1. Home
  2. Entertainment
  3. ಇದೇನು ಕಾಂತಾ..? ‘ಕಾಂತಾರ’ದ ಗೆಲುವಲ್ಲಿ ರಿಷಭ್ ಪ್ರತಿಭೆಯನ್ನು ಮಣ್ಣು ಮುಕ್ಕಿಸಲು ಹೊರಟಿರುವ ‘ಎಡಬಿಡಂಗಿ’ಗಳಿಗೆ ಏನನ್ನೋಣ!?

ಇದೇನು ಕಾಂತಾ..? ‘ಕಾಂತಾರ’ದ ಗೆಲುವಲ್ಲಿ ರಿಷಭ್ ಪ್ರತಿಭೆಯನ್ನು ಮಣ್ಣು ಮುಕ್ಕಿಸಲು ಹೊರಟಿರುವ ‘ಎಡಬಿಡಂಗಿ’ಗಳಿಗೆ ಏನನ್ನೋಣ!?

ಇದೇನು ಕಾಂತಾ..? ‘ಕಾಂತಾರ’ದ ಗೆಲುವಲ್ಲಿ ರಿಷಭ್ ಪ್ರತಿಭೆಯನ್ನು ಮಣ್ಣು ಮುಕ್ಕಿಸಲು ಹೊರಟಿರುವ ‘ಎಡಬಿಡಂಗಿ’ಗಳಿಗೆ ಏನನ್ನೋಣ!?
0

ನ್ಯೂಸ್ ಆ್ಯರೋ : ಕಾಂತಾರ.. ಕಾಂತಾರಾ.. ಕಾಂತಾರ ಸದ್ಯಕ್ಕೆ ಎಲ್ಲ ಕನ್ನಡಿಗರ ಕೇಳಿ ಬರುತ್ತಿರೋ ಪದ ಅಂದರೆ ಇದೇ ಇರಬೇಕು. ಕಾಂತಾರ ಸಿನಿಮಾ ಕನ್ನಡಿಗರ ಹೆಮ್ಮೆ. ನಮ್ಮ ತಾಯ್ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದ ಸಿನಿಮಾ. ಈ ಸಿನಿಮಾದ ಬಗ್ಗೆ ಮಾತಿನಲ್ಲಿ, ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇದು ಕೇವಲ ಸಿನಿಮಾ ಮಾತ್ರ ಅಲ್ಲ, ಕಾಂತಾರ ಒಂದು ಸುಂದರ ಅನುಭವ. ಈ ಸಿನಿಮಾ ಕನ್ನಡ ಚಿತ್ರರಂಗದ ಮತ್ತೊಂದು ಮಾಸ್ಟರ್​ ಪೀಸ್ ಎಂದರೆ ತಪ್ಪಾಗಲ್ಲ. ಕಳೆದ ಶುಕ್ರವಾರ (Friday) ರಿಲೀಸ್ ಆದ ಈ ಸಿನಿಮಾಗೇ ವೀಕ್​ ಡೇಸ್​ ಬಂದರೂ ಎಲ್ಲ ಚಿತ್ರಮಂದಿರಗಳು ಹೌಸ್​ಫುಲ್ ಆಗಿದೆ

ಕರಾವಳಿ ಭಾಗದ, ಜಾನಪದ ಹಿನ್ನಲೆಯುಳ್ಳ ಒಂದು ದೈವದ ಕಥೆಯನ್ನು ಕಾಡಿನೊಳಗಡೆ ರಿಷಭ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದ ಮೂಲಕ ಹೇಳಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ರಿಷಭ್ ಶೆಟ್ಟಿ ಅವರು ಕಾಂತಾರದ ಮೂಲಕ ಸಾಕಷ್ಟು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಚಿತ್ರ ಕನ್ನಡದಲ್ಲಿ ದೊಡ್ಡ ಹಿಟ್ ಆಗಿ, ಬೇರೆ ಭಾಷೆಗಳಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ.

