1. Home
  2. Entertainment
  3. ಟಾಲಿವುಡ್’ನ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಕನ್ನಡತಿ ಶ್ರೀ ಲೀಲಾ ಆಯ್ಕೆ – ಹೀರೋ ಯಾರು ಗೊತ್ತಾ?

ಟಾಲಿವುಡ್’ನ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಕನ್ನಡತಿ ಶ್ರೀ ಲೀಲಾ ಆಯ್ಕೆ – ಹೀರೋ ಯಾರು ಗೊತ್ತಾ?

ಟಾಲಿವುಡ್’ನ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಕನ್ನಡತಿ ಶ್ರೀ ಲೀಲಾ ಆಯ್ಕೆ – ಹೀರೋ ಯಾರು ಗೊತ್ತಾ?
0

ನ್ಯೂಸ್ ಆ್ಯರೋ : ಕಿಸ್​ ಹಾಗೂ ಭರಾಟೆ ಚಿತ್ರಗಳಲ್ಲಿ ನಟಿಸಿರುವ ಮುದ್ದು ಮುಖದ ಸುಂದರಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಾಟ್​ ಫೋಟೋಶೂಟ್​ಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಸದಾ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರುವ ಈ ನಟಿ ಸೋಶಿಯಲ್​ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ಒಂದಲ್ಲಾ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ನಟಿ ಶ್ರೀಲೀಲಾ ಅವರಿಗೆ ಈಗ ಹೊಸ ಸಿನಿಮಾವೊಂದು ಸಿಕ್ಕಿದ್ದು, ನಟಿ ಶ್ರೀಲೀಲಾ ಈಗ ಟಾಲಿವುಡ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ಕನ್ನಡದಿಂದ ತೆಲುಗಿಗೆ ಹೋಗಿ ಭವಿಷ್ಯ ಕಂಡುಕೊಂಡಿರುವ ನಟಿಯರ ಪಟ್ಟಿಗೆ ಈಗ ಶ್ರೀಲೀಲಾ ಹೆಸರು ಸೇರಿಕೊಂಡಿದೆ. ಶ್ರೀಲೀಲಾಗೆ ಟಾಲಿವುಡ್​ನಲ್ಲಿ ಒಳ್ಳೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

ಹೌದು.. ಕಿಸ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ಈಗ ಕನ್ನಡದ ಜೊತೆ ತೆಲುಗಿನಲ್ಲೂ ನಾಯಕ ನಟಿಯಾಗಿ ಭರವಸೆ ಮೂಡಿಸಿರುವ ನಟಿ. ಈಗಾಗಲೇ ತೆಲುಗಿನಲ್ಲಿ “ಪೆಳ್ಳಿ ಸಂದಡಿ’ ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ನ‌ಲ್ಲಿ ಅಕೌಂಟ್‌ ಓಪನ್‌ ಮಾಡಿರುವ ಶ್ರೀಲೀಲಾ, ಈಗಾಗಲೇ ತೆಲುಗಿನ ನಾನಾ ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ.

ಈ ನಡುವೆ ಮತ್ತೂಂದು ಬಿಗ್‌ಬಜೆಟ್‌ ಸ್ಟಾರ್‌ ಸಿನಿಮಾಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದು, ಉಸ್ತಾದ್ ರಾಮ್ ಪೋತಿನೇನಿ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಭರಾಟೆ ಬೆಡಗಿಯನ್ನು ಹರಸಿ ಬಂದಿದೆ.

ಇತ್ತೀಚೆಗಷ್ಟೇ ಅಖಂಡ ಚಿತ್ರದ ಮೂಲಕ ಅಮೋಘ ಯಶಸ್ಸನ್ನು ಪಡೆದಿದ್ದ ಬೋಯಪತಿ ನಿರ್ದೇಶನ ಹಾಗೂ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನೆಮಾದ ಮೇಲೆ ಪ್ರೇಕ್ಷಕ ವರ್ಗಕ್ಕೆ ಸಾಕಷ್ಟು ಭರವಸೆ ಇದೆ. ಇನ್ನೂ ಈ ಹಿಂದೆ ಉಸ್ತಾದ್ ರಾಮ್ ಪೋತಿನೇನಿಗೆ ನಾಯಕಿಯಾಗಿ ‘ಏಜೆಂಟ್’ ಖ್ಯಾತಿಯ ಸಾಕ್ಷಿ ವೈದ್ಯ ಆಯ್ಕೆಯಾಗಿದ್ದರು. ಆದರೆ ಇದೀಗ ಆ ಅವಕಾಶ ಶ್ರೀಲೀಲಾ ಪಾಲಿಗೆ ಒಲಿದು ಬಂದಿದ್ದು, ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ನಟಿ ಶ್ರೀಲೀಲಾ ಅವರು ಚಿತ್ರರಂಗದಲ್ಲಿ ಸಖತ್​ ಶೈನ್​ ಆಗುತ್ತಿದ್ದು, ಕನ್ನಡ ಮಾತ್ರವಲ್ಲದೇ ಪರಭಾಷೆಯಿಂದಲೂ ಅವರಿಗೆ ಚಾನ್ಸ್​ ಸಿಗುತ್ತಿದೆ. ತೆಲುಗು ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಗಮನಾರ್ಹ ಪಾತ್ರಗಳು ಅವರಿಗೆ ಸಿಗುತ್ತಿವೆ.

ಕನ್ನಡದಲ್ಲಿ ‘ಕಿಸ್​’ ಮತ್ತು ‘ಭರಾಟೆ’ ಚಿತ್ರದಲ್ಲಿ ನಟಿಸಿದ ಬಳಿಕ ಟಾಲಿವುಡ್​ ಮಂದಿಯ ಕಣ್ಣಿಗೆ ಬಿದ್ದ ಶ್ರೀಲೀಲಾ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ಅವರು ಕಾಣಿಸಿಕೊಂಡ ರೀತಿಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದು, ಈಗ ಅವರಿಗೆ ಟಾಲಿವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಅವಕಾಶಗಳು ಹರಿದುಬರುತ್ತಿವೆ.

ಸುಮಾರು 7 ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಮಾಸ್ ಮಹಾರಾಜ ರವಿತೇಜ ಅಭಿನಯದ ಧಮಾಕಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಬಾಲಯ್ಯ, ಮಹೇಶ್ ಬಾಬು ಶರ್ವಾನಂದ್, ನಿತಿನ್ ಸಿನಿಮಾ ಹಾಗೂ ವೈಷ್ಣವ್ ತೇಜ್ ಅವರ ಚಿತ್ರದಲ್ಲೂ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..