1. Home
  2. Entertainment
  3. ವಾರಾಂತ್ಯದ ಬಿಗ್ ಬಾಸ್ ಶೋ ನಡೆಸಿಕೊಡಲು ಸುದೀಪ್ ಬರಲ್ವಂತೆ..!! – ಕಾರಣವೇನು‌ ಗೊತ್ತೇ…!?

ವಾರಾಂತ್ಯದ ಬಿಗ್ ಬಾಸ್ ಶೋ ನಡೆಸಿಕೊಡಲು ಸುದೀಪ್ ಬರಲ್ವಂತೆ..!! – ಕಾರಣವೇನು‌ ಗೊತ್ತೇ…!?

ವಾರಾಂತ್ಯದ ಬಿಗ್ ಬಾಸ್ ಶೋ ನಡೆಸಿಕೊಡಲು ಸುದೀಪ್ ಬರಲ್ವಂತೆ..!! – ಕಾರಣವೇನು‌ ಗೊತ್ತೇ…!?
0

ನ್ಯೂಸ್ ಆ್ಯರೋ : ಇಡೀ ಭಾರತದಲ್ಲಿಯೇ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಬಿಟ್ಟರೆ ಅತಿ ಹೆಚ್ಚು ಜನಪ್ರಿಯವಾಗಿರುವುದೆಂದರೆ ಅದು ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್. ಪ್ರತಿ ಬಾರಿಯಂತೆ ಈ ಬಾರಿ ಕೂಡ ಬಿಗ್​ ಬಾಸ್​ ಮನೆಯಲ್ಲಿ ಹತ್ತು ಹಲವು ಸಂಗತಿಗಳು ಗಮನ ಸೆಳೆಯುತ್ತಿದ್ದು, ಕನ್ನಡದ ಪ್ರೇಕ್ಷಕರಿಗೆ ‘ಬಿಗ್​ ಬಾಸ್​ ಸಖತ್ ಮನೋರಂಜನೆಯನ್ನು ನೀಡುತ್ತಿದೆ.

ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್-9 ರೋಚಕವಾಗಿ ಮುಂದುವರಿಯುತ್ತಿದ್ದು, ಪ್ರವೀಣರಿಗೆ ನವೀನರು ಒಳ್ಳೆಯ ಪೈಪೋಟಿ ನೀಡುತ್ತಿದ್ದಾರೆ. ಇದರೊಂದಿಗೆ ವೀಕೆಂಡ್ ನಲ್ಲಿ ಪ್ರಸಾರವಾಗುವ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ ಗಾಗಿ ಸಹಸ್ರಾರು ಜನ ಕಾಯುತ್ತಾ ಇರುತ್ತಾರೆ. ಬಿಗ್ ಬಾಸ್ ನೋಡೋ ಅಭಿಮಾನಿಗಳ ಒಂದೆಡೆಯಾದರೆ, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ನೋಡೋ ಇನ್ನೊಂದು ಅಭಿಮಾನಿ ಬಳಗವೇ ಇದೆ.

ವಾರ ಪೂರ್ತಿ ನಡೆದ ಮನೆಯ ವಿಷಯವನ್ನು ಎಳೆ ಎಳೆ ಬಿಡಿಸಿ ಮನೆಯವರಿಗೆ ಅರ್ಥ ಮಾಡಿಸೋ ಕಿಚ್ಚನ ಸ್ಟೈಲಿಗೆ ಅಭಿಮಾನಿಗಳು ಬಹುಪರಾಕ್ ಹಾಕಿದ್ದಾರೆ. ಎಡವಿದವರಿಗೆ ತಿಳಿ ಹೇಳಿ, ತಪ್ಪು ಮಾಡಿದವರಿಗೆ ಮಾತಿನಲ್ಲಿಯೇ ತಟ್ಟಿ, ಉತ್ತಮವಾದ ಪ್ರದರ್ಶನ ನೀಡಿದವರಿಗೆ ಚಪ್ಪಾಳೆ ನೀಡುತ್ತಿರುವ ಕಿಚ್ಚನ ನಿರೂಪಣೆಗೆ ಎಲ್ಲೆಡೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಹೀಗಿರುವಾಗ ಬಿಗ್ ಶೋ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದ್ದು, ಈ ವಾರದ ಬಿಗ್ ಬಾಸ್ ವೀಕೆಂಡ್‌ನಲ್ಲಿ (ಶನಿವಾರ-ಭಾನುವಾರ) ಕಿಚ್ಚ ಇರೋದಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು.. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಈ ವಾರ ಬರಲ್ಲ ಎಂದು ಹೇಳಲಾಗುತ್ತಿದ್ದು, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಲ್ವಂತೆ.‌.!!

ಅಕ್ಟೋಬರ್ 21 ರಂದು ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಕಿಚ್ಚ ಸುದೀಪ್ ಭಾಗವಹಿಸ್ತಾರಂತೆ. ಅದಕ್ಕೆ ಈ ವಾರ ಬಿಗ್ ಬಾಸ್ ವಾರಾಂತ್ಯದ ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ಮೊನ್ನೆಯಷ್ಟೇ ಅಂದರೆ ಅಕ್ಟೋಬರ್ 18ರಂದು ಸುದೀಪ್ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಈ ದಂಪತಿ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಕಾರಣಾಂತರಗಳಿಂದ ಮುಂದಿನ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಪಾಲ್ಗೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ವಾಹಿನಿಯಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಮಧ್ಯೆ ಇನ್ನೂ ಕೆಲವರು ಸುದೀಪ್ ಬಿಗ್ ಬಾಸ್ ಶೋ ಮೇಲೆ ಕೋಪ ಮಾಡಿಕೊಂಡಿದ್ದು, ನಿರೂಪಣೆಯಿಂದ ದೂರ ಉಳಿದಿದ್ದಾರೆ ಎಂಬ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ. ಅಂತಹ ಹೇಳಿಕೆ ಬರಲು ಬಲವಾದ ಕಾರಣವಿದ್ದು, ಕಳೆದ ಭಾನುವಾರದ ‘ಸೂಪರ್ ಸಂಡೆ ವಿತ್ ಸುದೀಪ್’ ಸಂಚಿಕೆಯಲ್ಲಿ ಗರಂ ಆಗಿದ್ದರು. ಈ ಎಪಿಸೋಡ್​ನಲ್ಲಿ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಟಾಪ್ 2 ಯಾರಿರಬಹುದು ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡುವಾಗ ಆರ್ಯವರ್ಧನ್ ಗುರೂಜಿ ‘’ಅನುಪಮಾ ಗೌಡ ಬರಬೇಕು ಅಂತ ‘ಬಿಗ್ ಬಾಸ್‌’ಗೆ ಆಸೆ ಇತ್ತು ಅನ್ಸುತ್ತೆ. ಮ್ಯಾಚ್ ಫಿಕ್ಸಿಂಗ್’’ ಅಂತೆಲ್ಲಾ ಮಾತನಾಡಿದರು. ಇದರಿಂದ ಕಿಚ್ಚ ಸುದೀಪ್ ಕೋಪಗೊಂಡರು. ಆರ್ಯವರ್ಧನ್ ಗುರೂಜಿ ವಿರುದ್ಧ ಕಿಚ್ಚ ಸುದೀಪ್ ಗುಟುರು ಹಾಕಿದರು. ‘’ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ.. ನಮಗೂ ನಿಮಗೂ ಬೀಳತ್ತೆ’’ ಎಂದು ಕಿಚ್ಚ ಸುದೀಪ್ ಗುಡುಗಿದರು.

ಇನ್ನೂ ಈ ವಾರ ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..