ನ್ಯೂಸ್ ಆ್ಯರೋ : ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಮದುವೆಯಾಗದೆ ನಟಿ ಹಾಕಿರೋ ಪೋಸ್ಟ್ ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಇದನ್ನು ನೋಡಿದ ಕೆಲವರು ಭಾರಿ ಗೊಂದಲಕ್ಕೊಳಗಾಗಿದ್ದಾರೆ. ಈ ಹಿಂದೆ ಮದುವೆ ವಿಚಾರ ನಿತ್ಯಾ ಮೆನನ್ ಭಾರೀ ಸುದ್ದಿಯಲ್ಲಿದ್ದು, ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಈ ಸುದ್ದಿಯನ್ನು ನಟಿ ಶುದ್ಧ ವದಂತಿ ಎಂದು ತಳ್ಳಿ ಹಾಕಿದ್ದರು. ಇದೀಗ ನಟಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೆಗ್ನೆನ್ಸಿ ಕಿಟ್‌ನ ಚಿತ್ರವನ್ನು ಹಂಚಿಕೊಂಡಿದ್ದು, ಪೋಸ್ಟ್ ಗೆ “ಅಂಡ್ ದಿ ವಂಡರ್ ಬಿಗಿನ್ಸ್” ಎಂದು ಅಡಿ ಬರಹವನ್ನು ನೀಡಿದ್ದಾರೆ.
ಮದುವೆಯಾಗದ ಕಾರಣ ನಿತ್ಯಾಳ ಈ ಪೋಸ್ಟ್‌ನಿಂದ ಹಲವು ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಇದು ನಟಿಯ ಮುಂಬರುವ ಸಿನಿಮಾ ಸಂಬಂಧ ಪ್ರಚಾರದ ಭಾಗವಾಗಿ ಹಾಕಿರಬೇಕು ಎಂದಿದ್ದಾರೆ.
ಈಚೆಗೆ ನಿತ್ಯಾ ಮೆನನ್ ಅವರು ‘ಬ್ರೀತ್’ ವೆಬ್ ಸರಣಿಯಲ್ಲಿ ಅಭಿಷೇಕ್ ಬಚ್ಚನ್ ಅವರ ಜತೆ ತೆರೆ ಹಂಚಿಕೊಂಡಿದ್ದರು. ಇವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಹಿಂದಿ ಸಿನಿಮಾ ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿದ್ದರು. ಈಕೆ ಕೊನೆಯದಾಗಿ ಮಮ್ಮುಟ್ಟಿ ಅವರ ‘ಪುಜು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ನಿತ್ಯಾ ಮೆನನ್ ಸೂಪರ್ ಸ್ಟಾರ್ ಧನುಷ್ ಅವರ ‘ತಿರುಚಿತಾಂಬಲಂ’ ನಲ್ಲಿಯೂ ಅಭಿನಯಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..