ಕೋಟಿ ಕೋಟಿ ಗಳಿಸಿದ ಕಾಂತಾರ: ನಿರ್ದೇಶಕರಿಗೆ ಲಾಭದಲ್ಲಿ ಎಷ್ಟು ಪಾಲು ಗೊತ್ತಾ?

ನ್ಯೂಸ್ ಆ್ಯರೋ: ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಒಂದರ ಮೇಲೊಂದು ಹಿಟ್ ಸಿನಿಮಾಗಳು ತೆರೆ ಕಾಣುತ್ತಿದ್ದು, ಇದೀಗ ಕಾಂತಾರ ಸಿನಿಮಾ ಕೋಟಿ ಕೋಟಿ ಕಲೆಕ್ಷನತ್ತ ಮುನ್ನುಗ್ಗುತ್ತಿದೆ. ಇನ್ನೂಸಿನಿಮಾ ಗಳಿಸಿದ ಹಣದಲ್ಲಿ ಯಾರಿಗೆಲ್ಲ ಪಾಲು ಸೇರಿದೆ, ಕಾಂತಾರ ಸಿನಿಮಾದ ಬಿಸಿನೆಸ್ ಯಾವ ರೀತಿ ನಡೆದಿದೆ. ಒಟ್ಟು ವಿತರಕ ಎಷ್ಟು ಹಣವನ್ನು ಗಳಿಸಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ..
ಮೂರು ಹಂತದಲ್ಲಿ ನಡೆಯುತ್ತೆ ಸಿನಿಮಾ ಬಿಸಿನೆಸ್:
1. ನಿರ್ಮಾಪಕ:
ಸಿನಿಮಾಗೆ ಸಂಪೂರ್ಣ ಬಂಡವಾಳ ಹಾಕುವ ಹೊಣೆ ನಿರ್ಮಾಪಕನದ್ದು. ನಿರ್ದೇಶಕ, ನಟ–ನಟಿಯರಿಂದ ಹಿಡಿದು ಸಹ ಕಲಾವಿದರಿಗೆ, ಚಿತ್ರದ ಸೆಟ್ ತಯಾರಿಕೆಗೆ, ಟೆಕ್ನಿಶಿಯನ್ಸ್‌ನ ಸಂಬಳ ಸೇರಿದಂತೆ ಒಟ್ಟು ಚಿತ್ರದ ಪ್ರಾರಂಭದಿಂದ ಕೊನೆಯವರೆಗೆ ನಡೆಯುವ ಪ್ರಚಾರದವರೆಗ ಹಣ ಹಾಕುವ ಜವಾಬ್ದಾರಿ ನಿರ್ಮಾಪಕರದ್ದು. ಇವರು ಹಾಕುವ ಒಟ್ಟು ಹಣವನ್ನು ಸಿನಿಮಾದ ಬಜೆಟ್ ಎಂದು ಕರೆಯಲಾಗುತ್ತದೆ.
