1. Home
  2. Entertainment
  3. ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್ಧಾರ್ಥ್ ಕಿಯಾರಾ ಜೋಡಿ – ಶೇರ್ಶಾಹ್ ಸಿನಿಮಾದಲ್ಲಿನ ಪ್ರೇಮಿಗಳು ನಿಜಜೀವನದಲ್ಲೂ ಆಗಲಿದ್ದಾರೆ ಸತಿಪತಿ

ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್ಧಾರ್ಥ್ ಕಿಯಾರಾ ಜೋಡಿ – ಶೇರ್ಶಾಹ್ ಸಿನಿಮಾದಲ್ಲಿನ ಪ್ರೇಮಿಗಳು ನಿಜಜೀವನದಲ್ಲೂ ಆಗಲಿದ್ದಾರೆ ಸತಿಪತಿ

ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್ಧಾರ್ಥ್ ಕಿಯಾರಾ ಜೋಡಿ – ಶೇರ್ಶಾಹ್ ಸಿನಿಮಾದಲ್ಲಿನ ಪ್ರೇಮಿಗಳು ನಿಜಜೀವನದಲ್ಲೂ ಆಗಲಿದ್ದಾರೆ ಸತಿಪತಿ
0

ನ್ಯೂಸ್ ಆ್ಯರೋ : ‘ಶೆರ್ಶಾಹ್’ದಲ್ಲಿ ಮೋಡಿ ಮಾಡಿದ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ನಡುವಿನ ಆ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳು ಇವರು ನಿಜ ಜೀವನದಲ್ಲಿ ಕೂಡ ಜೋಡಿ ಆಗಲಿ ಎಂದು ಆಶಿಸಿದ್ದರು. ಇದಕ್ಕೆ ತಕ್ಕಂತೆ ಇವರ ನಡುವಿನ ಒಡನಾಟ ಕೂಡ ಪುಷ್ಟಿ ನೀಡಿತ್ತು. ಬಿಟೌನ್​ ಗಲ್ಲಿಯಲ್ಲೂ ಕೂಡ ಇದೇ ಮಾತು ಹರಿದಾಡುತ್ತಿತ್ತು. ಆದ್ರೆ ಆ ಜೋಡಿ ಮಾತ್ರ ಇದುವರೆಗೂ ಪ್ರೀತಿ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆ ಮೂಲಕ ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಡುವಲ್ಲಿ ಈ ಜೋಡಿ ಯಶಸ್ವಿಯಾಗಿದ್ದಾರೆ.

ಈ ಮುದ್ದಾದ ಜೋಡಿ ಈಗ ನಿಜ ಜೀವನದಲ್ಲಿ ಗಂಡ – ಹೆಂಡತಿಯಾಗಲಿದ್ದಾರೆ ಅಂತ ಸುದ್ದಿಗಳು ಹರಿದಾಡುತ್ತಿದ್ದು, ಅವರ ನಡೆ, ನುಡಿ, ಒಟ್ಟಿಗೆ ಸುತ್ತಾಡುವುದು ಇವರಿಬ್ಬರ ಮಧ್ಯೆ ಇರೋದು ನಿಜ ಎಂದು ಹೇಳುತ್ತದೆ.

ಹೌದು.. ಈ ಜೋಡಿ 2023ರ ಏಪ್ರಿಲ್‌ನಲ್ಲಿ ಮದುವೆಯಾಗಲಿದೆ ಎನ್ನಲಾಗುತ್ತಿದ್ದು, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಶೆರ್ಶಾಹ್ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ದೆಹಲಿಯಲ್ಲಿ ಸಿಂಪಲ್ ಮದುವೆಯ ಬಳಿಕ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ನಡೆಯಲ್ಲಿದ್ದು, ಬಿಟೌನ್‌ನಲ್ಲಿ ಸದ್ಯ ಸಿದ್ದಾಥ್, ಕಿಯಾರಾ ಮದುವೆಯ ವಿಚಾರ ಹಾಟ್ ಟಾಪಿಕ್ ಆಗಿದೆ.