ಈ ಗೆಲುವಿನ ರೂವಾರಿ ರಿಷಭ್ ಶೆಟ್ಟಿ ಹಾಗೂ ತಂಡ. ಅದರಲ್ಲೂ ರಿಷಭ್ ಶೆಟ್ಟಿ ಜೀವನದ ಬೆಸ್ಟ್​ ಅಭಿನಯ ಅಂದರೆ ಇದೇ ಸಿನಿಮಾ ಎನ್ನಬಹುದು. ಅಷ್ಟರ ಮಟ್ಟಿಗೆ ಆ ಪಾತ್ರದ ಆಳಕ್ಕೆ ಇಳಿದು ಶಿವನಾಗಿ ಜೀವಿಸಿದ್ದಾರೆ. ಕಂಬಳ, ದೈವದ ಬಗ್ಗೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಮೊದಲ ಸಿನಿಮಾದಿಂದ ನಾಲ್ಕನೇ ನಿರ್ದೇಶನದ ಸಿನಿಮಾ ರಿಷಭ್ ಜರ್ನಿ ನೋಡಿದರೇ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ. ಗೆದ್ದ ಎತ್ತಿನ ಬಾಲ ಹಿಡಿಯುವುದು ಕೆಲವರ ಕೆಲಸ ಆಗಿದೆ ಅಂದರೆ ತಪ್ಪಾಗಲ್ಲ.

ಹೀಗಿದ್ದರೂ ಈ ಚಿತ್ರದ ಬಗ್ಗೆ ಕೆಲವು ನಕಾರಾತ್ಮಕ ಮಾತುಗಳು ಕೇಳಿ ಬಂದಿದ್ದು, ಅಲ್ಲೋ ಇಲ್ಲೋ ಎಂಬಂತೆ ರಿಷಭ್ ಶೆಟ್ಟಿ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿದೆ. ಈ ಹಿಂದೆ ಹೇಗೆ ಶ್ರೀಮನ್ನಾರಾಯಣ ಸೋತಾಗ ರಕ್ಷಿತ್ ಶೆಟ್ಟಿಯನ್ನು ಕುಗ್ಗಿಸಿದ್ದರೋ, ಹಾಗೇ ಇಂದು ಗೆದ್ದು ಬೀಗುತ್ತಿರುವ ರಿಷಬ್ ಅವರನ್ನು ತುಳಿಯುವ ಪ್ರಯತ್ನ ಆಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

‘ಕಾಂತಾರ ‘ ಒಂದು ಕಮರ್ಷಿಯಲ್ ಚಿತ್ರ. ‘ಕಾಂತಾರ’ ಕರಾವಳಿಯ ಸಂಸ್ಕೃತಿಯ ಪುಟದ ಪಟವನ್ನು ಆಗಸಕ್ಕೆ ಹಾರಿಸಿದ ಚಿತ್ರ ; ‘ಕಾಂತಾರ’ದ ಕತ್ತಲಲ್ಲಿ ಕಪ್ಪು ಚುಕ್ಕೆ ಇಡುವ ವ್ಯರ್ಥ ಪ್ರಯತ್ನ ನಿಲ್ಲಲಿ!

ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ಎರಡು ಸಂದರ್ಭದಲ್ಲಿ ಸಮಾಜದಲ್ಲಿ ಟೀಕೆ ಟಿಪ್ಪಣಿಗಳಿಗೆ ಮತ್ತು ವಿವಾದಗಳಿಗೆ ಸಿಲುಕಿಕೊಳ್ಳುತ್ತಾರೆ. ಒಂದು ಅವರು ಸಾಧನೆಯ ಉತ್ತುಂಗಕ್ಕೇರಿದಾಗ ಮತ್ತೆ ಅವರು ಸೋತು ಸುಣ್ಣವಾದ ಸಂದರ್ಭದಲ್ಲಿ! ಇದು ರಾಜಕೀಯ, ಸಿನೆಮಾ, ವ್ಯವಹಾರ ಹೀಗೆ ಯಾವುದೇ ಕ್ಷೇತ್ರದಲ್ಲೂ ನೋಡಿದರೂ ಈ ಒಂದು ಕಾಮನ್ ಫೆನಾಮಿನನ್ ನಮಗೆ ಕಾಣಸಿಗುತ್ತದೆ.

