆತು ಮತ್ತೆ ಒಂದಾಗುವ ಯೋಚನೆ ಮಾಡಿದೆ ಎನ್ನಲಾಗಿದೆ. ಈ ಬೆಳವಣಿಗೆಗೆ ರಜನಿಕಾಂತ್ ಮೂಲ ಕಾರಣವಾಗಿದ್ದು, ಮಗಳು – ಅಳಿಯನನ್ನು ಕೂರಿಸಿಕೊಂಡು ತಲೈವಾ​ ಬುದ್ಧಿ ಹೇಳಿದ್ದಾರೆ. ಅಲ್ಲದೇ, ಮಕ್ಕಳ ಭವಿಷ್ಯ ಗಮದಲ್ಲಿರಿಸಿಕೊಂಡು ತಿಳಿ ಹೇಳಿದ್ದು, ರಜನಿ ಸಂಧಾನಕ್ಕೆ ಮಣಿದ ಇಬ್ಬರೂ ಒಪ್ಪಿಕೊಂಡು ಮತ್ತೆ ಒಂದಾಗಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಇಂಥದ್ದೊಂದು ಸುದ್ದಿ ಕಾಲಿವುಡ್‌ ನಲ್ಲಿ ಹರಿದಾಡುತ್ತಿದ್ದು, ಈ ವಿಚಾರ ಅಭಿಮಾನಿಗಳಿಗೆ ಖುಷಿ ತಂದಿದೆ. ಅಲ್ಲದೇ ಆದಷ್ಟು ಬೇಗ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲಿ ಎಂದು ಹಲವರು ಶುಭ ಕೋರಿದ್ದಾರೆ.

ಐಶ್ವರ್ಯಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ತಿಳಿದು ಬೇಸರ ಮಾಡಿಕೊಂಡಿದ್ದ ರಜನಿಕಾಂತ್ ಈ ಹಿಂದೆ ಕೂಡ ತಮ್ಮ ಮಗಳ ಸಂಸಾರವನ್ನು ಸರಿ ಪಡಿಸಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಅದು ಕೈಗೊಂಡಿರಲಿಲ್ಲ. ಇದೀಗ ಅವರ ಕನಸು ನನಸಾಗಿದ್ದು, ಮಗಳ ಜೀವನವನ್ನು ಸರಿದೂಗಿಸುವಲ್ಲಿ ರಜನಿ ಯಶಸ್ವಿಯಾಗಿದ್ದಾರೆ. ಅವರ ನಿವಾಸದಲ್ಲಿ ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ಮಾತುಕತೆ ನಡೆಸಿ, ಮತ್ತೆ ಇಬ್ಬರು ಒಟ್ಟಿಗೆ ಬಾಳುವಂತೆ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ನನ್ನ ‘ಕಾದಲ್ ಕೊಂಡೇನ್’ ಸಿನಿಮಾದ ಸಕ್ಸಸ್ ಮೀಟ್ ಸಮಾರಂಭದಲ್ಲಿ ಈ ಜೋಡಿ ಮೀಟ್ ಆಗಿದ್ದರು. ಆ ಬಳಿಕ ಸ್ನೇಹಿತರಾದ ಧನುಷ್ ಮತ್ತು ಐಶ್ವರ್ಯ ಮಧ್ಯೆ ಪ್ರೀತಿ ಚಿಗುರಿತು. ಎರಡು ವರ್ಷಗಳಲ್ಲಿ ಧನುಷ್ ಹಾಗೂ ಐಶ್ವರ್ಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 2004ರ ನವೆಂಬರ್ ತಿಂಗಳಿನಲ್ಲಿ ಧನುಷ್ ಮತ್ತು ಐಶ್ವರ್ಯ ಅವರ ವಿವಾಹ ಮಹೋತ್ಸವ ಜರುಗಿತು. ಈ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬ ಇಬ್ಬರು ಮಕ್ಕಳಿದ್ದು, ಐಶ್ವರ್ಯಾ ವಯಸ್ಸಿನಲ್ಲಿ ಧನುಷ್‌ಗಿಂತಲೂ ಎರಡು ವರ್ಷ ಹಿರಿಯರು.

ಇನ್ನೂ ಕಳೆದ ಜನವರಿ 18ರಂದು, ”18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ..’ ಎಂದಿದ್ದರು.

ಆದರೀಗ ಧನುಷ್ ಐಶ್ವರ್ಯಾ ರಜನಿಕಾಂತ್ ವಿಚ್ಛೇದನದಿಂದ ಹಿಂದೆ ಸರಿದಿದ್ದು, 9 ತಿಂಗಳ ನಂತರ ಮತ್ತೆ ಸ್ಟಾರ್ ದಂಪತಿ ಒಂದಾಗಲಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..