ಇನ್ನೂ ಕಾಂತಾರ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್ಸ್‌ನ ವಿಜಯ್ ಕಿರಗಂದೂರು ಅವರು. ಕಾಂತಾರ ನಿರ್ಮಾಣ ಮಾಡಲು 10ರಿಂದ 20 ಕೋಟಿಯವರಗೆ ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
2. ವಿತರಕರು:
ಸಿನಿಮಾ ಉದ್ಯಮದಲ್ಲಿ ಎರಡನೇ ಹಂತ ಅಂದರೆ ವಿತರಕರು. ಕೋಟಿ ಹಣವನ್ನು ಹಾಕಿ ನಿರ್ಮಾಣ ಮಾಡಿರುವ ಚಿತ್ರವನ್ನು ನಿರ್ಮಾಪಕರು ತಮ್ಮ ಚಿತ್ರಕ್ಕೆ ಇತ್ತಿಷ್ಟು ಹಣವನ್ನು ನಿಗದಿ ಮಾಡಿ ವಿತರಕರಿಗೆ ಮಾರಾಟ ಮಾಡುತ್ತಾರೆ. ಈ ಹಂತವನ್ನು ಥಿಯೇಟ್ರಿಕಲ್ಸ್ ರೈಟ್ಸ್ ಎಂದು ಕರೆಯುತ್ತಾರೆ. ಅಂದರೆ ತಾವು ನಿರ್ಮಾಣ ಮಾಡಿದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನೀಡುವ ಹಕ್ಕು. ಕಾಂತಾರದ ಥಿಯೇಟ್ರಿಕಲ್ಸ್ ಹಕ್ಕನ್ನ ಕೆಆರ್‌ಜಿ ಸ್ಟೂಡೀಸ್‌ಗೆ ಮಾರಾಟ ಮಾಡಿದ್ದಾರೆ. ಈ ಸ್ಟುಡಿಯೋವನ್ನು ಸ್ವತಃ ವಿಜಯ್ ಕಿರಗಂದೂರು ಅವರ ತಮ್ಮ ಕಾರ್ತೀಕ್ ಗೌಡ ಎಂಬವರು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾವನ್ನು ವಿಜಯ್ ಕಿರಗಂದೂರು ಅವರು ತಮ್ಮ ಸಹೋದರನಿಗೆ ಮಾರಾಟ ಮಾಡಿದ ಹಾಗೇ ಆಯಿತು. ಇನ್ನೂ ಸಿನಿಮಾವನ್ನು ಎಷ್ಟಕ್ಕೆ ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ಎಲ್ಲೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇಲ್ಲಿ ಮೂರನೇ ವ್ಯಕ್ತಿಯ ಮೂಲಕನೂ ಚಿತ್ರವನ್ನು ಮಾರಾಟ ಮಾಡಬಹುದು. ಆದರೆ ಇಲ್ಲಿ ಲಾಭ–ನಷ್ಟ ಮೂರನೇ ವ್ಯಕ್ತಿಯ ಮೂಲಕ ನಡೆಯುತ್ತದೆ.
3. ಪ್ರದರ್ಶಕರು:
ಮೂರನೇ ಹಂತದಲ್ಲಿ ಬರುವ ವ್ಯಕ್ತಿ ಎಂದರೆ ಥಿಯೇಟರ್ ಮಾಲೀಕರು. ನಿರ್ಮಾಪಕರಿಂದ ಸಿನಿಮಾ ಖರೀದಿಸಿದ ವಿತರಕರು ಅದನ್ನು ಪ್ರದರ್ಶಿಸಲು ಥಿಯೇಟರ್ ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಥಿಯೇಟರ್‌ಗಳಲ್ಲಿ ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಎಂಬ ಎರಡು ವಿಧಗಳಿವೆ. ಟಿಕೆಟ್ ದರರೆ 100 ರೂಪಾಯಿ ಆಗಿದ್ದರೆ, ಅದರಲ್ಲಿ ₹30 ತೆರಿಗೆ ರಾಜ್ಯ ಸರ್ಕಾರಕ್ಕೆ ಪಾವತಿ ಆಗುತ್ತೆ. ಉಳಿದ ಹಣದಲ್ಲಿ ಒಂದಷ್ಟು ಶೇಖಡವಾರು ವಿತರಕರಿಗೆ ಮರುಪಾವತಿಯಾಗುತ್ತೆ. ತೆರಿಗೆ ಕಟ್ ಆಗಿ ಉಳಿದ ಶೇಕಡವಾರು 60ರಷ್ಟು ಪಾಲು ವಿತರಕರಿಗೆ ಸೇರುತ್ತೆ. ಉಳಿದ ಹಣ ಥಿಯೇಟರ್ ಮಾಲೀಕರ ಪಾಲಾಗುತ್ತೆ.
ಕಾಂತಾರದಲ್ಲಿ ಕೆಆರ್‌ಜಿ ಸ್ಟುಡಿಯೋ ಬಾಚಿಕೊಂಡ ಹಣ ಎಷ್ಟು ಗೊತ್ತಾ?
