1. Home
  2. Entertainment
  3. ಧ್ರುವ ಸರ್ಜಾ ಬರ್ತ್’ಡೇ ಗೆ “ಮಾರ್ಟಿನ್” ಚಿತ್ರದ ಪೋಸ್ಟರ್ ರಿಲೀಸ್ – ಖಡಕ್ ಲುಕ್ ನಲ್ಲಿ ಮಿಂಚ್ತಾ ಇರೋ ಆ್ಯಕ್ಷನ್ ಪ್ರಿನ್ಸ್‌

ಧ್ರುವ ಸರ್ಜಾ ಬರ್ತ್’ಡೇ ಗೆ “ಮಾರ್ಟಿನ್” ಚಿತ್ರದ ಪೋಸ್ಟರ್ ರಿಲೀಸ್ – ಖಡಕ್ ಲುಕ್ ನಲ್ಲಿ ಮಿಂಚ್ತಾ ಇರೋ ಆ್ಯಕ್ಷನ್ ಪ್ರಿನ್ಸ್‌

ಧ್ರುವ ಸರ್ಜಾ ಬರ್ತ್’ಡೇ ಗೆ “ಮಾರ್ಟಿನ್” ಚಿತ್ರದ ಪೋಸ್ಟರ್ ರಿಲೀಸ್ – ಖಡಕ್ ಲುಕ್ ನಲ್ಲಿ ಮಿಂಚ್ತಾ ಇರೋ ಆ್ಯಕ್ಷನ್ ಪ್ರಿನ್ಸ್‌
0

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್‌ ಆಗಿದೆ. ನಾಳೆ (ಅಕ್ಟೋಬರ್ 06) ಧ್ರುವ ಸರ್ಜಾ ಹುಟ್ಟುಹಬ್ಬವಿದ್ದು, ಇದೇ ಸಂಭ್ರಮದಲ್ಲಿ ಒಂದು ದಿನ ಮೊದಲೇ ಪೋಸ್ಟರ್ ರಿಲೀಸ್ ಮಾಡಿ ‘ಮಾರ್ಟಿನ್’ ಟೀಂ ಶುಭ ಕೋರಿದೆ.

ಭರವಸೆಯ ನಿರ್ದೇಶಕ ಎ.ಪಿ. ಅರ್ಜುನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ದೊಡ್ಡದಾಗಿ ರಿಲೀಸ್ ಆಗ್ತಿದೆ‌. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದ ಧ್ರುವ ಸರ್ಜಾ ನಟಿಸುತ್ತಿರುವ ಐದನೇ ಸಿನಿಮಾ ಮಾರ್ಟಿನ್. ಈಗಾಗಲೇ ‘ಅದ್ಧೂರಿ’, ‘ಬಹದ್ಧೂರ್’, ‘ಭರ್ಜರಿ’, ‘ಪೊಗರು’ ಸಿನಿಮಾಗಳ ನಟನೆಯಿಂದ ಫೇಮಸ್ ಆಗಿರುವ ಧ್ರುವ ಅವರ ಮಾರ್ಟಿನ್ ಚಿತ್ರದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಉದಯ್ ಕೆ ಮೆಹ್ತಾ ನಿರ್ಮಾಣದ ಈ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ‘ಅದ್ಧೂರಿ’ ನಂತರ ಧ್ರುವ ಹಾಗೂ ಅರ್ಜುನ್ ಮತ್ತೆ ಒಂದಾಗಿದ್ದು ಮತ್ತೊಂದು ಸೂಪರ್ ಹಿಟ್ ಸಿನಿಮಾ ನಿರೀಕ್ಷೆ ಮಾಡಲಾಗ್ತಿದೆ. ಇತ್ತೀಚೆಗಷ್ಟೆ ಚಿತ್ರ ತಂಡ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದೆ.

ಸಿಗಾರ್ ಸೇದುತ್ತಾ ದೊಡ್ಡ ಗನ್ ಹಿಡಿದು ‘ಮಾರ್ಟಿನ್’ ಧ್ರುವ ಸರ್ಜಾ ಪೋಸ್ಟರ್‌ನಲ್ಲಿ ಖಡಕ್ ಪೋಸ್ ಕೊಟ್ಟಿದ್ದಾರೆ. ಭಾರತದ ಅತಿದೊಡ್ಡ ಸಾಹಸಗಾಥೆ ಎಂದು ಬರೆದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಸದ್ಯ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, 5 ಭಾಷೆಯ ಪೋಸ್ಟರ್‌ಗಳನ್ನು ರಿಲೀಶ್ ಮಾಡಲಾಗಿದೆ. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ‘ಮಾರ್ಟಿನ್’ ಸಿನಿಮಾ ನಿರ್ಮಾಣವಾಗುತ್ತಿದೆ. ಕೇವಲ ಒಂದು ಆಕ್ಷನ್ ಎಪಿಸೋಡ್‌ಗಾಗಿ 4.8 ಕೋಟಿ ರೂ. ವ್ಯಯಿಸಲಾಗಿದೆಯಂತೆ.

ಇನ್ನು ಸೆಟ್‌ಗಳನ್ನು ಹಾಕಿ ಎರಡು ಸಾಂಗ್ ಶೂಟ್ ಮಾಡುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ. ಮತ್ತೊಂದು ಸಾಂಗ್‌ ಶೂಟ್‌ಗಾಗಿ ಫಾರಿನ್‌ಗೆ ಹೋಗುವ ಬಗ್ಗೆಯೂ ಚರ್ಚೆ ನಡೀತಿದೆ. ಹಾಸ್ಯ ನಟ ಚಿಕ್ಕಣ್ಣ, ಬಾಲಿವುಡ್ ನಟ ನಿಕಿತಿನ್ ಧೀರ್ ಹಾಗೂ ಅನ್ವೇಶಿ ಜೈನ್ ಚಿತ್ರದ ತಾರಾಗಣದಲ್ಲಿದ್ದು, ಮಾರ್ಟಿನ್ ಜೊತೆಗೆ ಜೋಗಿ ಪ್ರೇಮ್ ನಿರ್ದೇಶನದ ಇನ್ನು ಹೆಸರಿಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲೂ ಧ್ರುವ ಸರ್ಜಾ ನಟಿಸ್ತಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..