1. Home
  2. Entertainment
  3. ಕಾಂತಾರ ಅಬ್ಬರಕ್ಕೆ ಕೆಜಿಎಫ್, RRR ದಾಖಲೆ ಉಡೀಸ್ – ಹಿಂದಿಯಲ್ಲೂ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟ ಕರಾವಳಿಯ ದೈವದ ಕಥೆ

ಕಾಂತಾರ ಅಬ್ಬರಕ್ಕೆ ಕೆಜಿಎಫ್, RRR ದಾಖಲೆ ಉಡೀಸ್ – ಹಿಂದಿಯಲ್ಲೂ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟ ಕರಾವಳಿಯ ದೈವದ ಕಥೆ

ಕಾಂತಾರ ಅಬ್ಬರಕ್ಕೆ ಕೆಜಿಎಫ್, RRR ದಾಖಲೆ ಉಡೀಸ್ – ಹಿಂದಿಯಲ್ಲೂ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟ ಕರಾವಳಿಯ ದೈವದ ಕಥೆ
0

ನ್ಯೂಸ್ ಆ್ಯರೋ : ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ತೆರೆಕಂಡ ದಿನದಿಂದ ಇವತ್ತಿನವರೆಗೂ ಉತ್ತಮ ಗಳಿಕೆ ಮಾಡುತ್ತ ಸಾಗುತ್ತಿದೆ. ಈ ಮಧ್ಯೆ ಪರಭಾಷೆಯಿಂದಲೂ ಹೆಚ್ಚು ಬೇಡಿಕೆ ಬಂದ ಕಾರಣ, ಈ ‘ಕಾಂತಾರ’ ಸಿನಿಮಾವನ್ನು ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗೆ ಡಬ್ ಮಾಡಲಾಗಿದೆ. ಅದರಲ್ಲಿ ಮೊದಲಿಗೆ ಹಿಂದಿ ವರ್ಷನ್‌ ಅನ್ನು ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಹಿಂದಿ ವರ್ಷನ್ ಟ್ರೇಲರ್‌ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ನೋಡಲು ಉತ್ತರ ಭಾರತದ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ತನ್ನ ಖದರ್ ತೋರಿಸಿರುವ ‘ಕಾಂತಾರ’ ಸಿನಿಮಾ ಇದೀಗ ಉತ್ತರ ಭಾರತಕ್ಕೂ ಲಗ್ಗೆ ಇಡುತ್ತಿದ್ದು ಈ ಮೂಲಕ ಹಿಂದಿ ಪ್ರಾಬಲ್ಯವಿರುವ ಪ್ರದೇಶದಲ್ಲೂ ಸ್ಯಾಂಡಲ್‌ವುಡ್ ಸಿನಿಮಾ ಘರ್ಜಿಸಲು ಸಜ್ಜಾಗಿದೆ. ಈಗಾಗಲೇ ಹಿಂದಿ ವರ್ಷನ್ ಟ್ರೈಲರ್ ನೋಡಿ ಜನ ಗ್ರೇಟ್ ಅಂತಿದ್ದಾರೆ. ಈ ಸಂದರ್ಭದಲ್ಲೇ ಹಿಂದಿಗೆ ಡಬ್‌ ಆಗಿರುವ ‘ಕಾಂತಾರ’ ಸಿನಿಮಾ 2500ಕ್ಕೂ ಹೆಚ್ಚು ಸೀನ್‌ಗಳಲ್ಲಿ ರಿಲೀಸ್ ಆಗಲಿದೆ. ಹೀಗೆ ‘ಕಾಂತಾರ’ ಅಬ್ಬರ ಕಂಡು ಬಾಲಿವುಡ್ ಸ್ಟಾರ್ ನಟರು ಬೆಚ್ಚಿಬಿದ್ದಿದ್ದು, ಕೆಜಿಎಫ್ 2′ ಚಿತ್ರವನ್ನು ಹಿಂದಿಕ್ಕಿ ಕಾಂತಾರ ಸಿನಿಮಾ ಸೌಂಡ್ ಮಾಡುತ್ತಿದೆ.

