ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ ರಿಷಭ್ ಶೆಟ್ಟಿಯ ಕಾಂತಾರ – ಐದು ದಿನಗಳಲ್ಲಿ ಗಳಿಸೆದ್ದೆಷ್ಟು ಕೋಟಿ ಗೊತ್ತಾ…!?

ನ್ಯೂಸ್ ಆ್ಯರೋ : ಸೆಪ್ಟೆಂಬರ್ 30 ರಂದು ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಬಿಡುಗಡೆಯಾಗಿದ್ದು, ಭಾರೀ ಜನಪ್ರಿಯತೆ ಗಳಿಸಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಕೋಟ್ಯಾಂತರ ರೂಪಾಯಿ ಗಳಿಸಿದ್ದ ಸಿನಿಮಾ ಐದನೇ ದಿನಕ್ಕೆ ಗಳಿಸಿರುವುದು ಎಷ್ಟು ಕೋಟಿ ಎಂಬುದು ರಿವೀಲ್ ಆಗಿದೆ.

ಕಾಂತಾರ ಅನೇಕ ಕಾರಣಗಳಿಗಾಗಿ ಹೈಲೈಟ್ ಆಗಿದೆ. ಮೊದಲು ಬಿಡುಗಡೆಯಾದ ಟ್ರೇಲರ್ ಚಿತ್ರದ ಕಥೆಯ ಒಂದು ನೋಟವನ್ನು ನೀಡಿತ್ತು. ಈ ಚಿತ್ರ ಗ್ರಾಮೀಣ ಜನರ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸ್ಥಳೀಯರ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸುವ ಮೂಲಕ ಅಂತ್ಯದವರೆಗೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
ಕಾಂತಾರ ಚಿತ್ರವು ಸುಮಾರು ಮೊದಲ ದಿನದಲ್ಲಿ 2.5 ಕೋಟಿ ರೂ. ಮತ್ತು 2 ನೇ ದಿನದಲ್ಲಿ ಚಿತ್ರವು ಸುಮಾರು ರೂ. 4.5 ಕೋಟಿ, 3 ನೇ ದಿನದಂದು ಈ ಸಂಖ್ಯೆ ಇನ್ನೂ ಹೆಚ್ಚಾಗಿತ್ತು. ಮೊದಲ ಭಾನುವಾರದಂದು 7.5 ಕೋಟಿ ರೂ. 4ನೇ ದಿನ, ಮೊದಲ ಸೋಮವಾರ, ಚಿತ್ರವು ಸುಮಾರು ರೂ. 4.5 ಕೋಟಿ. 5ನೇ ದಿನದಂದು ಚಿತ್ರ ಸುಮಾರು ರೂ. 6.2 ಕೋಟಿ ಗಳಿಸಿದೆ ಎನ್ನಲಾಗಿದ್ದು, ಮೊದಲ ಐದು ದಿನಗಳಲ್ಲಿ ಒಟ್ಟಾರೆ ನಿವ್ವಳ ಸಂಗ್ರಹವು ಸರಿಸುಮಾರು ರೂ. 25 ಕೋಟಿ ಎನ್ನಲಾಗಿದೆ.

ಕಾಂತಾರ ಚಿತ್ರಕ್ಕೆ ರಿಷಭ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿದ್ದಲ್ಲದೇ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ. ಅಲ್ಲದೇ ಈ ಚಿತ್ರದ ತಾರಾಗಣದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮತ್ತು ಸಪ್ತಮಿ ಗೌಡ ಮುಂತಾದವರು ಇದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ತುಳುನಾಡಿನ ಸಂಸ್ಕೃತಿ, ಆಚರಣೆಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ರಿಷಭ್ ತಾವೆಣಿಸದ ರೀತಿಯಲ್ಲಿ ಗೆದ್ದು ಬೀಗಿದ್ದಾರೆ.