ಗುಟ್ಟಾಗಿ ಮಾಲ್ಡೀವ್ಸ್ ಗೆ ಹಾರಿದ ರಶ್ಮಿಕಾ ದೇವರಕೊಂಡ ಜೋಡಿ – ಬ್ರೇಕಪ್ ಸುದ್ದಿ ಬೆನ್ನಲ್ಲೇ ಬಯಲಾಯ್ತು ಗಪ್ ಚುಪ್ ಕಹಾನಿ…!!

ನ್ಯೂಸ್ ಆ್ಯರೋ : ತೆಲುಗಿನ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಹೊಸದೇನಲ್ಲ. ಆಗಾಗ ಒಟ್ಟಿಗೆ ಜಿಮ್‌ಗೆ ಭೇಟಿ ಕೊಟ್ಟಾಗ, ರೆಸ್ಟೋರೆಂಟ್‌ಗಳಿಗೆ ಒಟ್ಟಿಗೆ ಬಂದಾಗ ಕ್ಯಾಮರಾ ಕಣ್ಣುಗಳು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರನ್ನ ಸೆರೆ ಹಿಡಿದಿದ್ದವು. ಇವರಿಬ್ಬರ ಡೇಟಿಂಗ್ ವಿಚಾರ ಹಲವಾರು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವುದರಿಂದ ಹಿಡಿದು ಇನ್ನೇನು ಮದುವೆ ಆಗೇ ಬಿಡ್ತಾರೆ ಎನ್ನುವಲ್ಲಿಗೆ ಗಾಸಿಪ್ ಹರಿದಾಡಿದವು. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿಯೇ ಒಟ್ಟೊಟ್ಟಿಗೆ ಓಡಾಡುತ್ತಿತ್ತು. ತಡರಾತ್ರಿ ಪಾರ್ಟಿಗಳಲ್ಲೂ ಹಾಜರಾತಿ ಇರುತ್ತಿತ್ತು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು.
ಆದರೆ ಇತ್ತೀಚೆಗೆ ಈ ಜೋಡಿ ಹಕ್ಕಿಗಳು ಇಬ್ಬರೂ ನಾನೊಂದು ತೀರ, ನೀನೊಂದು ತೀರಾ ಅಂತ ದೂರಾಗಿದ್ದು, ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಒಟ್ಟೊಟ್ಟಿಗೆ ಸಿನಿಮಾ ಮಾಡಿ, ಒಬ್ಬರಿಗೊಬ್ಬರು ಬಿಟ್ಟಿರಲಾರದಂತಹ ಸ್ನೇಹ ಸಂಪಾದಿಸಿ ಈ ಜೋಡಿಗಳ ಲವ್ ಬ್ರೇಕ್ ಆಪ್ ಎಷ್ಟರ ಮಟ್ಟಿಗೆ ಚರ್ಚೆಯಾಗಿತ್ತು ಎಂದರೆ ವಿಜಯ್ ಬದುಕಿನಲ್ಲಿ ಅನನ್ಯ ಪಾಂಡೆ ಬಂದ ನಂತರ ಬಿರುಕು ಕಾಣಿಸಿಕೊಂಡಿದೆ ಎಂದಿದ್ದರು. ಅಲ್ಲದೇ, ಜ್ಯೋತಿಷಿಯೊಬ್ಬನ ಮಾತು ಕೇಳಿ ರಶ್ಮಿಕಾ ದೂರವಾಗಿದ್ದಾರೆ ಎನ್ನುವ ಸುದ್ದಿಯೂ ಇತ್ತು.
ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ರಿಲೇಶನ್ಶಿಪ್ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಡಿಯರ್ ಕಾಮ್ರೆಡ್ ಜೋಡಿ ಲವ್ ಬ್ರೇಕಪ್ ಸುದ್ದಿ ಹುಸಿ ಎಂದು ಹೇಳುವ ಒಂದು ಪುರಾವೆ ಸಿಕ್ಕಿದೆ.
ಹೌದು.. ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಸದ್ದಿಲ್ಲದಂತೆ ಮಾಲ್ಡೀವ್ಸ್‌ಗೆ ಹಾರಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ವೆಕೇಷನ್ ಎಂಜಾಯ್ ಮಾಡಲು ಇಬ್ಬರೂ ಒಂದೇ ಸ್ಥಳಕ್ಕೆ ಹೋಗಿದ್ದು, ಇವರು ಮಧ್ಯೆ ಏನೋ ಇದೆ ಎಂಬ ಗಾಳಿಸುದ್ದಿಗೆ ಪುಷ್ಠಿ ಸಿಕ್ಕಂತಾಗಿದೆ.
ಇನ್ನೂ ಬಾಲಿವುಡ್ನ ಚೊಚ್ಚಲ ಚಿತ್ರ ಗುಡ್ ಬೈ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯೂಸಿಯಾಗಿದ್ದ ಕೂರ್ಗ್ ಬೆಡಗಿ ಸಿನಿಮಾ ತೆರೆ ಕಾಣುತ್ತಿದ್ದಂತೆ ದೇವರಕೊಂಡ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದು, ನೆಟ್ಟಿಗರ ಕಣ್ಣರಳಿಸಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಇಬ್ಬರ ಕೆಮಿಸ್ಟ್ರಿ ಸಖತ್ ಕೆಲಸ ಮಾಡಿತ್ತು. ಆ ಸಂದರ್ಭದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಯಾರೊಬ್ಬರೂ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಇಂದಿಗೂ ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡೇ ಒಟ್ಟಿಗೆ ತಿರುಗಾಡುತ್ತಿದ್ದಾರೆ.