ಪಡ್ಡೆ ಹೈಕಳ ಹೃದಯ ಬಡಿತ ಹೆಚ್ಚಿಸಿದ ರವೀನಾ ಟಂಡನ್ ಪುತ್ರಿ – ಹಾಟ್ ಹಾಟ್ ಪೋಸ್ ಕೊಟ್ಟು ಮಿಂಚಿದ ರಾಶಾ

ನ್ಯೂಸ್ ಆ್ಯರೋ : ಬಾಲಿವುಡ್ ಸಿನಿ ರಂಗದಲ್ಲಿ 90 ರ ದಶಕ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಚಿತ್ರಗಳು, ನಟ-ನಟಿಯರು ಮತ್ತು ಹಾಡುಗಳಿಂದ ಸಾಕಷ್ಟು ಫೇವರಿಟ್ ಆಗಿತ್ತು. ಅದರಲ್ಲಿ 90 ರ ದಶಕದ ಪ್ರಸಿದ್ಧ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು. ಟಿಪ್ ಟಿಪ್ ಬರ್ಸಾ ಪಾನಿ ಹಾಡಿನಲ್ಲಿ ಅವರ ನೃತ್ಯವನ್ನು ಜನರು ಇನ್ನೂ ಮರೆಯದೇ ನೆನಪಿಸಿಕೊಳ್ಳುತ್ತಾರೆ.

ರವೀನಾ ಟಂಡನ್ ಅವರಿಗೆ ಸದ್ಯ 47 ಹರೆಯ. ಆದರೆ ನಟಿ ರವೀನಾ ಟಂಡನ್ ಈಗಲೂ ಸಖತ್ ಫಿಟ್ ಮತ್ತು ಯಂಗ್ ಆಗಿ ಕಾಣುತ್ತಾರೆ. ತಮ್ಮ ಫಿಟ್‌ನೆಸ್‌ನಿಂದ ಇಂದಿನ ಯುವ ನಟಿಯರಿಗೂ ಠಕ್ಕರ್ ನೀಡುವಂತೆ ಇದ್ದಾರೆ.
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 2ನಲ್ಲಿ ರಮಿಕಾ ಸೇನ್ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟಿ ರವೀನಾ ಟಂಡನ್ 47 ವರ್ಷ ವಯಸ್ಸಿನಲ್ಲೂ ತುಂಬಾ ಯಂಗ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಈ ಹಿಂದೆ ರವೀನಾ ಟಂಡನ್ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ದಶಕದ ಬಳಿಕ ಮತ್ತೊಮ್ಮೆ ‘ಕೆಜಿಎಫ್ 2’ ಮೂಲಕ ಬಾಲಿವುಡ್ ನಟಿ ಚಂದನವನಕ್ಕೆ ಕಂಬ್ಯಾಕ್ ಮಾಡಿದ್ದರು.

ಆದರೀಗ ರವೀನಾ ಟಂಡನ್ ಅವರ ಮಗಳು ರಾಶಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು, ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ರಾಶಾ ಅವರ ಸೌಂದರ್ಯವನ್ನು ಕಂಡು ಬೆರಗಾಗಿದ್ದು, ಕಣ್ಣು ಕುಕ್ಕುವಂತಿರುವ ಆ ಮುದ್ದು ಮುಖದ ಚೆಲುವನ್ನು ಕಂಡು ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು.. ಕಂದು ಹಸಿರು ಬಣ್ಣದ ಲೆಹಂಗಾದಲ್ಲಿ ದಂತದ ಗೊಂಬೆಯಂತೆ ಕಾಣುತ್ತಿರುವ ರಾಶಾ ಕ್ಯಾಮಾರಾ ಮುಂದೆ ಗ್ಮಾಮರಸ್ ಆಗಿ ಪೋಸ್ ನೀಡಿದ್ದು, ಮಾದಕ ನೋಟದಿಂದಲೇ ನೆಟ್ಟಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಸಾಂಪ್ರದಾಯಿಕ ಉಡುಗೆಯಾದ ಲೆಹೆಂಗಾದಲ್ಲೂ ಸಖತ್ ಹಾಟ್ ಆಗಿ ಕಾಣುತ್ತಿರುವ ರಾಶಾ ಮೈಮಾಟವನ್ನು ಕಂಡು ನೆಟಿಜನ್ಗಳು ಫಿದಾ ಆಗಿದ್ದು, ತಮ್ಮ ಮೋಹಕ ಲುಕ್ನಿಂದಲೇ ಇಂಟರ್ನೆಟ್ ಅಲ್ಲಿ ಕಿಚ್ಚು ಹಚ್ಚಿದ್ದಾರೆ.
ಲೆಹೆಂಗಾ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಟೋಗಳನ್ನು ನೋಡಿದ ಜನರು ಅವರನ್ನು ಸೌಂದರ್ಯ ಗಣಿ ಎಂದು ಬಿಂಬಿಸುತ್ತಿದ್ದು, ರಾಶಾ ಅವರ ಪೋಸ್ಗಳನ್ನು ಕಂಡು ಪಡ್ಡೆ ಹೈಕ್ಳ ಹೃದಯ ಬಡಿತ ಹೆಚ್ಚಿದೆ.
ಇನ್ನೂ ಗಣೇಶ ಚತುರ್ಥಿ ವೇಳೆ ರವೀನಾ ಅವರು ಮಗಳು ರಾಶಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಪಾಪರಾಜಿಗಳು ತಾಯಿ-ಮಗಳ ಜೋಡಿಯ ಫೋಟೋಗಳನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆ ಫೋಟೋ ವೈರಲ್ ಆಗಿತ್ತು. ಅಂದು ಕೊಂಡ ರವೀನಾ ಟಂಡನ್ ಅವರ ಪುತ್ರಿ ಥೇಟ್ ಅಮ್ಮನ ಪಡಿಯಚ್ಚಿನಂತಿದ್ದು, ಅಮ್ಮನಂತೆಯೇ ಬೆಳೆಯುತ್ತಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದರು.