1. Home
  2. Entertainment
  3. ‘ಬ್ರಹ್ಮಾಸ್ತ್ರ 2’ ಆಫರ್ ತಿರಸ್ಕರಿಸಿದ ರಾಕಿ ಭಾಯ್ – ರಾಕಿಂಗ್ ಸ್ಟಾರ್ ಮುಂದಿನ ಚಿತ್ರದ ಬಗ್ಗೆ ಚಿಂತೆಗೆ ಬಿದ್ದ ಅಭಿಮಾನಿಗಳು..

‘ಬ್ರಹ್ಮಾಸ್ತ್ರ 2’ ಆಫರ್ ತಿರಸ್ಕರಿಸಿದ ರಾಕಿ ಭಾಯ್ – ರಾಕಿಂಗ್ ಸ್ಟಾರ್ ಮುಂದಿನ ಚಿತ್ರದ ಬಗ್ಗೆ ಚಿಂತೆಗೆ ಬಿದ್ದ ಅಭಿಮಾನಿಗಳು..

‘ಬ್ರಹ್ಮಾಸ್ತ್ರ 2’ ಆಫರ್ ತಿರಸ್ಕರಿಸಿದ ರಾಕಿ ಭಾಯ್ – ರಾಕಿಂಗ್ ಸ್ಟಾರ್ ಮುಂದಿನ ಚಿತ್ರದ ಬಗ್ಗೆ ಚಿಂತೆಗೆ ಬಿದ್ದ ಅಭಿಮಾನಿಗಳು..
0

ನ್ಯೂಸ್ ಆ್ಯರೋ : ರಾಕಿಂಗ್ ಸ್ಟಾರ್ ಯಶ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ. ಕೆಜಿಎಫ್ 2 ಬಳಿಕ ಯಶ್ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದ್ರು. ಮಾತ್ರವಲ್ಲ, ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ತೋರುತ್ತಿದ್ದ ಮಂದಿಯ ಹುಬ್ಬೇರಿಸುವಂತೆ ಮಾಡಿದ್ರು. ದಾಖಲೆ ಮೇಲೆ ದಾಖಲೆ ಬರೆದ ಕೆಜಿಎಫ್ 2 ಸಿನಿಮಾ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಚರ್ಚೆಗಳಾಗುತ್ತಿದೆ. ಬಾಲಿವುಡ್ ಮಂದಿಯೂ ಯಶ್ ಕಾಲ್ ಶೀಟ್’ಗಾಗಿ ಕಾಯುತ್ತಿದ್ದು, ಬ್ರಹ್ಮಾಸ್ತ್ರ 2 ಚಿತ್ರದಲ್ಲಿ ಯಶ್ ಅಭಿನಯಿಸುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಆದ್ರೀಗ ಬ್ರಹ್ಮಾಸ್ತ್ರ 2 ಚಿತ್ರಕ್ಕೆ ರಾಕಿ ಭಾಯ್ ನೋ ಎಂದಿದ್ದಾರೆ, ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.ಕೆಜಿಎಫ್ 2 ಸಿನಿಮಾ ಬಳಿಕ ರಾಕಿ ಭಾಯ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡಿತ್ತು. ಯಶ್ ಆ ಸಿನಿಮಾ ಮಾಡ್ತಾರೆ, ಈ ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಸುದ್ದಿಗಳು ಹರಿದಾಡಿತ್ತು. ಮತ್ತೊಂದೆಡೆ ಹಾಲಿವುಡ್ ಸಾಹಸ ನಿರ್ದೇಶಕರ ಜೊತೆ ಯಶ್ ಕಾಣಿಸಿಕೊಂಡ ಬಳಿಕ ಯಶ್ ಹಾಲಿವುಡ್’ಗೆ ಹಾರಿ ಬಿಡುತ್ತಾರೆ ಎನ್ನಲಾಗಿತ್ತು. ಆದ್ರೆ ಯಾವುದಕ್ಕೂ ಯಶ್ ಆಗಲಿ ಅಥವಾ ಅವರ ಆಪ್ತ ವಲಯದಿಂದಾಗಲಿ ಮಾಹಿತಿ ಸಿಕ್ಕಿರಲಿಲ್ಲ. ಅಭಿಮಾನಿಗಳು ಮಾತ್ರ ಯಶ್ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳುವ ಕುತೂಹಲದಲ್ಲಿದ್ದಾರೆ.ಈ ಮಧ್ಯೆ ಈ ವರ್ಷ ಹಿಟ್ ಆದ ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾದ ಪಾರ್ಟ್ 2ನಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲು ಯಶ್’ಗೆ ಆಫರ್ ಬಂದಿತ್ತು. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರಕ್ಕೆ ಕರಣ್ ಜೋಹರ್ ಮೊದಲಾದವರು ಬಂಡವಾಳ ಹೂಡಿದ್ದರು. ರಣಬೀರ್ ಕಪೂರ್-ಆಲಿಯಾ ಭಟ್ ಜತೆ ದಕ್ಷಿಣದ ನಟರು ನಟಿಸಿದ್ದರು. ‘ಬ್ರಹ್ಮಾಸ್ತ್ರ 2’ ಕೆಲಸಗಳು ನಡೆಯುತ್ತಿದ್ದು, ದೇವ್ ಪಾತ್ರ ಮಾಡಲು ಯಶ್’ಗೆ ಆಫರ್ ನೀಡಲಾಗಿತ್ತು. ಆದ್ರೆ ಯಶ್ ಈ ಆಫರ್ ತಿರಸ್ಕರಿಸಿದ್ದಾರೆ.ಯಶ್ ಯಾವ ಸಿನಿಮಾ ಮಾಡಬೇಕು, ಮಾಡಬಾರದು ಎನ್ನುವ ಬಗ್ಗೆ ಬಹಳ ಕ್ಲಾರಿಟಿ ಇರುವ ನಟ. ಹಾಗೆ ಸುಮ್ನೆ ಯಾವ ಸಿನಿಮಾವನ್ನೂ ಅವರು ಒಪ್ಪಿಕೊಳ್ಳುವುದಿಲ್ಲ. ಕೆಜಿಎಫ್ ನಂತರ ಜನರ ನಿರೀಕ್ಷೆ ಏನು ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಎಷ್ಟೇ ದೊಡ್ಡ ಬಜೆಟ್ ಸಿನಿಮಾವಾದರೂ ಸಾಧಾರಣ ಕಥೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ‘ಕೆಜಿಎಫ್ 2’ ಚಿತ್ರಕ್ಕಿಂತ ದೊಡ್ಡದನ್ನೇ ಸಾಧಿಸಲು ಯೋಜಿಸುತ್ತಿದ್ದಾರೆ. ಆ ರೀತಿಯ ಸ್ಕ್ರಿಪ್ಟ್’ಗಾಗಿ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿಯೇ ಬ್ರಹ್ಮಾಸ್ತ್ರ 2 ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.ಅದೇನೇ ಆಗಿದ್ದರೂ ರಾಕಿಂಗ್ ಸ್ಟಾರ್ ಅಭಿಮಾನಿಗಳು ಮಾತ್ರ ಯಶ್ ಹೊಸ ಸಿನಿಮಾ ಘೋಷಣೆ ಆಗಿಲ್ಲ ಅಂತ ಬೇಸರದಲ್ಲಿದ್ದಾರೆ. ಅವರು ಆದಷ್ಟು ಬೇಗ ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..