ಮಾಲ್ಡೀವ್ಸ್ ನಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್ – ಜೊತೆಗಿದ್ದಾರಾ ವಿಜಯ್ ದೇವರಕೊಂಡ?

ನ್ಯೂಸ್ ಆ್ಯರೋ : ಚಿತ್ರರಂಗದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಮಾಲ್ಡೀವ್ಸ್ ಟ್ರಿಪ್ ಮತ್ತು ಅಲ್ಲಿನ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ. ಬರಿ ಫೋಟೋ ಮಾತ್ರವಲ್ಲ ಫೋಟೋ ತೆಗೆದವರು ಯಾರಿರಬಹುದು ಎಂಬ ವಿಷಯಕ್ಕೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
_1.jpg)
‘ಗುಡ್ ಬೈ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿದೇಶಕ್ಕೆ ಹಾರಿರುವ ರಶ್ಮಿಕಾ, ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಂದಾಸ್ ಆಗಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಅವೆಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಅವುಗಳನ್ನು ನೋಡಿ ಕೆಲವು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ರೆ, ಕೆಲವರು ಫೋಟೋ ತೆಗೆದವರು ವಿಜಯ್ ದೇವರಕೊಂಡ ಇರಬಹುದು ಎಂದು ಹೇಳುತ್ತಿದ್ದಾರೆ.
ಅಷ್ಟಕ್ಕೂ ಫ್ಯಾನ್ಸ್ ಗಳಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರು ಒಟ್ಟಿಗೆ ಇದ್ದಾರೆ ಎಂಬ ಅನುಮಾನ ಮೂಡಲು ಕೆಲ ಕಾರಣಗಳಿವೆ. ಅಕ್ಟೋಬರ್ 7 ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಕೆಲವು ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ರು. ಇದು ಅವರಿಬ್ಬರು ಒಟ್ಟಿಗೆ ಪ್ರಯಾಣ ಮಾಡಿರಬಹುದು ಎಂಬ ಅನುಮಾನ ಮೂಡಿಸಿತ್ತು.
.jpg)
ಇಷ್ಟೆ ಅಲ್ಲದೆ ರಶ್ಮಿಕಾ ತಮ್ಮ ಫೋಟೋಗಳಲ್ಲಿ ಧರಿಸಿರುವ ಕೂಲಿಂಗ್ ಗ್ಲಾಸ್ ವಿಜಯ್ ದೇವರಕೊಂಡ ಅವರದ್ದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕಡಲ ತೀರದಲ್ಲಿ ಹಾಟ್ ಆಗಿ ಕಾಣಿಕೊಂಡಿರುವ ರಶ್ಮಿಕಾ ಫೋಟೋಗಳ ಕ್ರೆಡಿಟ್ ವಿಜಯ್ ದೇವರಕೊಂಡ ಅವರಿಗೆ ಸಲ್ಲಬೇಕಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಬಳಿಕ ಈ ಜೋಡಿ ನಡುವೆ ಆಪ್ತತೆ ಹೆಚ್ಚಾಗಿದೆ. ಅನೇಕ ಬಾರಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಸ್ನೇಹದ ಬಗ್ಗೆ ಹಲವು ಬಾರಿ ಪ್ರಶ್ನೆ ಉದ್ಭಸಿದಾಗ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿ ಗಾಸಿಪ್ ಗಳಿಗೆ ತೆರೆ ಎಳೆಯುತ್ತಿದ್ದರು ಕೂಡ ಅಭಿಮಾನಿಗಳು ಮಾತ್ರ ತಮ್ಮ ಪ್ರಶ್ನೆಗಳನ್ನು ಮಾತ್ರ ನಿಲ್ಲಿಸಿಲ್ಲ. ಸದ್ಯಕ್ಕಂತೂ ಜನರ ಕಮೆಂಟ್ ಗಳಿಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿಲ್ಲ.
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಆರಂಭ ಮಾಡಿದ್ದ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ದೇಶದೆಲ್ಲೆಡೆ ಮಿಂಚುತ್ತಿದ್ದಾರೆ. ಸ್ಯಾಂಡಲ್‍ವುಡ್‌ನ ಕಿರಿಕ್ ಪಾರ್ಟಿಯ ಸಾನ್ವಿ ಟಾಲಿವುಡ್, ಬಾಲಿವುಡ್‍ನ ಅಪಾರ ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದು ಉತ್ತಮ ನಟಿ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.