1. Home
  2. Entertainment
  3. ನನ್ನ ಪತ್ನಿ ಶಿಲ್ಪಾ ಶೆಟ್ಟಿಯಿಂದಲೇ ನಾನು ಮರ್ಯಾದೆ ಕಳೆದುಕೊಂಡೆ – ನೋವಲ್ಲಿ ನುಡಿದ ರಾಜ್ ಕುಂದ್ರಾ : ಹೀಗೆ ಹೇಳಿದ್ಯಾಕೆ ಗೊತ್ತಾ..!?

ನನ್ನ ಪತ್ನಿ ಶಿಲ್ಪಾ ಶೆಟ್ಟಿಯಿಂದಲೇ ನಾನು ಮರ್ಯಾದೆ ಕಳೆದುಕೊಂಡೆ – ನೋವಲ್ಲಿ ನುಡಿದ ರಾಜ್ ಕುಂದ್ರಾ : ಹೀಗೆ ಹೇಳಿದ್ಯಾಕೆ ಗೊತ್ತಾ..!?

ನನ್ನ ಪತ್ನಿ ಶಿಲ್ಪಾ ಶೆಟ್ಟಿಯಿಂದಲೇ ನಾನು ಮರ್ಯಾದೆ ಕಳೆದುಕೊಂಡೆ – ನೋವಲ್ಲಿ ನುಡಿದ ರಾಜ್ ಕುಂದ್ರಾ : ಹೀಗೆ ಹೇಳಿದ್ಯಾಕೆ ಗೊತ್ತಾ..!?
0

ನ್ಯೂಸ್ ಆ್ಯರೋ : ಅಶ್ಲೀಲ ವಿಡಿಯೋ ನಿರ್ಮಾಣದ ಕೇಸ್​ನಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ಉದ್ಯಮಿ ರಾಜ್​ ಕುಂದ್ರಾ ಅವರು ಬಹುತೇಕ ತೆರೆಮರೆಗೆ ಸರಿದರು. ಮೊದಲೆಲ್ಲ ಪತ್ನಿ ಶಿಲ್ಪಾ ಶೆಟ್ಟಿ ಜೊತೆ ಖುಷಿ ಖುಷಿಯಿಂದ ಪೋಸ್​ ನೀಡುತ್ತಿದ್ದ ಅವರು ಈಗ ಸಂಪೂರ್ಣ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಯಾಮಾರಿಸಿ ಅಶ್ಲೀಲ ಸಿನಿಮಾ ಚಿತ್ರೀಕರಣ ಮಾಡಿದ ಆರೋಪ ರಾಜ್​ ಕುಂದ್ರಾ ಅವರ ಮೇಲಿದೆ.

ಈ ಪ್ರಕರಣದಲ್ಲಿ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಹಲವು ದಿನಗಳ ಕಾಲ ಜೈಲಿನಲ್ಲಿ ಕಂಬಿ ಎಣಿಸಿದ ನಂತರ ಅವರು ಜಾಮೀನಿನ ಮೇಲೆ ಹೊರಬಂದರು. ಆ ಘಟನೆ ನಡೆದು ಒಂದು ವರ್ಷವೇ ಕಳೆದಿದ್ದರೂ ಕೂಡ ರಾಜ್​ ಕುಂದ್ರಾ ಅವರು ಸಾರ್ವಜನಿಕವಾಗಿ ಮುಖ ತೋರಿಸಲು ಹಿಂಜರಿಯುತ್ತಿದ್ದಾರೆ.

