ನ್ಯೂಸ್ ಆ್ಯರೋ : ಇರಾನ್ ನಲ್ಲಿ ಹಿಜಾಬ್ ವಿರುದ್ದ ನಡೆಯುತ್ತಿರುವ ಆಂದೋಲನಕ್ಕೆ ವಿಶ್ವದಾದ್ಯಂತ ಬೆಂಬಲ ದೊರೆತಿದ್ದು, ಇದೀಗ ಇರಾನ್ ಮೂಲದ ನಟಿಯೊಬ್ಬರು ಕ್ಯಾಮರಾ ಮುಂದೆ ಬಟ್ಟೆ ತೆಗೆದು ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.
ನೆಟ್‌ಫ್ಲಿಕ್ಸ್ ಸರಣಿಯ ಸೂಪರ್ ಹಿಟ್ ಸೇಕ್ರೆಡ್ ಗೇಮ್ಸ್‌ನಲ್ಲಿ ನಟಿಸಿದ್ದ ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ ಕ್ಯಾಮರಾ ಮುಂದೆಯೇ ಬಟ್ಟೆ ಬಿಚ್ಚೆಸೆದು ಅರೆ ಬೆತ್ತಲಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇರಾನ್‌ನಲ್ಲಿ ‘ನೈತಿಕ ಪೋಲೀಸ್’ ವಿರುದ್ಧ ಮಹಿಳೆಯರು ಪ್ರತಿಭಟನೆಗಿಳಿದಿದ್ದಾರೆ.
ತಮಗೆ ಬೇಕಾದ ಬಟ್ಟೆ ಧರಿಸುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕೈ ಜೋಡಿಸಿರುವ ನಟಿ ಎಲ್ನಾಜ್ ಬೆತ್ತಲಾಗುವ ಮೂಲಕ ತಮಗೆ ಬೇಕಾದ ಬಟ್ಟೆ ಧರಿಸುವ ಆಯ್ಕೆ ಇದೆ ಎಂದಿದ್ದಾರೆ.
ನಟಿ ನೊರೌಜಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, ಮಹಿಳೆಯರಿಗೆ ಏನು ಬೇಕೋ ಅದನ್ನು ಧರಿಸುವ ಸ್ವಾತಂತ್ರ್ಯವಿದೆ. ಯಾರೂ ಅವಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಹಲವಾರು ಪದರಗಳ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲಾಗುವ ಮೂಲಕ ತಾನು ಪ್ರತಿಭಟನೆಗೆ ಸೇರಿಕೊಂಡರು.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..