ಸದ್ಯಕ್ಕಂತೂ ಈಗ ಎಲ್ಲೆಡೆ ‘ಕಾಂತಾರ’ ಸಿನೆಮಾದ್ದೇ ಸದ್ದು. ಒಂದೆಡೆ ಅದು ಥಿಯೇಟರ್ ಗಳಲ್ಲಿ ಪ್ರೇಕ್ಷರನ್ನು ಸೆಳೆಯುತ್ತಿರು ರೀತಿಯಂತೂ ಗತಕಾಲದ ಕನ್ನಡ ಸಿನೆಮಾ ದಿನಗಳನ್ನು ನೆನಪಿಸುತ್ತಿದೆ ಎಂದು ಹಿರಿಯರೇ ಹೇಳುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಚಿತ್ರಕ್ಕೆ ಸಿಕ್ಕಿರುವ ಹೈಪ್ ಚಿತ್ರ ಬಿಡುಗಡೆಯಾಗಿ ಮೂರು ವಾರಗಳಾದರೂ ಸ್ವಲ್ಪವೂ ಕಡಿಮೆಯಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಇದರ ಹೈಪ್ ಹೆಚ್ಚುತ್ತಲೇ ಇದೆ. ಈ ಭಾಗದಲ್ಲಿ ಅದೆಷ್ಟೋ ವರ್ಷಗಳಿಂದ ಥಿಯೇಟರ್ ಕಡೆ ಮುಖಮಾಡದವರೂ ಸಹ ಈಗ ಒಂದು ಟಿಕೆಟ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಷ್ಟರಮಟ್ಟಿಗೆ ‘ಕಾಂತಾರ’ ಜನರ ಚಿತ್ರವಾಗಿ ಮಾರ್ಪಟ್ಟಿದೆ. ಇದು ಒಂದು ಚಿತ್ರದ ನಿಜವಾದ ಗೆಲುವಲ್ಲವೇ?
ಉಳಿದ ಉದ್ಯಮಗಳಂತೆ ಸಿನೆಮಾವೂ ಕೂಡ ಒಂದು ಉದ್ಯಮವೇ. ಇಲ್ಲಿ ಬಂಡವಾಳ ಹೂಡುವ ನಿರ್ಮಾಪಕ ಆ ಚಿತ್ರದ ಗೆಲುವನ್ನೇ ಬಯಸುವುದು. ಬಳಿಕ ಪ್ರಶಸ್ತಿ, ಸನ್ಮಾನ, ಬಿರುದು ಬಾವಲಿಗಲೆಲ್ಲ! ಆ ವಿಚಾರದಲ್ಲೂ ‘ಕಾಂತಾರ’ ಕಾಸು ಹಾಕಿದವರನ್ನು ಗೆಲ್ಲಿಸಿದೆ!

ಗೆಲುವಲ್ಲೂ ಕುಂದು ಹುಡುಕುವ ‘ವಿಘ್ನ ಸಂತೋಷಿ’ಗಳು!

