1. Home
  2. Entertainment
  3. ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ್ರೂ ನೆಚ್ಚಿನ ನಂಬರ್ ಉಳಿಸಿಕೊಂಡ ನಟ ಮೋಹನ್ ಲಾಲ್ – ದುಬಾರಿ ವಾಹನದ ಫೋಟೋಸ್ ವೈರಲ್…!!

ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ್ರೂ ನೆಚ್ಚಿನ ನಂಬರ್ ಉಳಿಸಿಕೊಂಡ ನಟ ಮೋಹನ್ ಲಾಲ್ – ದುಬಾರಿ ವಾಹನದ ಫೋಟೋಸ್ ವೈರಲ್…!!

ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ್ರೂ ನೆಚ್ಚಿನ ನಂಬರ್ ಉಳಿಸಿಕೊಂಡ ನಟ ಮೋಹನ್ ಲಾಲ್ – ದುಬಾರಿ ವಾಹನದ ಫೋಟೋಸ್ ವೈರಲ್…!!
0

ನ್ಯೂಸ್ ಆ್ಯರೋ‌ : ಭಾರತದ ಖ್ಯಾತ ನಟ, ನಿರ್ಮಾಪಕ, ಸಿನಿಮಾ ವಿತರಕರ, ಪ್ಲೇ ಬ್ಯಾಕ್‌ ಸಿಂಗರ್‌ ಮತ್ತು ಮುಖ್ಯವಾಗಿ ಮಲಯಾಳಂ ಸಿನಿಮಾದ ಸೂಪರ್‌ಸ್ಟಾರ್‌ ‘ಮೋಹನ್‌ಲಾಲ್‌’ ಎಂದೇ ಖ್ಯಾತರಾದ ಮೋಹನ್‌ಲಾಲ್‌ ವಿಶ್ವನಾಥನ್‌ ಕೇವಲ ಮಲಯಾಳಂ ಭಾಷೆಯ ಸಿನಿಮಾಗಳ ನಟ ಮಾತ್ರರಲ್ಲ, ಬೇರೆ ಭಾಷೆಯಲ್ಲೂ ನಟಿಸುವುದರ ಮೂಲಕ ಬಹುಭಾಷಾ ನಟರೆನಿಸಿಕೊಂಡಿದ್ದಾರೆ. ತನ್ನ ಅತ್ಯದ್ಭುತ ನಟನಾ ಶೈಲಿಯ ಮೂಲಕ ಸಿನಿ ಪ್ರಪಂಚದಲ್ಲಿ ತನ್ನದೇ ಆದ ಗೌರವವನ್ನು ಗಟ್ಟಿಗೊಳಿಸಿಕೊಂಡವರು.

1980ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮೋಹನ್​ಲಾಲ್​ ಸಿನಿಮಾಗಳೆಂದರೆ ಜನರು ಮುಗಿಬಿದ್ದು ನೋಡುತ್ತಾರೆ.

ಮೋಹನ್ ಲಾಲ್ ಅವರಿಗೆ ಕಾರುಗಳ ಮೇಲೆ ಅತೀ ಹೆಚ್ಚು ಪ್ರೀತಿ ಇದ್ದು, ಅವರ ಬಳಿ ಟೊಯೊಟಾ ವೆಲ್‌ಫೈರ್, ಮರ್ಸಿಡಿಸ್ ಬೆಂಝ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಇದೀಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ದುಬಾರಿ ಕ್ಯಾರವ್ಯಾನ್ ಅನ್ನು ಖರೀದಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ ಕ್ಯಾರವ್ಯಾನ್ ಫೋಟೋಗಳು ವೈರಲ್ ಆಗುತ್ತಿವೆ.