ಕಾಂತಾರ ಜಗತ್ತಿನಾದ್ಯಂತ 250 ಕೋಟಿ ಕಲೆಕ್ಷನ್ ಆಗಿ ಇನ್ನೂ ಮುನ್ನುಗ್ಗುತ್ತಿದೆ. ಇದರಲ್ಲಿ ಶೇ 30ರಷ್ಟು ಮನರಂಜನಾ ತೆರಿಗೆ ಅಂತಾ ಹೇಳಿ 75 ಕೋಟಿ ಕಟ್ ಆಗಬಹುದು. ಇನ್ನುಳಿದ 175 ಕೋಟಿ ನಿವ್ವಳ ಗಳಿಕೆ. ಇದರಲ್ಲಿ ಶೇ 60 ವಿತರಕರಿಗೆ ಸೇರುತ್ತೆ ಅಂದರೆ ಸುಮಾರು 105 ಕೋಟಿ ರೂ ಕೆಆರ್‌ಜಿ ಸ್ಟುಡಿಯೋಗೆ ಹೋಗಬಹುದು. ಇನ್ನೂ ವಿಜಯ್ ಕಿರಗಂದೂರು ಅವರು ಎಷ್ಟು ಕೋಟಿಗೆ ಸಿನಿಮಾವನ್ನು ಮಾರಾಟ ಮಾಡಿದರೆ ಎಂದು ಬಿಟ್ಟು ಕೊಟ್ಟರೆ ಕೆಆರ್‌ಜಿ ಸ್ಟುಡಿಯೋಗೆ ಎಷ್ಟು ಲಾಭವಾಗಿದೆ ಎಂಬುದು ತಿಳಿಯುತ್ತದೆ.
ಸ್ಯಾಟಲೈಟ್, ಡಿಜಿಟಲ್ ಹಾಗೂ ಮ್ಯೂಸಿಕ್ ಹಕ್ಕುಗಳಿಂದಲೂ ಹಣ:
ಸ್ಯಾಟಲೈಟ್ ರೈಟ್ಸ್ ಎಂದರೆ ಟಿವಿಗಳಲ್ಲಿ ಪ್ರದರ್ಶನ ಕಾಣಲು ಪಡೆಯುವ ಹಕ್ಕು. ಈ ಹಕ್ಕನ್ನು ಸ್ಟಾರ್ ಸುವರ್ಣ ಪಡೆದುಕೊಂಡಿದ್ದು, ಎಷ್ಟು ಕೋಟಿಗೆ ಅಂತಾ ಎಲ್ಲೂ ಬಿಟ್ಟುಕೊಟ್ಟಿಲ್ಲ.
ಡಿಜಿಟಲ್ ರೈಟ್ಸ್ ಎಂದರೆ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಜೀ5, ಜಿಯೋ ಸಿನಿಮಾ ಮುಂತಾದ ಓಟಿಟಿ ಫಾರ್ಮಾಟ್‌ನಲ್ಲಿ ಪ್ರದರ್ಶನ ಕಾಣುವ ಹಕ್ಕು. ಈ ಹಕ್ಕನ್ನು ಅಮೆಜಾನ್ ಫ್ರೈಮ್‌ಗೆ ಮಾರಾಟ ಮಾಡಲಾಗಿದೆ.
ಇದರಲ್ಲಿ ಒಂದು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಚಿತ್ರ ಬಿಡುಗಡೆಯಾಗಿ ಎಷ್ಟು ಕೋಟಿ ಹಣವನ್ನು ಗಳಿಸಿದ್ದರು ನಿರ್ದೇಶಕ, ಕಲಾವಿದರು ಹಾಗೂ ಟೆಕ್ನಿಶಿಯನ್ಸ್‌ಗೆ ಸಂಭಾವನೆ ಪಾಲಷ್ಟೇ ಸೇರುತ್ತದೆ ಅಷ್ಟೇ.. ಚಿತ್ರ ಹಿಟ್ ಆದರೂ ಅಥವಾ ಚಿತ್ರ ಸೋತರೂ ಅದರ ಲಾಭ ನಷ್ಟ ನಿರ್ಮಾಪಕರ ಮತ್ತು ವಿತರಕರು ಹೊಣೆಯಾಗುತ್ತದೆ.