ಕಾಂತಾರ ಎಂಬ ಚಿತ್ರ ಸೆಟ್ಟೇರಿ ಅದರ ಟ್ರೈಲರ್ ರಿಲೀಸ್ ಆಗೋವರೆಗೂ ಯಾರಿಗೂ ಈ ಚಿತ್ರದ ಬಗ್ಗೆ ಒಂದು ಹೈಪಾಗಲಿ ಅಥವಾ ಸಣ್ಣ ಕುತೂಹಲವಾಗಲಿ ಇರಲೇ ಇಲ್ಲ. ಅದು ರಿಷಭ್ ಶೆಟ್ಟಿ ಅವರ ಸ್ಟೈಲ್ ಕೂಡ. ಅವರು ತಮ್ಮ ಯಾವುದೇ ಚಿತ್ರದಲ್ಲಿ ಅದರ ತಯಾರಿ ಸಂದರ್ಭದಲ್ಲಿ ಢಾಂ.. ಡೂಂ.. ಮಾಡುವುದು ಕಡಿಮೆ, ಅವರ ಚಿತ್ರವೇ ಮಾತನಾಡುವುದು ಜಾಸ್ತಿ, ಆದರೆ ಕಾಂತಾರದಲ್ಲಿ ಅದು ಸ್ವಲ್ಪ ಹೆಚ್ಚಾಗಿಯೇ ಆಗಿದೆ! ಅದೇ ಈಗ ಕೆಲವು ಎಡಬಿಡಂಗಿಗಳ ‘ತಿಕ ಉರಿ’ಗೆ ಕಾರಣವಾಗಿರುವುದು ನಮ್ಮ ಚಿತ್ರರಂಗದ ಮತ್ತು ಒಟ್ಟಾರೆ ಕನ್ನಡಿಗರ ದೌರ್ಭಾಗ್ಯವೇ ಸರಿ.

ಅಷ್ಟಕ್ಕೂ ಈ ಚಿತ್ರವನ್ನು ಒಂದು ವಿಷಯಕ್ಕೆ ಬ್ರ್ಯಾಂಡ್ ಮಾಡುವ ಮೂಲಕ ರಿಷಭ್ ಶೆಟ್ಟಿ ಎಂಬ ಟ್ಯಾಲೆಂಟನ್ನು ಮತ್ತು ಅವರ ತಂಡದ ಪ್ರಯತ್ನವನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ ಎಂದರೆ ಖಂಡಿತ ತಪ್ಪಾಗಲಾರದು. ಇಷ್ಟಕ್ಕೂ ಕಾಂತಾರ ಚಿತ್ರವನ್ನು ಜನ ಮೆಚ್ಚಿ ಎದೆಗವುಚಿಕೊಂಡಿದ್ದಾರೆ. ಆದ್ರೆ ಇದೀಗ ಎದ್ದಿರುವ ಈ ಎಡಬಿಡಂಗಿಗಳ ತಂಡ ‘ಕಾಂತಾರ’ ಚಿತ್ರದ ಕತ್ತಲಿನಲ್ಲಿ ಕಪ್ಪು ಚುಕ್ಕೆ ಇಡುವ ಕೆಲಸಕ್ಕೆ ಕೈ ಹಾಕಿರುವುದು ತುಳುನಾಡಿನ ಸಂಸ್ಕೃತಿಗೆ ಮಾಡುತ್ತಿರುವ ಅವಮಾನವೇ ಸರಿ.

ಇದಕ್ಕೆಲ್ಲಾ ಜನ ಅದ್ರಲ್ಲೂ ನಮ್ಮ ಕರಾವಳಿಯ ಪ್ರಜ್ಞಾವಂತರು ಸರಿಯಾದ ಉತ್ತರವನ್ನೇ ಕೊಟ್ಟಾಗಿದೆ. ಆದರೂ ರಿಷಭ್ ಮೇಲೆ ಈ ಎಡಬಿಡಂಗಿಗಳು ತಮ್ಮ ಕೆಲವು ಸ್ಥಾಪಿತ ವೇದಿಕೆಗಳಲ್ಲಿ ಅರಚಾಡುತ್ತಿರುವುದು ನೋಡಿದರೆ ‘ಅವರ ಕುಂಡೆ ಮೇಲೆ ಅದೆಷ್ಟು ದಪ್ಪದ ಬರೆ ಬಿದ್ದಿದೆ ಎಂದು ಅರ್ಥವಾಗದೇ ಇರದು.