ಹೌದು.. ಸಿನಿಮಾ ಸ್ಟಾರ್ ಗಳು ಅಂದ್ರೆ ಅವರಿಗೆ ವಿಶೇಷವಾದ ಆತಿಥ್ಯ ಇರುತ್ತೆ ಎನ್ನುವುದು ಗೊತ್ತಿರುವ ಸಂಗತಿ. ಅದರಲ್ಲೂ ದೊಡ್ಡ ಸ್ಟಾರ್ ನಟರು ಅಂದ್ರೆ ಅವರಿಗಾಗಿ ಎಲ್ಲವೂ ಸ್ಪೆಷಲ್ ಆಗಿರುತ್ತೆ. ಊಟ, ಉಳಿದುಕೊಳ್ಳುವ ಹೋಟೆಲ್, ಶೂಟಿಂಗ್ ಸ್ಥಳದಲ್ಲಿ ಬಳಸುವ ಕ್ಯಾರವ್ಯಾನ್ ಎಲ್ಲವೂ ದುಬಾರಿ ಆಗಿರುತ್ತದೆ.

ದೊಡ್ಡ ದೊಡ್ಡ ನಟರು ತಮ್ಮದೇ ಸ್ವಂತ ಕ್ಯಾರವ್ಯಾನ್ ಹೊಂದಿರುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿರುತ್ತಾರೆ. ಇದೀಗ, ಇಂತಹ ಕ್ಯಾರವ್ಯಾನ್ ವಿಷ್ಯದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್‌ ಸದ್ದು ಮಾಡುತ್ತಿದ್ದಾರೆ.

ಸ್ಟೈಲಿಶ್ ಸ್ಟಾರ್ ಗಳು ತೆರೆಮೇಲೆ ಎಷ್ಟು ಸ್ಟೈಲ್ ಆಗಿ ಕಾಣುತ್ತಾರೋ ನಿಜ ಜೀವನದಲ್ಲೂ ಅಷ್ಟೇ ಸ್ಟೈಲ್ ಆಗಿ ಜೀವನ ನಡೆಸಲು ಪ್ರಯತ್ನ ಮಾಡುತ್ತಾರೆ. ತಮಗೆ ಸಂಬಂಧಿಸಿದ ಎಲ್ಲ ವಸ್ತುಗಳ ಬಗ್ಗೆಯೂ ವಿಶೇಷವಾದ ಕಾಳಜಿ ವಹಿಸುತ್ತಾರೆ. ಇದೀಗ ಇದಕ್ಕೆ ತಾಜಾ ನಿದರ್ಶನವಾಗಿ ಮೋಹನ್‌ಲಾಲ್‌ ನಿಂತಿದ್ದು, ಡಿಸೈನ್ ಮಾಡಿಸಿರುವ ಕ್ಯಾರವ್ಯಾನ್ ಎಲ್ಲರ ಗಮನ ಸೆಳೆಯುತ್ತಿದೆ.

ಹೆಸರಾಂತ ವಾಹನ ತಯಾರಕ ಕಂಪನಿಯಾದ ಭಾರತ್ ಬೆಂಝ್‌ನ 1017 ಬಸ್ ಚಾಸಿಸ್‌ನಲ್ಲಿ ನಿರ್ಮಿಸಲಾದ ಮಾದರಿಯಾಗಿದ್ದು,ಕೇರಳದ ವಿಶೇಷ ಉದ್ದೇಶದ ವಾಹನಗಳ ಪ್ರಮುಖ ತಯಾರಕರ ಕಂಪನಿಗಳಲ್ಲಿ ಒಂದಾದ ಓಜಸ್ ಆಟೋಮೊಬೈಲ್ಸ್, ಭಾರತ್ ಬೆಂಜ್‌ನ 1017 ಬಸ್ ಅನ್ನು ಐಷಾರಾಮಿ ಕ್ಯಾರವ್ಯಾನ್ ಆಗಿ ಮಾರ್ಪಾಡಿಸಲಾಗಿದೆ.

ಕಂದು ಬಣ್ಣದ ಕ್ಯಾರವ್ಯಾನ್ ಅನ್ನು ಮೋಹನ್ ಲಾಲ್ ಖರೀದಿಸಿದ್ದು, ಈ ವಾಹನವು ಮಲಗುವ ಕೋಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಈ ವಾಹನವು 3907cc ನಾಲ್ಕು ಸಿಲಿಂಡರ್ 4d34i CRDi ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ನೀಡಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..