ಹೌದು.. ಹಿಂದೆಲ್ಲಾ ಉದ್ಯಮಿ ರಾಜ್ ಕುಂದ್ರಾ ಹೀಗಿರಲಿಲ್ಲ. ಪತ್ನಿ ಶಿಲ್ಪಾ ಶೆಟ್ಟಿ ಹಾಗೂ ಕುಟುಂಬಸ್ಥರ ಜೊತೆಗೆ ಹೊರಗೆ ಬಂದಾಗ ಕ್ಯಾಮರಾ ಕಣ್ಣುಗಳ ಮುಂದೆ ನಿಂತು ನಗು ನಗುತ್ತಲೇ ಪೋಸ್ ಕೊಡುತ್ತಿದ್ದರು. ಏರ್‌ಪೋರ್ಟ್‌ ನಲ್ಲಾಗಲಿ, ಪಾರ್ಟಿ, ಫಂಕ್ಷನ್‌ಗಳಲ್ಲಾಗಲಿ ಪತ್ನಿ ಶಿಲ್ಪಾ ಶೆಟ್ಟಿ ಜೊತೆ ನಿಂತು ಪೋಸ್ ಕೊಟ್ಟ ಬಳಿಕವೇ ರಾಜ್ ಕುಂದ್ರಾ ತೆರಳುತ್ತಿದ್ದರು.

ಆದರೆ, ಈಗ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಕ್ಕೇ ಉದ್ಯಮಿ ರಾಜ್ ಕುಂದ್ರಾ ಹಿಂದೇಟು ಹಾಕುತ್ತಿದ್ದು, ಕ್ಯಾಮರಾ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಶತ ಪ್ರಯತ್ನ ಪಡುತ್ತಿದ್ದಾರೆ. ಕ್ಯಾಮರಾ ಕಂಡ್ರೆ ರಾಜ್‌ ಕುಂದ್ರಾ ತಬ್ಬಿಬ್ಬಾಗುತ್ತಿದ್ದು, ಅವರ ಈ ಪರಿಸ್ಥಿತಿಗೆ ಅಶ್ಲೀಲ ಚಿತ್ರ ನಿರ್ಮಾಣ ದಂಧೆ ಪ್ರಕರಣವೇ ಕಾರಣ ಎನ್ನಲಾಗುತ್ತಿದೆ.

ಇನ್ನೂ ಅಶ್ಲೀಲ ಚಿತ್ರ ನಿರ್ಮಾಣ ದಂಧೆ ಪ್ರಕರಣದಲ್ಲಿ ಸಿಲುಕಿದ್ದ ರಾಜ್ ಕುಂದ್ರಾ ಅರೆಸ್ಟ್ ಆಗಿ ಸುಮಾರು ಎರಡು ತಿಂಗಳ ಕಾಲ ರಾಜ್ ಕುಂದ್ರಾ ನ್ಯಾಯಾಂಗ ಬಂಧನದಲ್ಲಿದ್ದರು. ರಾಜ್‌ ಕುಂದ್ರಾ ಅವರ ಬಂಧನದಿಂದಾಗಿ ಇಡೀ ಕುಟುಂಬಕ್ಕೆ ಮುಜುಗರ ಉಂಟಾಗಿತ್ತು. ರಾಜ್​ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬಕ್ಕೆ ಮುಜುಗರಕ್ಕೀಡಾಗಿತ್ತು. ಒಂದಷ್ಟು ದಿನಗಳ ಕಾಲ ಶಿಲ್ಪಾ ಶೆಟ್ಟಿ ಕೂಡ ಮನೆಯಿಂದ ಹೊರಬಂದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳಿದರು. ತಮ್ಮ ದೈನಂದಿನ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದರು. ಕಹಿ ಘಟನೆಯನ್ನು ಆದಷ್ಟು ಮರೆಯಲು ಅವರು ಪ್ರಯತ್ನಿಸಿದರು. ಆದರೆ ರಾಜ್​ ಕುಂದ್ರಾ ಅವರಿಗೆ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಎದುರು ಮುಖ ತೋರಿಸಲು ಅವರು ಒಪ್ಪುತ್ತಿಲ್ಲ.

ಆದರೀಗ ರಾಜ್ ಕುಂದ್ರಾ ಅವರ ಈ ಪರಿಸ್ಥಿತಿಗೆ ಶಿಲ್ಪಾ ಶೆಟ್ಟಿಯನ್ನು ನೇರ ಹೊಣೆ ಮಾಡಿದ್ದು, ಪತ್ನಿ ಶಿಲ್ಪಾ ಶೆಟ್ಟಿಯಿಂದ ನನಗೆ ಕುಖ್ಯಾತಿ ಸಿಕ್ಕಿದೆ ಎಂದು ರಾಜ್​ ಕುಂದ್ರಾ ಹೇಳಿದ್ದಾರೆ.

