1. Home
  2. Entertainment
  3. ಸ್ಯಾಂಡಲ್ ವುಡ್ ನಲ್ಲಿ ಉಳಿಯಬೇಕಾದ್ರೆ ರಾಜ್ ಕುಟುಂಬಕ್ಕೆ ಸಲಾಂ ಹೊಡೀಬೇಕು – RSS ಕಾರ್ಯಕರ್ತೆಯ ಟ್ವೀಟ್ ವೈರಲ್, ಟ್ವೀಟ್ ನಲ್ಲಿ ಏನಿದೆ…?

ಸ್ಯಾಂಡಲ್ ವುಡ್ ನಲ್ಲಿ ಉಳಿಯಬೇಕಾದ್ರೆ ರಾಜ್ ಕುಟುಂಬಕ್ಕೆ ಸಲಾಂ ಹೊಡೀಬೇಕು – RSS ಕಾರ್ಯಕರ್ತೆಯ ಟ್ವೀಟ್ ವೈರಲ್, ಟ್ವೀಟ್ ನಲ್ಲಿ ಏನಿದೆ…?

ಸ್ಯಾಂಡಲ್ ವುಡ್ ನಲ್ಲಿ ಉಳಿಯಬೇಕಾದ್ರೆ ರಾಜ್ ಕುಟುಂಬಕ್ಕೆ ಸಲಾಂ ಹೊಡೀಬೇಕು – RSS ಕಾರ್ಯಕರ್ತೆಯ ಟ್ವೀಟ್ ವೈರಲ್, ಟ್ವೀಟ್ ನಲ್ಲಿ ಏನಿದೆ…?
0

ನ್ಯೂಸ್ ಆ್ಯರೋ : ಕಾಂತಾರ ಸಿನಿಮಾವನ್ನು ಹೊಗಳುವ ಭರದಲ್ಲಿ ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಅವರ ನೆಪೋಕಿಡ್ಸ್ ದೇವರಿದ್ದಂತೆ ಎಂದು ಟ್ವೀಟ್ ಮಾಡುವ ಮೂಲಕ ಆರ್ಎಸ್ಎಸ್ ಕಾರ್ಯಕರ್ತೆ ಜ್ಯೋತಿ ಸುಪರ್ಣಾ ಚಿಂಚೋಳಿ ವಿರುದ್ಧ ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಕರ್ನಾಟಕ ರತ್ನ’ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ಕರುನಾಡು ಇಂದಿಗೂ ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನಿಸುತ್ತಿದೆ. ಆದರೆ ಆರ್ಎಸ್ಎಸ್ ಕಾರ್ಯಕರ್ತೆ ಜ್ಯೋತಿ ಸುಪರ್ಣಾ ಚಿಂಚೋಳಿ ಅವರು ಪುನೀತ್ ರಾಜ್ಕುಮಾರ್ ಅವರನ್ನು ನೆಪೋಕಿಡ್ ಎಂದು ಕರೆಯುವ ಮೂಲಕ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಾಂತಾರ ಸಿನಿಮಾವನ್ನು ಹೊಗಳುವ ಭರದಲ್ಲಿ ರಾಜ್‌ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಅಣ್ಣವ್ರ ಕುಟುಂಬದ ಅಭಿಮಾನಿಗಳು ಜ್ಯೋತಿ ವಿರುದ್ಧ ಗರಂ ಆಗಿದ್ದಾರೆ.


ರಾಜ್ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಅದೆಷ್ಟೋ ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದು, ಚಿತ್ರೋಧ್ಯಮದ ಬೆಳವಣಿಗೆಗೆ ರಾಜ್ ಕುಟುಂಬದ ಪಾಲು ಅಪಾರವಿದೆ. ಪುನೀತ್ ರಾಜ್ಕುಮಾರ್ ಕೂಡ ತಮ್ಮ ‘ಪಿಆರ್ಕೆ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ನೀಡಿದ್ದರು. ಶಿವರಾಜ್ಕುಮಾರ್ ಅವರು ಇಂದಿಗೂ ಹೊಸಬರ ಬೆನ್ನು ತಟ್ಟುತ್ತಲೇ ಇದ್ದಾರೆ. ಅಂಥವರ ವಿರುದ್ಧವೇ ನೆಪೋಟಿಸಂ ಆರೋಪ ಮಾಡಿರುವ ಜ್ಯೋತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?

‘ಬಾಲಿವುಡ್ನಲ್ಲಿ ಕರಣ್ ಜೋಹರ್ ಇರುವ ರೀತಿ, ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಅವರ ನೆಪೋಕಿಡ್ಸ್ ದೇವರಿದ್ದಂತೆ. ಯಾರಾದರೂ ಸ್ಯಾಂಡಲ್ವುಡ್ನಲ್ಲಿ ಉಳಿಯಬೇಕಾದರೆ ಇವರಿಗೆ ಸಲಾಂ ಹೊಡೆಯಬೇಕು. ರಿಷಬ್ ಶೆಟ್ಟಿ ಕೂಡ ಪುನೀತ್ ರಾಜ್ಕುಮಾರ್ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಅಂತ ಹೇಳಬೇಕಾಯಿತು’ ಎಂದು ಜ್ಯೋತಿ ಟ್ವೀಟ್ ಆರಂಭಿಸಿದ್ದಾರೆ.

‘ಪುನೀತ್ ನಿಧನದಿಂದ ನನಗೆ ಬೇಸರ ಆಗಿದೆ. ಆದರೆ ವಾಸ್ತವ ಏನೆಂದರೆ, ಪ್ರತಿಭಾವಂತ ನಟ/ನಿರ್ದೇಶಕ/ಬರಹಗಾರ ರಿಷಬ್ ಶೆಟ್ಟಿ ಅವರು ಸ್ಯಾಂಡಲ್ವುಡ್ನಲ್ಲಿ ದಶಕಗಳ ಕಾಲ ಕಷ್ಟಪಡಬೇಕಾಯಿತು. ದಶಕದ ಹಿಂದೆಯೇ ಅವರು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರು’.

‘ಪ್ರಾಮಾಣಿಕವಾಗಿ ಹೇಳಿ, ಪುನೀತ್ಗೆ ಈ ಪಾತ್ರ ಮಾಡಲು ಸಾಧ್ಯವಾಗುತ್ತಿತ್ತಾ? ದೈವಾರಾಧನೆ ಮತ್ತು ಭೂತಕೋಲದಲ್ಲಿ ರಿಷಬ್ ಅವರ ಮೂಲ ಸಂಸ್ಕೃತಿ ಇರುವುದರಿಂದ ಅವರಿಗೆ ಈ ದೈವಿ ಪರ್ಫಾರ್ಮೆನ್ಸ್ ನೀಡಲು ಸಾಧ್ಯವಾಯ್ತು’ ಎಂದು ಜ್ಯೋತಿ ಪೋಸ್ಟ್ ಮಾಡಿದ್ದಾರೆ. ಅವರ ಈ ಟ್ವಿಟರ್ ಖಾತೆಯನ್ನು ನರೇಂದ್ರ ಮೋದಿ, ಸಿ.ಟಿ. ರವಿ ಮುಂತಾದವರು ಕೂಡ ಫಾಲೋ ಮಾಡುತ್ತಿದ್ದಾರೆ.

ಕಾಂತಾರ ಸಿನಿಮಾ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..