1. Home
  2. Entertainment
  3. ಮತ್ತೊಂದು ವಿವಾದದ ಸುಳಿಯಲ್ಲಿ ಕಾಂತಾರ – ಚಿತ್ರ ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ದಲಿತ ಸಂಘಟನೆ ಆಗ್ರಹ

ಮತ್ತೊಂದು ವಿವಾದದ ಸುಳಿಯಲ್ಲಿ ಕಾಂತಾರ – ಚಿತ್ರ ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ದಲಿತ ಸಂಘಟನೆ ಆಗ್ರಹ

ಮತ್ತೊಂದು ವಿವಾದದ ಸುಳಿಯಲ್ಲಿ ಕಾಂತಾರ – ಚಿತ್ರ ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ದಲಿತ ಸಂಘಟನೆ ಆಗ್ರಹ
0

ನ್ಯೂಸ್‌ ಆ್ಯರೋ : ಕರಾವಳಿ ಮಣ್ಣಿನ ಸೊಗಡನ್ನು ಚಿತ್ರದ ಮೂಲಕ ಕಟ್ಟಿಕೊಟ್ಟು ಭಾರತದ ಚಿತ್ರೋದ್ಯಮದಲ್ಲಿ ‘ಕಾಂತಾರ’ ಸಿನೆಮಾ ಮೈಲಿಗಲ್ಲನ್ನೇ ಸೃಷ್ಟಿಸಿದೆ. ನಿರೀಕ್ಷೆಗೂ ಮೀರಿ ‘ಕಾಂತಾರ’ ಏಳು ಕಡಲನ್ನು ದಾಟಿ ಸಿನಿಪ್ರಿಯರ ಮನಗೆದ್ದಿದೆ. ತುಳುನಾಡಿನ ಸಂಸ್ಕೃತಿಯ ಜತೆಗೆ ಕಂಬಳ, ಭೂತಾರಾಧನೆಯನ್ನು ವಿಶ್ವಮಾನ್ಯಗೊಳಿಸಿದ ಶ್ರೇಯಸ್ಸು ಕರಾವಳಿ ಪ್ರತಿಭೆ ರಿಷಬ್‌ ಶೆಟ್ಟಿ ಮತ್ತು ತಂಡಕ್ಕೆ ಸಲ್ಲುತ್ತದೆ. ಆದರೆ ಕಾಂತಾರ ಸಿನಿಮಾ ಸಕ್ಸಸ್ ಆಗುತ್ತಿದ್ದ ಹಾಗೇ ಒಂದಲ್ಲ ಒಂದು ವಿವಾದವನ್ನು ಎದುರಿಸುತ್ತಲೇ ಬರುತ್ತಿದೆ. ಇದೀಗ ಕಾಂತಾರ ಸಿನಿಮಾದ ಬಗ್ಗೆ ದಲಿತ ಸಮುದಾಯ ಆಕ್ರೋಶಗೊಂಡಿದ್ದು, ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ಆಗ್ರಹಿಸಿದ್ದಾರೆ.

‘ಕಾಂತಾರ’ ಸಿನಿಮಾ ನೋಡಿದವರಿಗೆ ಕೊನೆಯ ಇಪ್ಪತ್ತು ನಿಮಿಷಗಳ ದೃಶ್ಯ ವೈಭವ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸದೆ ಇರದು. ನೈಜ ನಟನೆ, ಅದ್ಭುತ ಸೆಟ್, ಆಗಾಗ ಪಂಜ್ ಕೊಡುವ ಡೈಲಾಗ್‌ ಎಲ್ಲರನ್ನು ಮೆಚ್ಚಿಸಿದೆ. ಈ ಚಿತ್ರ ಮೊದಲ ಕನ್ನಡದಲ್ಲಿ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ನಿಂದ ಹೊಂಬಾಳೆ ಫಿಲ್ಮ್ಸ್‌ನವರು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಡಬ್‌ ಮಾಡಿ ರಿಲೀಸ್ ಮಾಡಲಾಗಿತ್ತು.

ಕರ್ನಾಟಕದಲ್ಲೇ ಕಾಂತಾರ ಸಿನಿಮಾ 180 ಕೋಟಿ ಗಳಿಸಿ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಅಂದಾಜು ಒಟ್ಟು 275 ಕೋಟಿ ಬಾಚಿಕೊಂಡಿದ್ದು, ವಿಶ್ವದಾದ್ಯಂತ 350 ಕೋಟಿ ಗಳಿಸಿ ಇನ್ನೂ ಚಿತ್ರಮಂದಿರಗಳಲ್ಲಿ ಯಶ‌ಸ್ವಿಯಾಗಿ ಮುನ್ನುಗ್ಗುತ್ತಿದೆ. ಕಾಂತಾರ ಸಿನಿಮಾ ಕರಾವಳಿ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿ ಇಡೀ ವಿಶ್ವವನ್ನೇ ಗೆದ್ದಿದ್ದರೂ ಇದೀಗ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಕಾಂತಾರಾ ಸೂಪರ್ ಹಿಟ್ ಆಗುತ್ತಿದ್ದ ಹಾಗೇ ನಟ ಚೇತನ್ ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಅನ್ನೋ ಕಾಮೆಂಟ್‌ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅದಾದ ಬಳಿಕ ಸಿನಿಮಾದ ವರಾಹ ರೂಪಂ ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ವಿಚಾರ ಹಲವು ದಿನಗಳಿಂದ ಸದ್ದು ಮಾಡಿತ್ತು. ಮಲಯಾಳಂ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪೆನಿಯು ಈ ಸಂಬಂಧ ಕೋರ್ಟ್‌ ಮೆಟ್ಟಿಲನ್ನು ಹತ್ತಿತ್ತು. ಆದರೆ, ನಿರ್ದೇಶಕ ರಿಷಬ್ ಶೆಟ್ಟಿ ಅದಕ್ಕೆ ಒಪ್ಪಿರಲಿಲ್ಲ. ನವರಸಮ್ ಆಲ್ಬಂನಿಂದ ಕದ್ದಿಲ್ಲ ಎಂದೇ ಹೇಳುತ್ತಾ ಬಂದಿದ್ದರು. ಆದರೆ, ನಿನ್ನೆಯಿಂದ ನಿರ್ಮಾಣ ಸಂಸ್ಥೆಯ ಯೂಟ್ಯೂಟ್ ನಿಂದ ಹಾಡನ್ನು ಡಿಲೀಟ್ ಮಾಡಲಾಗಿದೆ.

ಇದೀಗ ಮತ್ತೊಂದು ವಿವಾದದ ಸುಳಿಯಲ್ಲಿ ಕಾಂತಾರ:

ಮಂಗಳೂರಿನಲ್ಲಿ ದಲಿತ ಮುಖಂಡರು ಸಿನಿಮಾ ಬಗ್ಗೆ ಕಿಡಿಕಾರಿದ್ದಾರೆ. ದಲಿತರಿಗೆ ಅವಮಾನ ಮಾಡಲಾಗಿದೆ ಎಂದು ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಆರೋಪಿಸಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತಾರ ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದೆ. ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆ ಮಾಡಿದೆ. ನಮಗೆ ಸಿನಿಮಾ ತಂಡದ ಬಗ್ಗೆ ಆಕ್ಷೇಪಣೆ ಇಲ್ಲ ಎಂದಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..