ಮಯೊಸೈಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ – ಏನಿದು ಮಯೊಸೈಟಿಸ್ ಇದರ ಗುಣ-ಲಕ್ಷಣಗಳೇನು ?

ನ್ಯೂಸ್ ಆ್ಯರೋ: ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಆಟೋಇಮ್ಯೂನ್ ಖಾಯಿಲೆಯಿಂದ ಬಳಲುತ್ತಿರುವುದಾಗಿ ಸ್ವತಃ ನಟಿಯೇ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಶನಿವಾರ ಅಭಿಮಾನಿಗಳಿಗೆ ತಮ್ಮ ಆರೋಗ್ಯ ಸಂಬಂಧ ತಾನು ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಾಕಿ, ಉದ್ದವಾದ ಅಡಿಬರಹದೊಂದಿಗೆ ತಮ್ಮ ಮನದ ಮಾತನ್ನು ವ್ಯಕ್ತಪಡಿಸಿದ್ದಾರೆ.
‘ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಗಿದೆ. ಇದು ಗುಣಮುಖವಾದ ಬಳಿಕ ಅದರ ಬಗ್ಗೆ ಹಂಚಿಕೊಳ್ಳಲು ಇಚ್ಛಿಸಿದ್ದೆ. ಆದರೆ, ಇದು ನಿರೀಕ್ಷೆ ಮಾಡಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ಇದರ ಬಗ್ಗೆ ನಿಮ್ಮ ಜೊತೆ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ನೀವು ಯಶೋಧಾ ಟ್ರೈಲರ್‌ಗೆ ನೀಡಿದ ಪ್ರೀತಿ ಅಗಾಧವಾದುದು’ ಅಂತಾ ಬರೆದುಕೊಂಡಿದ್ದಾರೆ.
ಇನ್ನೂ ವೈದ್ಯರು ನಟಿಯಾ ಆರೋಗ್ಯದ ಬಗ್ಗೆ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ನಾನು ನನ್ನ ಜೀವನದಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ.ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೋಡಿದ್ದೇನೆ… ನಾನು ಇನ್ನೊಂದು ದಿನವನ್ನು ಕಳೆಯಲು ಸಾಧ್ಯವಿಲ್ಲವೆಂದು ತೋರುತ್ತಿರುವಾಗ ಹೇಗಾದರೂ ಆ ಕ್ಷಣವೂ ಹಾದುಹೋಗುತ್ತದೆ. ನಾನು ಚೇತರಿಕೆಗೆ ಒಂದು ದಿನ ಹತ್ತಿರವಾಗಿದ್ದೇನೆ ಎಂದು ಮಾತ್ರ ಇದರ ಅರ್ಥವೆಂದು ನಾನು ಭಾವಿಸುತ್ತೇನೆ. ಈ ಸಮಯವೂ ಹಾದುಹೋಗುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಅಂದು ಹೇಳಿಕೊಂಡಿದ್ದಾರೆ.
ಮಯೋಸೈಟಿಸ್ ಎಂದರೇನು?
ಮಯೋಸೈಟಿಸ್ ಅನ್ನು ಒಂದು ಆಟೋ ಇಮ್ಯೂನ್ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ, ಇದರಲ್ಲಿ ದೇಹದ ಸ್ನಾಯುಗಳು ತೀವ್ರವಾಗಿ ಪ್ರಭಾವಕ್ಕೆ ಒಳಗಾಗುತ್ತವೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ಆಯಾಸ, ತಿನ್ನಲು ಮತ್ತು ಕುಡಿಯಲು ತೊಂದರೆ ಮತ್ತು ಉಸಿರಾಟದ ತೊಂದರೆ. ಪುರುಷರಿಗಿಂತ ಮಹಿಳೆಯರು ಈ ಕಾಯಿಲೆಗೆ ಹೆಚ್ಚು ಗುರಿಯಾಗುತ್ತಾರೆ ಮತ್ತು ಇದು ಮಕ್ಕಳ ಮೇಲೂ ಪ್ರಭಾವ ಬೀರುತ್ತದೆ.