1. Home
  2. Entertainment
  3. ಮೊದಲ ಮಗು ನಿರೀಕ್ಷೆಯಲ್ಲಿ ರಾಣಾ – ಮಿಹಿಕಾ..!! – ತಂದೆಯಾಗಲಿದ್ದಾರೆ ಬಾಹುಬಲಿಯ ಬಳ್ಳಾಲದೇವ…!!

ಮೊದಲ ಮಗು ನಿರೀಕ್ಷೆಯಲ್ಲಿ ರಾಣಾ – ಮಿಹಿಕಾ..!! – ತಂದೆಯಾಗಲಿದ್ದಾರೆ ಬಾಹುಬಲಿಯ ಬಳ್ಳಾಲದೇವ…!!

ಮೊದಲ ಮಗು ನಿರೀಕ್ಷೆಯಲ್ಲಿ ರಾಣಾ – ಮಿಹಿಕಾ..!! – ತಂದೆಯಾಗಲಿದ್ದಾರೆ ಬಾಹುಬಲಿಯ ಬಳ್ಳಾಲದೇವ…!!
0

ನ್ಯೂಸ್ ಆ್ಯರೋ‌ : ನಟ ರಾಣಾ ದಗ್ಗುಬಾಟಿ ಅವರು ಸಖತ್ ಬೇಡಿಕೆ ಇರುವಂತಹ ಕಲಾವಿದ. ‘ಬಾಹುಬಲಿ’ ಸಿನಿಮಾದಲ್ಲಿ ಅವರು ಮಾಡಿದ ಬಲ್ಲಾಳ ದೇವ ಎಂಬ ಪಾತ್ರವನ್ನು ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ. ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆದಿದೆ. ಗೆಳತಿ ಮಿಹೀಕಾ ಬಜಾಜ್​ ಜೊತೆ ಅವರು 2020ರ ಆಗಸ್ಟ್​ 8ರಂದು ಮದುವೆ ಆದ ರಾಣಾ ಇತ್ತೀಚೆಗೆ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಈ ನಡುವೆಯೇ ರಾಣಾ ದಂಪತಿ ಕುರಿತಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

ಹೌದು… ಟಾಲಿವುಡ್​ ಅಂಗಳದಲ್ಲಿ ಇಂತಹದೊಂದು ಗುಸುಗುಸು ಹಬ್ಬಿದ್ದು, ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೇ ಮಿಹಿಕಾ ಅವರ ಕರ್ವಾ ಚೌತ್ ಸಂಭ್ರಮದ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಮದುವೆಯ ಉಂಗುರಗಳನ್ನು ತೊಟ್ಟ ಅವರ ಕೈಗಳ ಫೋಟೊವನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಅದಕ್ಕೆ ‘2 ಆತ್ಮಗಳು, 2 ಜನರು, 2 ಕೈಗಳು, 1 ಭರವಸೆ. ಒಟ್ಟಿಗೆ ಅನಂತ. ಇಂದು ಮತ್ತು ಪ್ರತಿದಿನ ಪ್ರೀತಿಯನ್ನು ಆಚರಿಸೋಣ. ನೀವು ನನ್ನನ್ನು ಸಂಪೂರ್ಣಗೊಳಿಸಿದ್ದೀರಿ!’ ಎಂದು ಸುಂದರವಾಗಿ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ರಾಣಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ, ಗರ್ಭಿಣಿಯಾಗಿರುವ ಬಗ್ಗೆ ದಂಪತಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇನ್ನೂ ಕೆಲ ದಿನಗಳ ಹಿಂದೆಯಷ್ಟೇ ಈ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, . ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್​ ನಡುವೆ ವೈಮನಸ್ಸು ಮೂಡಿದೆ ಎನ್ನಲಾಗಿತ್ತು.ಇದಕ್ಕೆ ಪುಷ್ಟಿ ನೀಡುವಂತೆ ರಾಣಾ ಇನ್​ಸ್ಟಾಗ್ರಾಮ್​ ಖಾತೆಯಲ್ಲಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದರು. ಒಂದಷ್ಟು ದಿನಗಳ ಕಾಲ ಅವರು ಸೋಶಿಯಲ್​ ಮೀಡಿಯಾದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ರಾಣಾ ದಗ್ಗುಬಾಟಿ ಅವರು ಈ ರೀತಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಆದರೆ ಇಷ್ಟೆಲ್ಲ ಗುಸುಗುಸು ಕೇಳಿಬಂದರೂ ಕೂಡ ರಾಣಾ ಪತ್ನಿ ಮಿಹೀಕಾ ಬಜಾಜ್​ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಬದಲಾಗಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ತೋರಿಸಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..