1. Home
  2. Entertainment
  3. ‘ಕಾಂತಾರ’ ವಿರುದ್ಧ ಕಾಪಿರೈಟ್ ಆರೋಪ – ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ

‘ಕಾಂತಾರ’ ವಿರುದ್ಧ ಕಾಪಿರೈಟ್ ಆರೋಪ – ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ

‘ಕಾಂತಾರ’ ವಿರುದ್ಧ ಕಾಪಿರೈಟ್ ಆರೋಪ – ಕಾನೂನು ಕ್ರಮಕ್ಕೆ ಮುಂದಾದ ಕೇರಳದ ಸಂಸ್ಥೆ
0

ನ್ಯೂಸ್ ಆ್ಯರೋ‌ : ‘ಕಾಂತಾರ’ ಚಿತ್ರದ ಹಾಡೊಂದಕ್ಕೆ ಕೃತಿ ಚೌರ್ಯದ ಆರೋಪ ಕೇಳಿಬಂದಿದೆ. ಈ ವಿಷಯವಾಗಿ ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್’ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ.

ಥೈಕ್ಕುಡಮ್ ಬ್ರಿಡ್ಜ್ ಗೂ ‘ಕಾಂತಾರ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ನಮ್ಮ ಕೇಳುಗರು ತಿಳಿದುಕೊಳ್ಳಬೇಕು. ನಮ್ಮ ‘ನವರಸಂ’ ಮತ್ತು ಕಾಂತಾರದ ‘ವರಾಹ ರೂಪಂ’ ಹಾಡಿನ ನಡುವೆ ಸ್ಪಷ್ಟ ಹೋಲಿಕೆಗಳು ಕಂಡು ಬಂದಿವೆ. ಆದ್ದರಿಂದ ಇದು ಹಕ್ಕು ಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ‘ಥೈಕ್ಕುಡಮ್ ಬ್ರಿಡ್ಜ್’ ತನ್ನ ಪೋಸ್ಟ್ ನಲ್ಲಿ ಉಲ್ಲೇಖಿಸಿದೆ.

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದು, ಉತ್ತಮ ಗಳಿಕೆಯೂ ಮಾಡಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..