ದೂರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ – ಬ್ರೇಕ್ ಅಪ್ ಗೆ ಕಾರಣವಾಗಿದ್ದು ಕರಣ್ ಜೋಹರ್ : ಏನಿದು ಬಿಸಿಬಿಸಿ ಸುದ್ದಿ?

ನ್ಯೂಸ್ ಆ್ಯರೋ : ಬಹುಭಾಷಾ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಹಾಗೂ ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಿನಿಮಾ ವಿಚಾರಗಳ ಹೊರತಾಗಿಯೂ ಪ್ರೀತಿ ಪ್ರೇಮದ ಗಾಸಿಪ್ ಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾವಿರ ಸಾವಿರ ಸಾಕ್ಷಿಗಳಿವೆ. ಕ್ಯಾಮೆರಾ ಕಣ್ಣಿಗೆ ಇಬ್ಬರು ಮಧ್ಯರಾತ್ರಿ ಹೋಟೆಲ್ ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಗೋವಾ ಟ್ರಿಪ್ ಮಾಡಿದ್ದಾರೆ. ಒಟ್ಟೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ನಾನಾ ಪಾರ್ಟಿಗಳಿಗೆ ಒಟ್ಟಿಗೆ ಹೋಗಿದ್ದಾರೆ. ಆದರೆ, ಇದೀಗ ಇಬ್ಬರೂ ನಾನೊಂದು ತೀರ, ನೀನೊಂದು ತೀರಾ ದೂರಾ ಆಗಿದ್ದು, ಇವರಿಬ್ಬರೂ ಪ್ರೀತಿ ಮಾಡುತ್ತಿದ್ದರೂ ಈಗ ಈ ಜೋಡಿಯ ಬ್ರೇಕ್ ಅಪ್ ಆಗಿದೆ.
ಇದೀಗ ವಿಜಯ್ ದೇವರಕೊಂಡ ಅವರು ಅನನ್ಯಾ ಪಾಂಡೆ ಅವರನ್ನು ಪ್ರೀತಿಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳಿದ್ದು, ಆದ್ರೆ ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ದೇವರಕೊಂಡ ಆಗಲಿ ಅಥವಾ ಅನನ್ಯಾ ಪಾಂಡೆ ಯಾರೂ ಕೂಡ ಬಗ್ಗೆ ಮಾತನಾಡಿಲ್ಲ.
ಈ ಟ್ರೈಯಾಂಗಲ್ ಲವ್ ಸ್ಟೋರಿಯ ಸುದ್ದಿಯ ನಡುವೆ ಮತ್ತೊಂದು ಅಚ್ಚರಿಯ ವಿಷಯ ವೈರಲ್ ಆಗುತ್ತಿದ್ದು,
ರಶ್ಮಿಕಾ ದೇವರಕೊಂಡ ಜೋಡಿ ಹಕ್ಕಿಗಳು ಬೇರೆ ಆಗಲು ಕಾರಣವೇನು ಎಂಬುದು ಈಗ ಬಯಲಾಗಿದೆ.
ಹೌದು, ನಿರ್ದೇಶಕ ಕರಣ್ ಜೋಹರ್ ಅವರು ದೇವರಕೊಂಡ ಮತ್ತು ರಶ್ಮಿಕಾ ಪ್ರೀತಿಗೆ ವಿಲನ್ ಆಗಿದ್ದು, ಈ ಲವ್ ಬರ್ಡ್ಸ್ ಮಧ್ಯೆ ಬ್ರೇಕ್ ಆಪ್ ಆಗಲು ಕರಣ್ ಎಂಬ ಸುದ್ದಿ ವೈರಲ್ ಆಗುತ್ತಿದೆ. ಅದು ಹೇಗೆ ಅಂತೀರಾ..? ಈ ಸುದ್ದಿ ಮುಂದೆ ಓದಿ..
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಕೇವಲ ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲೂ ಸದ್ದು ಮಾಡಿದೆ. ಹೀಗಾಗಿಯೇ ಕರಣ್ ಜೋಹರ್ ಕೂಡ ಈ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಕುರಿತಾಗಿ ಕರಣ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಚರ್ಚೆ ಆಗುತ್ತಿದೆ.
ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ ಬಂದಿದ್ದರು. ಈ ಸಂದರ್ಭದಲ್ಲಿ ಕರಣ್ ಮಾತನಾಡ್ತಾ ತನ್ನನ್ನು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಆಹ್ವಾನಿಸಲಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಖಂಡಿತಾ ಕರೆಯುತ್ತೇನೆ ಅಂತಾರೆ. ನಿಹಾರಿಕಾ ಹೀಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಚರ್ಚಿಸುತ್ತಾರೆ ಕರಣ್.
ಮೊದಲು ಪ್ರಭಾಸ್ ಹೆಸರು ಸೂಚಿಸುವ ಕರಣ್, ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಅಂತಾಳೆ. ಹಾಗಾದರೆ, ವಿಜಯ್ ದೇವರಕೊಂಡ ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಮಾಡುತ್ತಾರೆ ಕರಣ್.