ಇಷ್ಟಕ್ಕೂ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಆಮೇಲೆ ಏನಾಯ್ತೋ ಗೊತ್ತಿಲ್ಲ ‘ಕಾಂತಾರ’ದ ಸಬ್ಜೆಕ್ಟ್ ಮೇಲೆ ಈ ಎಡಬಿಡಂಗಿಗಳ ರಿಸರ್ಚ್ ಶುರುವಾಗಿಬಿಟ್ಟಿತು. ಇದಕ್ಕೆಲ್ಲಾ ಕಾರಣವಾಗಿದ್ದು ರಿಷಭ್ ನ್ಯೂಸ್ ಚಾನೆಲ್ ಒಂದರಲ್ಲಿ ಮಾತನಾಡುತ್ತಾ ಹೇಳಿದ ಕೆಲವೊಂದು ವಿಚಾರಗಳ ಬಳಿಕ. ಇರಲಿ ಅದು ಅವರ ಸ್ವಾತಂತ್ರ್ಯ. ಇಷ್ಟಕ್ಕೂ ಅವರೇನೂ ಜನಪ್ರತಿನಿಧಿಯಲ್ಲ, ಕಲಾ ಪ್ರತಿನಿಧಿ! ತಮ್ಮ ಪ್ರತಿಭೆಯ ಮೂಸೆಯಲ್ಲಿ ಕರಾವಳಿಯ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಸೇರಿಸಿ ಒಂದು ರುಚಿಕರವಾದ ‘ಕಲಾ ಪಾನಕ’ವನ್ನು ತಯಾರಿಸಿ ಜನರ ಮುಂದಿಟ್ಟಿದ್ದಾರೆ ಮತ್ತು ಇದನ್ನು ಎಲ್ಲಾ ವರ್ಗದ ಜನ ಸ್ವೀಕರಿಸಿದ್ದಾರೆ. ಇದೇ.. ಇದೇ.. ಈ ಎಡಬಿಡಂಗಿಗಳ ಕಜ್ಜಿ ತುರಿಕೆಗೆ ಕಾರಣವಾಗಿದ್ದು!

‘ಕಾಂತಾರ’ವನ್ನು ಈ ಎಡಬಿಡಂಗಿಗಳು ಈಗ ಬಗೆಯುತ್ತಿರುವುದೇಕೆ?

ಈ ಕಾಂತಾರ ಸಬ್ಜೆಕ್ಟ್ ಬಗ್ಗೆ ಎಡಬಿಡಂಗಿಗಳ ಒಂದು ವರ್ಗ ಕುಯ್ಯೋ ಎಂದು ಅರಚುತ್ತಿದೆ! ಇದು ತುಳುನಾಡಿನ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬಿಂಬಿಸಿಲ್ಲ, ಇಲ್ಲಿ ಒಂದು ವರ್ಗವನ್ನು ಓಲೈಸಲಾಗಿದೆ, ಕಾಡಿನ ಜನರ ನೈಜ ಕಥೆ ಇದಲ್ಲ.. ಹೀಗೆ ಏನೇನೋ ಬಾಯಿಗೆ ಬಂದಂತೆ ಅರಚುತ್ತಿವೆ. ಇಲ್ಲಿ ಆಶ್ಚರ್ಯವಾಗುವ ವಿಚಾರವೆಂದರೆ ಹೀಗೆ ಬಾಯಿಬಡಿದುಕೊಳ್ಳುತ್ತಿರುವವರು ನಿಜವಾಗಿಯೂ ಕಾಂತಾರವನ್ನು ನೋಡಿದ್ದಾರೆಯೇ? ಅಥವಾ ಯಾವ ಚೀಪ್ ಮಾಲ್ ಹಾಕಿಕೊಂಡು ಅಮಲುಗಣ್ಣಿನಲ್ಲಿ ಅರ್ಧಂಬರ್ಧ ಸಿನೆಮಾ ನೋಡಿಕೊಂಡು ಇದೀಗ ದಾರಿಯಲ್ಲಿ ಅರಚುತ್ತಿದ್ದರೆಂದು ಅರ್ಥವಾಗುತ್ತಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..