ಇನ್ನೂ ಕಿಯಾರಾ ಅಡ್ವಾಣಿ, ಸಿದ್ದಾರ್ಥ್ ಮಲ್ಹೋತ್ರ ಅನೇಕ ಪಾರ್ಟಿ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಕೆಲ ಕಾರ್ಯಕ್ರಮಗಳಿಗೆ ಒಂದೇ ಕಾರ್‌ನಲ್ಲಿ ಇವರಿಬ್ಬರು ಆಗಮಿಸಿದ್ದರು. ಈ ಜೋಡಿ ಮೊದಲು ಹೇಗೆ ಭೇಟಿಯಾಯಿತು? ಹೇಗೆ ಸ್ನೇಹ ಬೆಳೆಯಿತು ಎಂಬ ಬಗ್ಗೆ ಬಗ್ಗೆ ಸ್ವಲ್ಪವೂ ಸುಳಿವು ಸಿಕ್ಕಿಲ್ಲ. ಪರಸ್ಪರ ಇಬ್ಬರಿಗೂ ಈ ಬಗ್ಗೆ ಪ್ರಶ್ನೆ ಎದುರಾದಾಗ ಏನೋ ಹೇಳಿಕೊಂಡು ಎಸ್ಕೇಪ್ ಆಗುತ್ತಾರೆ.

2018 ರಲ್ಲಿ ‘ಲಸ್ಟ್ ಸ್ಟೋರಿಸ್’ ನ ರ್‍ಯಾಪ್ ಅಪ್ ಪಾರ್ಟಿಯಲ್ಲಿ ಮೊದಲಿಗೆ ಭೇಟಿಯಾದ ಈ ಜೋಡಿ 2020 ರಲ್ಲಿ ಹೊಸ ವರ್ಷ ಆಚರಣೆಗಾಗಿ ಸಿದ್-ಕಿಯಾರಾ ಇಬ್ಬರೂ ಆಫ್ರಿಕಾಕ್ಕೆ ಹೋಗಿದ್ದರು. ಇವರಿಬ್ಬರು ಮುಂಬೈ ವಿಮಾಣ ನಿಲ್ದಾಣದಿಂದ ಜೊತೆಯಾಗಿ ಹೊರಟು, ಮತ್ತೆ ಜೊತೆಯಾಗಿಯೇ ವಾಪಸು ಬಂದಿದ್ದರು. ಅದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು. ಆಮೇಲೆ ಸೋಶಿಯಲ್ ಮೀಡಿಯಾದಲ್ಲಿ ಕಿಯಾರಾ, ಸಿದ್ದಾರ್ಥ್ ಅಪ್‌ಲೋಡ್ ಮಾಡಿದ್ದ ಫೋಟೋದಿಂದ ಇವರು ಒಟ್ಟಿಗೆ ಆಫ್ರಿಕಾಗೆ ಹೋಗಿರೋದು ಗೊತ್ತಾಗಿತ್ತು. ಆಗಲೇ ಅವರಿಬ್ಬರ ಮಧ್ಯೆ ಪ್ರೀತಿ ಇರುವ ವಿಷಯ ಅಧಿಕೃತವಾಯಿತು. ಸಿದ್ ಮನೆಗೆ ಕಿಯಾರಾ ಸಾಕಷ್ಟು ಬಾರಿ ಹೋಗಿರೋದು ಕೂಡ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು.

ಕಿಯಾರಾ ಬಗ್ಗೆ ಬಗ್ಗೆ ಮಾತನಾಡಿದ್ದ ಸಿದ್, “ನಾವಿಬ್ಬರೂ ಸಿನಿಮಾ ಕಲಾವಿದರಾದರೂ ಕೂಡ ಚಿತ್ರರಂಗದಿಂದ ದೂರ ಇರಲು ಬಯಸುತ್ತೇವೆ. ಅದೇ ನಮ್ಮಿಬ್ಬರನ್ನು ಕನೆಕ್ಟ್ ಮಾಡಿತು. ಕೆಲಸದ ಮಧ್ಯೆ ನಮಗೆ ಸಹಜವಾದ ಜೀವನ ಇದೆ ಎಂಬುದೇ ಸಾಕಷ್ಟು ಬಾರಿ ಮರೆತು ಹೋಗುತ್ತದೆ. ಆದರೆ ನಾವಿಬ್ಬರೂ ಸಹಜವಾದ ಬದುಕನ್ನು ಜೀವಿಸಲು ಇಷ್ಟಪಡುತ್ತೇವೆ, ಅದೇ ನಮ್ಮನ್ನು ಕನೆಕ್ಟ್ ಮಾಡಿದೆ” ಎಂದು ಹೇಳಿದ್ದರು. ಈ ಜೋಡಿ ‘ಶೇರ್‌ಷಾ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿತ್ತು. ಆ ಚಿತ್ರ ದೊಡ್ಡ ಹಿಟ್ ಆಗಿತ್ತು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..