ಹೌದು.. ಕಾಂತಾರ ಸಿನೆಮಾ IMDBನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದ್ದು, ರಾಜಮೌಳಿಯವರ ಆರ್ ಆರ್ ಆರ್, ಪ್ರಶಾಂತ್ ನೀಲ್ ಅವರ ಕೆಜಿಎಫ್ 2 ಚಿತ್ರಕ್ಕಿಂತಲೂ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರ ಅತಿಹೆಚ್ಚು IMDbಯಲ್ಲಿ 10 ರಲ್ಲಿ 9.5 ರೇಟಿಂಗ್‌ ಪಡೆದಿದೆ. ಆ ಮೂಲಕ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು ‘ರಾಕಿಂಗ್ ಸ್ಟಾರ್’ ಯಶ್ ಅವರ ‘ಕೆಜಿಎಫ್ 2’ ಚಿತ್ರ 8.4 ಪಾಯಿಂಟ್ಸ್ ಹಾಗೂ ಎಸ್ ಎಸ್ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ 8 ಪಾಯಿಂಟ್ಸ್ ಪಡೆಕೊಂಡಿತ್ತು.

ಇನ್ನೂ 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಶೀಘ್ರದಲ್ಲಿಯೇ 100 ಕೋಟಿ ಕ್ಲಬ್ ಸೇರಲಿದೆ ಗಾಂಧಿ ನಗರದ ಸಿನಿಮಾ ಪಂಡಿತರು ಹೇಳಿದ್ದು,ಕರಾವಳಿ ಭಾಗದ ಸೊಗಡಿನ ದೈವದ ಕಥೆ ಆಧರಿಸಿ ಬಂದ ಕಾಂತಾರಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಕಾಂತಾರ ಚಿತ್ರ ಬಿಡುಗಡೆ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದರೂ ಕೂಡ ಈ ಚಿತ್ರದ ಕ್ರೇಜ್ ಮಾತ್ರ ಒಂದಿಷ್ಟು ಕಡಿಮೆ ಆಗಿಲ್ಲ. ರಿಲೀಸ್ ಆದ ಎಲ್ಲ ಚಿತ್ರಮಂದಿಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಆ ಮೂಲಕ ಯಶ್ ಅಭಿನಯದ ಕೆಜಿಎಫ್ ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರಗಳಿಗೆ ಸೆಡ್ಡು ಹೊಡೆದು ನುಗ್ಗುತ್ತಿದೆ.

ಕಾಂತಾರ ಸಿನಿಮಾ ಮೊದಲ ವಾರಕ್ಕಿಂತ ಎರಡನೇ ವಾರ 40%ರಷ್ಟು ಕಲೆಕ್ಷನ್ ಮಾಡಿದೆ. ಎರಡನೇ ವಾರದಲ್ಲಿ 36.50 ಕೋಟಿ ಗಳಿಕೆ ಮಾಡಿದ್ದು, ಗಲ್ಲಾಪೆಟ್ಟಿಗೆಯ ಒಟ್ಟು ಗಳಿಕೆ 62.75 ಕೋಟಿ ರೂ. ಗಳಿಸಿದೆ. ಎರಡೇ ವಾರಕ್ಕೆ ನೂರು ಕೋಟಿ ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ. ಈ ಮೂಲಕ `ಕೆಜಿಎಫ್ 2′ ದಾಖಲೆಯನ್ನು ಕಾಂತಾರ ಉಡೀಸ್ ಮಾಡಿದೆ.

ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ ‘ಕಾಂತಾರ’ ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಹಾಗೂ ರಿಷಬ್ ಶೆಟ್ಟಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ‘ಕಾಂತಾರ’ ಚಿತ್ರ ಇಂದು ಹಿಂದಿ ವರ್ಷನ್‌ ರಿಲೀಸ್ ಆಗಿದ್ದು, ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500ಕ್ಕೂ ಅಧಿಕ ಸ್ಕೀನ್‌ಗಳಲ್ಲಿ ‘ಕಾಂತಾರ’ ಚಿತ್ರದ ಹಿಂದಿ ವರ್ಷನ್ ಪ್ರದರ್ಶನವಾಗುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..