1. Home
  2. Entertainment
  3. ನಾದಬ್ರಹ್ಮ‌ ಹಂಸಲೇಖ ಅವರಿಗೆ ದಿಢೀರ್ ಅನಾರೋಗ್ಯ – ಅಪೊಲೊ ಆಸ್ಪತ್ರೆಗೆ ದಾಖಲು…

ನಾದಬ್ರಹ್ಮ‌ ಹಂಸಲೇಖ ಅವರಿಗೆ ದಿಢೀರ್ ಅನಾರೋಗ್ಯ – ಅಪೊಲೊ ಆಸ್ಪತ್ರೆಗೆ ದಾಖಲು…

ನಾದಬ್ರಹ್ಮ‌ ಹಂಸಲೇಖ ಅವರಿಗೆ ದಿಢೀರ್ ಅನಾರೋಗ್ಯ – ಅಪೊಲೊ ಆಸ್ಪತ್ರೆಗೆ ದಾಖಲು…
0

ನ್ಯೂಸ್ ಆ್ಯರೋ : ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಖ್ಯಾತಿಯ ಹಂಸಲೇಖರವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿ ವಲಯದಲ್ಲಿಯೂ ಆತಂಕ ಮನೆ ಮಾಡಿದೆ.

ಇಂದು ಹಂಸಲೇಖ ಅವರಿಗೆ ತೀವ್ರ ತರವಾದ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಬೆಂಗಳೂರಿನ ರಾಜಾಜಿನಗರದ ಫಸ್ಟ್‌ ಬ್ಲಾಕ್‌ನಲ್ಲಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಹಂಸಲೇಖ ಅವರು ಕುಟುಂಬಸ್ಥರು ಈಗಾಗಲೇ ಆಸ್ಪತ್ರೆಗೆ ಧಾವಿಸಿದ್ದು ಅವರ ಅಭಿಮಾನಿಗಳೂ ಕೂಡ ಆಸ್ಪತ್ರೆಗೆ ಕಡೆಗೆ ಧಾವಿಸಿ ಬರುತ್ತಿದ್ದಾರೆ.

ಹಂಸಲೇಖ ಅವರ ಅರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ವೈದ್ಯರು ಯಾವುದೇ ತೊಂದರೆ ಇಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿ ವರ್ಗ ಹೊಂದಿರುವ ಹಂಸಲೇಖ ಅವರು ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..