ಹಾಟ್ ಫೋಟೋಶೂಟ್ಗೆ ಕ್ಯೂಟ್ ಆಗಿ ಪೋಸ್ ಕೊಟ್ಟ ಶಾನ್ವಿ – ಬಿಕಿನಿ ಫೋಟೋದಲ್ಲಿ ಮಿರಮಿರ ಮಿಂಚಿದ ಮಾಸ್ಟರ್ ಪೀಸ್ ಬೆಡಗಿ

ನ್ಯೂಸ್ ಆ್ಯರೋ : ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರೊಂದಿಗೆ ನಟಿಸುತ್ತಲೇ ತೆಲುಗಿನಲ್ಲೂ ಖಾತೆ ತೆರೆದ ನಟಿ ಶಾನ್ವಿ. ಸಿನಿಮಾಗಳ ಜೆಗೆ ಫೋಟೋಶೂಟ್ಗಳಿಗೂ ಪೋಸ್ ಕೊಡುವ ಶಾನ್ವಿ ಬಿಕಿನಿ ಪೋಟೋಶೂಟ್ಗೂ ಪೋಸ್ ಕೊಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈಗ ಇಂತಹದ್ದೇ ಮತ್ತೊಂದು ಹಾಟ್ ಫೋಟೋಶೂಟ್ಗೂ ಶಾನ್ವಿ ಪೋಸ್ ಕೊಟ್ಟಿದ್ದಾರೆ.

ಹೌದು ಸ್ಯಾಂಡಲ್‌ವುಡ್ ಬ್ಯೂಟಿ ಶಾನ್ವಿ ಶ್ರೀವಾಸ್ತವ್ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮಲಯಾಳಂ ಸಿನಿಮಾ ಮೂಲಕ ಕಮಾಲ್ ಮಾಡ್ತಿರುವ ಬೆನ್ನಲ್ಲೇ ಶಾನ್ವಿ ಬಿಕಿನಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ತ್ರಿಭಾಷಾ ನಟಿಯಾಗಿ ಶಾನ್ವಿ ಮಿಂಚ್ತಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈಗ ಶೂಟಿಂಗ್‌ಗೆ ಕೊಂಚ ಬ್ರೇಕ್ ತೆಗೆದುಕೊಂದು ವಿದೇಶ ಟ್ರಿಪ್ ಹೋಗಿ ಬಂದಿದ್ದಾರೆ. ಸದಾ ಸುಂದರ ತಾಣಗಳಿಗೆ ನಟಿ ಭೇಟಿ ನೀಡುವ ಸಾನ್ವಿ ಸದ್ಯ ತಮ್ಮ ವಿದೇಶ ಪ್ರವಾಸದ ಫೋಟೋಸ್ ಹಂಚಿಕೊಂಡಿದ್ದು, ಬೀಚ್‌ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸುವ ಮೂಲಕ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಶಾನ್ವಿ ಟಾಲಿವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮುದ್ದು ಮುಖದ ಮಾಸ್ಟರ್ ಪೀಸ್ ಬೆಡಗಿ ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಂತರ ಚಂದ್ರಲೇಖಾ ಸಿನಿಮಾ ಮೂಲಕ ಕನ್ನಡಕ್ಕೆ ಬಂದು ಹೆಸರುಗಳಿಸಿದ್ದಾರೆ. ನಂತರ ಮಾಸ್ಟರ್ ಪೀಸ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಅದ್ಭುತ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಈಗ ಕನ್ನಡ ಹುಡುಗಿಯೇ ಆಗಿ ಹೋಗಿದ್ದಾರೆ.
ಬೇರೆ ಭಾಷೆಯಿಂದ ಬಂದು ಕನ್ನಡ ಕಲಿತು ಕನ್ನಡದಲ್ಲೇ ಮಾತನಾಡುವ ನಟಿ ಶಾನ್ವಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಶಾನ್ವಿ ತಮ್ಮ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇನ್ನೂ ಕೆಲ ತಿಂಗಳುಗಳ ಹಿಂದೆ ಕೂಡ ಈ ನಟಿಯ ಬಿಕಿನಿ ಫೋಟೋ ಸಖತ್ ವೈರಲ್ ಆಗಿತ್ತು.

ಮುದ್ದು ಮುಖದ ಚೆಲುವೆಯನ್ನು ಹಾಟ್ ಲುಕ್ನಲ್ಲಿ ಕಂಡು ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದರು. ಇದೀಗ ಮತ್ತೆ ಬಿಕಿನಿ ತೊಟ್ಟು ಬೋಲ್ಡ್ ಆಗಿ ಶಾನ್ವಿ ಪೋಸ್ ನೀಡಿದ್ದು, ಆ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್ ಗಳ ಸುರಿಮಳೆ ಬರುತ್ತಿದೆ.