1. Home
  2. Entertainment
  3. ಪವರ್ ಸ್ಟಾರ್ ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ – ಯಶಸ್ಸಿಗೆ ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ

ಪವರ್ ಸ್ಟಾರ್ ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ – ಯಶಸ್ಸಿಗೆ ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ

ಪವರ್ ಸ್ಟಾರ್ ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ – ಯಶಸ್ಸಿಗೆ ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ
0

ನ್ಯೂಸ್ ಆ್ಯರೋ : ಅಗಲಿದ ಧ್ರುವತಾರೆ ಪುನಿತ್ ರಾಜಕುಮಾರ್ ಹೆಸರಿನಲ್ಲಿ ಬಡವರಿಗಾಗಿ ಕರ್ನಾಟಕದಾದ್ಯಂತ ‘ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್’ ಓಡಾಡಲಿದೆ. ಅದಕ್ಕಾಗಿ ಯಶ್​, ಪ್ರಕಾಶ್​ ರೈ, ಸೂರ್ಯ, ಚಿರಂಜೀವಿ, ಶಿವಣ್ಣ ಮುಂತಾದವರು ಕೈ ಜೋಡಿಸಿದ್ದಾರೆ.

ಪುನೀತ್ ರಾಜಕುಮಾರ್ ರವರು ನಟನಾಗಿ ಮಾತ್ರವಲ್ಲದೇ, ಅನೇಕ ಸಾಮಾಜಿಕ ಕಾರ್ಯಗಳ ಮೂಲಕವೂ ಜನಮಾನಸದಲ್ಲಿ ಅಜರಾಮರರಾಗಿದ್ದರು. ಅವರು ಮಾಡಿದ ಕಾರ್ಯಗಳು ಎಲ್ಲರಿಗೂ ಮಾದರಿ ಆಗಿದ್ದು, ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಹಲವಾರು ಜನಪರ ಸೇವಾಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಅದೇ ರೀತಿ ದಕ್ಷಿಣ ಭಾರತದ ಪ್ರಖ್ಯಾತ ಖಳನಟ ಪ್ರಕಾಶ್​ ರೈ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ (Appu Express Ambulance) ನೀಡಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ದೊಡ್ಮನೆ ಕುಟುಂಬ ಕೂಡ ಸಾಥ್​ ನೀಡಿದೆ. ಶಿವರಾಜ್​ಕುಮಾರ್​ ಫ್ಯಾಮಿಲಿಯಿಂದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಅದೇ ರೀತಿ ‘ಮೆಗಾ ಸ್ಟಾರ್​’ ಚಿರಂಜೀವಿ, ಕಾಲಿವುಡ್​ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದ ವೇಳೆ ಯಶ್​ (Yash) ಕೂಡ ಇದಕ್ಕೆ ತಮ್ಮ ಸಹಕಾರ ಇದೆ ಎಂಬುದನ್ನು ಘೋಷಿಸಿದರು.

ಪುನೀತ್​ ರಾಜ್​ಕುಮಾರ್​ ಬಗ್ಗೆ ಬರೀ ಮಾತನಾಡುವುದಲ್ಲ. ಏನಾದರೂ ಮಾಡಬೇಕು ಎಂಬುದು ಪ್ರಕಾಶ್​ ರಾಜ್​ ಅವರ ಆಶಯ. ಅದರ ಫಲವಾಗಿಯೇ ಕಾರ್ಯರೂಪಕ್ಕೆ ಬಂದಿರುವುದು ಅಪ್ಪು ಹೆಸರಿನ ಆಂಬ್ಯುಲೆನ್ಸ್ ಸೇವೆ. ಅದಕ್ಕೆ ಅನೇಕ ಸ್ಟಾರ್​ ನಟರ ಕೈ ಜೋಡಿಸಿರುವುದು ಶ್ಲಾಘನೀಯ.

‘ಬಡವರಿಗೋಸ್ಕರ ಕರ್ನಾಟದಲ್ಲಿ ಅಪ್ಪು ಎಕ್ಸ್​ಪ್ರೆಸ್​ ಎಂಬ ಆಂಬ್ಯುಲೆನ್ಸ್ ಓಡಾಡಬೇಕು ಎಂದು ಶಿವಣ್ಣನ ಬಳಿ ಹೇಳಿದಾಗ,ಅವರ ಕುಟುಂಬದ ಕಡೆಯಿಂದ ಕೂಡ ಒಂದು ಆಂಬ್ಯುಲೆನ್ಸ್ ನೀಡಿದರು’ ಎಂದು ಪ್ರಕಾಶ್​ ರೈ ಹೇಳಿದ್ದಾರೆ.

ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್​ ಅವರು ಮಾತನಾಡಿ ‘ಇಡೀ ಕರುನಾಡಿಗೆ ಪ್ರಕಾಶ್​ ರಾಜ್​ ಅವರು ಆಂಬ್ಯುಲೆನ್ಸ್ ನೀಡಲು ಮುಂದಾಗಿರುವುದು ಈಗ ಗೊತ್ತಾಯಿತು. ಈಗ ಎಷ್ಟು ಆಂಬ್ಯುಲೆನ್ಸ್ ಆಗಿದೆಯೋ ಅದನ್ನು ಬಿಟ್ಟು ಇನ್ನುಳಿದ ಎಲ್ಲ ಜಿಲ್ಲೆಗೂ ನಾನು ಮತ್ತು ಕೆವಿಎನ್​ ಪ್ರೊಡಕ್ಷನ್​ನವರು ಜೊತೆ ಸೇರಿ ಆಂಬ್ಯುಲೆನ್ಸ್ ನೀಡುತ್ತೇವೆ’ ಎಂದು ಯಶ್​ ಘೋಷಿಸಿದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..