1. Home
  2. Entertainment
  3. ರಸ್ತೆ ಅಪಘಾತದಲ್ಲಿ ಮರಾಠಿ ಕಿರುತೆರೆಯ ಖ್ಯಾತ ನಟಿ ಕಲ್ಯಾಣಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ರಸ್ತೆ ಅಪಘಾತದಲ್ಲಿ ಮರಾಠಿ ಕಿರುತೆರೆಯ ಖ್ಯಾತ ನಟಿ ಕಲ್ಯಾಣಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ರಸ್ತೆ ಅಪಘಾತದಲ್ಲಿ ಮರಾಠಿ ಕಿರುತೆರೆಯ ಖ್ಯಾತ ನಟಿ ಕಲ್ಯಾಣಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
0

ನ್ಯೂಸ್ ಆ್ಯರೋ : ಸ್ಕೂಟರ್– ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮರಾಠಿ ಧಾರವಾಹಿ ನಟಿ ಕಲ್ಯಾಣಿ ಕುರಲ್ ಜಾಧವ್ ಅವರು ಸಾವನ್ನಪ್ಪಿದ್ದಾರೆ.


ಶನಿವಾರ ರಾತ್ರಿ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಆಗಾಗಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇವರ ನಿಧನ ಸುದ್ದಿ ಮರಾಠಿ ಕಿರುತೆರೆಗೆ ಆಘಾತವನ್ನು ಉಂಟುಮಾಡಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.


ಕಲ್ಯಾಣಿ ಕುರಳೆ ಜಾಧವ್ ಅವರು ‘ತುಜ್ಯಾತ್ ಜೀವ್ ರಂಗಲಾ’, ‘ದಕ್ಕಂಚ ರಾಜ ಜ್ಯೋತಿಬಾ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿ ಭಾರೀ ಜನ ಮನ್ನಣೆ ಗಳಿಸಿದ್ದರು. 32 ವರ್ಷದ ಕಲ್ಯಾಣಿ ನಟನೆಯೊಂದಿಗೆ ರೆಸ್ಟೋರೆಂಟನ್ನು ನಡೆಸುತ್ತಿದ್ದರು.

.ಕೊಲ್ಹಾಪುರ ನಗರದ ರಾಜಾರಾಂಪುರಿನಲ್ಲಿ ವಾಸವಾಗಿದ್ದ ಅವರು ಶನಿವಾರ ರಾತ್ರಿ ರೆಸ್ಟೋರೆಂಟ್ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಈ ಅವಘಡ ಸಂಭವಿಸಿದೆ. , ಕೊಲ್ಹಾಪುರ ನಗರದಿಂದ 20 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ಕಲ್ಯಾಣಿ ಕುರಳೆ ಜಾಧವ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಶಿರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..