BIGG BOSS KANNADA SEASON 9 : ಐದನೇ ವಾರಕ್ಕೆ ದೊಡ್ಮನೆಯಿಂದ ಹೊರಬಂದ ಗೊಂಬೆ ಖ್ಯಾತಿಯ ನೇಹಾ ಗೌಡ

ನ್ಯೂಸ್ ಆ್ಯರೋ : ಕನ್ನಡ ಕಿರುತೆರೆಗೆ ಗೊಂಬೆ ಎಂದು ಪರಿಚಿತವಾದ ನೇಹಾ ಗೌಡ ಅವರು 9ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಎಂಟ್ರಿ ಕೊಟ್ಟಿದ್ದ ನೇಹಾ ಗೌಡ ಐದೇ ವಾರಕ್ಕೆ ಆಟ ಮುಗಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ವಿವಿಧ ಕ್ಷೇತ್ರದ, ವಿಭಿನ್ನ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಪಡೆಯುತ್ತಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ ನೇಹಾ ಗೌಡ ಅವರು ಭಾಗಿಯಾಗುತ್ತಾರೆ ಎನ್ನಲಾಗಿತ್ತು. ಅಂತೂ ಈ ಸೀಸನ್‌ಗೆ ನೇಹಾ ಗೌಡ ಎಂಟ್ರಿ ಪಡೆದಿದ್ದರು.
ನೇಹಾ ಗೌಡ ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಆರು ವರ್ಷಗಳಿಗೂ ಅಧಿಕ ಕಾಲ ಗೊಂಬೆ ಶ್ರುತಿಯಾಗಿ ದೊಡ್ಡ ಅಭಿಮಾನಿ ಬಳಗ ಸಂಪಾದನೆ ಮಾಡಿದ್ದಾರೆ. ಮೂರುಗಂಟು ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದ ನೇಹಾ, ರಿಯಲ್ ಲೈಫ್ ಪತಿ ಚಂದನ್ ಜೊತೆ ‘ರಾಜಾ ರಾಣಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು.
ಕನ್ನಡದ ಜೊತೆ ತಮಿಳಿನ ಸಾಕಷ್ಟು ಧಾರಾವಾಹಿಗಳಲ್ಲಿ ನೇಹಾ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ನಂತರ ಪೂರ್ಣ ಪ್ರಮಾಣದಲ್ಲಿ ನೇಹಾ ಅವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದರು. ಅದಕ್ಕೆ ಉತ್ತರ ನೀಡಿದ್ದ ನೇಹಾ ಗೌಡ, “ಕನ್ನಡದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ. ಮೊದಲು ಜನರು ಲಕ್ಷ್ಮೀ ಬಾರಮ್ಮ ಧಾರಾವಾಹಿ ಗೊಂಬೆಯನ್ನು ಮರೆಯಬೇಕು. ಆಮೇಲೆ ನಾನು ಬೇರೆ ಪಾತ್ರ ಮಾಡಿದರೆ ಅವರಿಗೂ ಕೂಡ ಸ್ವೀಕರಿಸಲು ಸಹಾಯವಾಗುತ್ತದೆ. ಹೀರೋಯಿನ್ ಅಥವಾ ಬೇರೆ ಪಾತ್ರ ಅಂತಲ್ಲ, ವಿಭಿನ್ನವಾದ ಕ್ಯಾರೆಕ್ಟರ್ ಮಾಡಬೇಕು ಎಂದುಕೊಂಡಿದ್ದೇನೆ. ಒಳ್ಳೆಯ ಅವಕಾಶ ಬಂದರೆ ಸಿನಿಮಾ, ವೆಬ್ ಸಿರೀಸ್ ಮಾಡಲು ರೆಡಿಯಿದ್ದೇನೆ” ಎಂದು ನೇಹಾ ಗೌಡ ಹೇಳಿದ್ದರು.
ಇನ್ನೂ ದೊಡ್ಮನೆಯಲ್ಲಿ ಕೆಲವೊಂದು ಟಾಸ್ಕ್ ಗಳು ಚೆನ್ನಾಗಿ ಆಡುತ್ತಿದ್ದ ನೇಹ ಮನರಂಜನೆ ನೀಡೋದ್ರಲ್ಲಿ ಎಡವಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ಗೊಂಬೆ ಬಿಗ್ ಬಾಸ್ ಯಿಂದ ಗೇಟ್ ಪಾಸ್ ದೊರೆಯುತ್ತಿರುವುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.