ನ್ಯೂಸ್ ಆ್ಯರೋ: ನನಗೆ ಭೂತವಾಗುವ ಅವಕಾಶ ಸಿಕ್ಕರೆ ವಿಕ್ಕಿ ಕೌಶಲ್ ಬೆನ್ನು ಬೀಳುವುದಾಗಿ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ನಟಿ ಕತ್ರಿನಾ ಕೈಫ್‌ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇವರ ಹೇಳಿಕೆಗೆ ನಟಿ ಕತ್ರಿನಾ ನಾಚಿ ನೀರಾಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದಿಯ ಬಿಗ್ ಬಾಸ್ 16ರ ವೇದಿಕೆಗೆ ತಮ್ಮ ಮುಂಬರುವ ‘ಫೋನ್ ಬೂತ್’ ಚಿತ್ರದ ಪ್ರಚಾರಕ್ಕಾಗಿ ಕತ್ರಿನಾ ಆಗಮಿಸಿದ್ದರು. ಈ ವೇಳೆ ಸಲ್ಮಾನ್ ಖಾನ್‌ಗೆ ನೀವು ಭೂತವಾದರೆ ಯಾರ ಬೆನ್ನು ಹತ್ತುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್, ಅಲ್ಲೊಬ್ಬ ವಿಕ್ಕಿ ಕೌಶಲ್ ಎಂಬ ಹುಡುಗನಿದ್ದಾನೆ. ಅವನ ಬೆನ್ನು ಹತ್ತುತ್ತೇನೆ ಎಂದರು. ಕತ್ರಿನಾ ಯಾಕೆ ಎಂದು ಮರು ಪ್ರಶ್ನಿಸಿದ್ದಕ್ಕೆ ‘ಅವನು ತುಂಬಾ ಪ್ರೀತಿಸುವ, ಕಾಳಜಿಯುಳ್ಳ, ಧೈರ್ಯಶಾಲಿ ವ್ಯಕ್ತಿಯಾಗಿದ್ದಾನೆ. ಅವನ ಬಗ್ಗೆ ಹೇಳುವಾಗ ನೀವು ನಾಚಿ ನೀರಾದಿರಿ’ ಎಂದು ಸಲ್ಮಾನ್ ತಮಾಷೆಯಾಗಿ ಮಾತನಾಡಿದರು.
ಗುರ್‌ಮೀತ್ ಸಿಂಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಫೋನ್ ಬೂತ್ ಚಿತ್ರದಲ್ಲಿ ಕತ್ರೀನಾ ಕೈಫ್, ಸಿದ್ಧಾರ್ಥ್ ಚತುರ್ವೇದಿ ಅಭಿನಯಿಸಿದ್ದು, ರವಿಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಚಿತ್ರಕಥೆ ಬರೆದಿದ್ದಾರೆ. ನವೆಂಬರ್ 4 ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..