1. Home
  2. Entertainment
  3. ಕೋಡಿ ಕುಂದಾಪುರ ಕಡಲ ತೀರದಲ್ಲಿ ‘ಪಂಜುರ್ಲಿ’ ಅವತಾರ – ‘ಸ್ಯಾಂಡ್ ಥೀಮ್ ಉಡುಪಿ’ ತಂಡದ ಕಲಾವಿದರ ಕೈಯಲ್ಲರಳಿದ ‘ವರಾಹ ರೂಪ’..!!

ಕೋಡಿ ಕುಂದಾಪುರ ಕಡಲ ತೀರದಲ್ಲಿ ‘ಪಂಜುರ್ಲಿ’ ಅವತಾರ – ‘ಸ್ಯಾಂಡ್ ಥೀಮ್ ಉಡುಪಿ’ ತಂಡದ ಕಲಾವಿದರ ಕೈಯಲ್ಲರಳಿದ ‘ವರಾಹ ರೂಪ’..!!

ಕೋಡಿ ಕುಂದಾಪುರ ಕಡಲ ತೀರದಲ್ಲಿ ‘ಪಂಜುರ್ಲಿ’ ಅವತಾರ – ‘ಸ್ಯಾಂಡ್ ಥೀಮ್ ಉಡುಪಿ’ ತಂಡದ ಕಲಾವಿದರ ಕೈಯಲ್ಲರಳಿದ ‘ವರಾಹ ರೂಪ’..!!
0

ನ್ಯೂಸ್ ಆ್ಯರೋ : ಕರಾವಳಿ ಭಾಗದ ಆಚರಣೆ, ಕ್ರೀಡೆ, ದೈವಾರಾಧನೆ, ಜನರ ಮುಗ್ಧತೆ ಮತ್ತು ನಂಬಿಕೆಗೆ ಪಾತ್ರವಾದ ದೃಶ್ಯವನ್ನು ಪರಿಣಾಮಕಾರಿಯಾಗಿ ಕರಾವಳಿ ಭಾಗದ ಬಹುತೇಕ ಕಲಾವಿದರನ್ನು ಒಳಗೊಂಡ ಚಿತ್ರೀಕರಿಸಿದ ಹೆಮ್ಮೆಯ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಕಾಂತಾರ ಚಲನಚಿತ್ರಕ್ಕೊಂದು ಮರಳು ಶಿಲ್ಪದ ಮೂಲಕ ಅಭಿನಂದಿಸಲಾಯಿತು.

ಈ ಕಲಾಕೃತಿಯಲ್ಲಿ ರಕ್ಷಕ ಶಕ್ತಿಯನ್ನು ಸಾರಿದ ವರಹಾರೂಪಿ ಪಂಜುರ್ಲಿ ಮತ್ತು ದೈವದ ರೂಪದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ ಉಡುಪಿಯ ಸ್ಯಾಂಡ್ ಥೀಮ್ ತಂಡ ರಚಿಸಿದೆ.

4.00 ಅಡಿ ಎತ್ತರದ ಕಲಾಕೃತಿ ಯನ್ನು ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್. (SAND THEME, udupi ತಂಡ) ರಚಿಸಿದ ಮರಳು ಶಿಲ್ಪ ಹಳೇ ಅಳಿವೆ ಬೀಚ್, ಕೋಡಿ ಕುಂದಾಪುರ ಕಡಲ ತೀರದಲ್ಲಿ ಜನಕಾರ್ಷಣೆಗೆ ಪಾತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಬಿಡುಗಡೆಗೊಂಡ ಕಾಂತಾರ ಸಿನಿಮಾ ಇದೀಗ ಸುನಾಮಿ ಎಬ್ಬಿಸುತ್ತಿದ್ದು, ಪಾನ್ ಇಂಡಿಯಾ ಸಿನಿಮಾವಾಗಿ ಬದಲಾಗಿದೆ.‌ ಅಲ್ಲದೇ ಬಿಡುಗಡೆಯಾದ ಹಿಂದಿ, ತೆಲುಗು, ಮಲಯಾಳಂ ಅವತರಣಿಕೆಯಲ್ಲೂ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುತ್ತಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..