ಹೌದು.. ಇಷ್ಟು ದಿನ ಸೋಷಿಯಲ್ ಮೀಡಿಯಾದಿಂದ ದೂರಾಗಿ ಸೈಲೆಂಟ್ ಆಗಿದ್ದ ರಾಜ್ ಕುಂದ್ರಾ ಹಲವು ದಿನಗಳ ಬಳಿಕ ಟ್ವಿಟರ್ ಗೆ ರೀ ಎಂಟ್ರಿ ನೀಡಿದ್ದು, ನೆಟ್ಟಿಗರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನೀವು ಫೇಮಸ್ ಅನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ. ನೀವು ಯಾರಿಗೂ ಗೊತ್ತೇ ಇಲ್ಲ ಅಂತಿದ್ದರೆ ಟ್ರೋಲ್ ಮಾಡುವ ಅವಶ್ಯಕತೆ ಇರಲಿಲ್ಲ. ನೀನು ಫೇಮಸ್​ ಆಗಿದ್ದೇ ಪತ್ನಿ ಶಿಲ್ಪಾ ಶೆಟ್ಟಿಯಿಂದ’ ಎಂದು ನೆಟ್ಟಿಜನರು ಕಾಮೆಂಟ್ ಮಾಡಿದ್ದು, ಇದನ್ನು ಕಂಡು ಕೆಂಡಾಮಂಡಲವಾದ ರಾಜ್ ಕುಂದ್ರಾ, ‘ನಾನು ಶಿಲ್ಪಾ ಶೆಟ್ಟಿ ಪತಿ ಅನ್ನುವುದೇ ನನಗೆ ನೆಗೆಟಿವ್ ಆಗಿದೆ. ಅವರಿಂದಾಗಿಯೇ ನಾನು ಮರ್ಯಾದೆ ಕಳೆದುಕೊಂಡೆ, ಅವರಿಂದ್ಲೇ ಕುಖ್ಯಾತಿ ಪಡೆದೆ’ ಎಂದಿದ್ದು, ಪತ್ನಿಯ ಪಾಪ್ಯುಲಾರಿಟಿ ನನಗೆ ಮುಳುವಾಗಿದೆ ಎಂದು ಉತ್ತರಿಸಿದ್ದಾರೆ. ಅಲ್ಲದೇ ಆ ರೀ ಟ್ವೀಟ್ ಜೊತೆಗೆ #trollers ಎಂದು ಹ್ಯಾಶ್​ ಟ್ಯಾಗ್​ ಬಳಸಿದ್ದು, ಮೊದಲ ಬಾರಿಗೆ ತಮ್ಮ ಫೇಸ್ ಮಾಸ್ಕ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಮುಖ ಮುಚ್ಚಿಕೊಂಡು ಓಡಾಡುವಂತಹ ಕೆಲಸ ಮಾಡಿದ್ದೀರಿ. ತಪ್ಪು ತಿದ್ದಿಕೊಂಡು ಚೆನ್ನಾಗಿ ಮುಖ ತೋರಿಸಿ ಎಂದು ಕಮೆಂಟ್ ಮಾಡಿದ್ದು, ಇದಕ್ಕೆ ಪ್ರತಿಯಾಗಿ ರಾಜ್ ಕುಂದ್ರಾ, ನಾನು ಜನರಿಗಾಗಿ ಮುಖ ಮುಚ್ಚಿಕೊಂಡಿಲ್ಲ. ಮಾಧ್ಯಮಗಳಿಗೆ ನನ್ನ ಮುಖ ತೋರಿಸಬಾರದು ಅಂತ ಹೀಗೆ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನೂ ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮುಖ ಕವರ್ ಮಾಡಿಕೊಂಡು, ಮೀಡಿಯಾವನ್ನು ಫೇಸ್ ಮಾಡದೆ ಓಡಾಡುತ್ತಿರುವ ರಾಜ್ ಕುಂದ್ರಾ ಯದ್ವಾ ತದ್ವಾ ಟ್ರೋಲ್ ಆಗಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..