Fact Check : ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು ನಿಜಾನಾ…? ಹಳೇ ಫೋಟೋ ಹಂಚಿಕೊಂಡು ಸುಳ್ಳು ಹೇಳಿದ್ರಾ ಕಾಂಗ್ರೆಸ್ ನಾಯಕರು…!?

ನ್ಯೂಸ್ ಆ್ಯರೋ : ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, 16ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಬಳ್ಳಾರಿರಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ನಡೆದಿದೆ. ಇದರ ಬೆನ್ನಲ್ಲೆ ಸಮಾವೇಶಕ್ಕೆ ಸಂಬಂಧಿಸಿದ ಭಾರಿ ಜನಸಂಖ್ಯೆಯಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆ ಫೋಟೋವನ್ನು ಹಂಚಿಕೊಂಡು ರಾಜ್ಯದ ಜನ ಕಾಂಗ್ರೆಸ್ ಪರವಾಗಿ ಇದ್ದಾರೆ, ಮುಂದಿನ ವಿಧಾನಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ ಅಂತಿದ್ದಾರೆ. ಆದ್ರೆ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆ ಫೋಟೋ ಫೇಕ್ ಅಂದಿದೆ. ಹಾಗಿದ್ರೆ ಆ ಪೋಟೋದ ಹಿಂದಿರುವ ಸತ್ಯಾಸತ್ಯತೆ ಏನು ಎಂಬುದಕ್ಕೆ ಉತ್ತರ ಸಿಕ್ಕಿದೆ.


ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಸಾವಿರ ಕಿಲೋ ಮೀಟರ್ ಪೊರೈಸಿದ ಹಿನ್ನೆಲೆ ಬಳ್ಳಾರಿಯಲ್ಲಿ ನಿನ್ನೆ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಬಳ್ಳಾರಿಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿತ್ತು. ಸಮಾವೇಶದಲ್ಲಿ ಭಾಗಿಯಾಗಿದ್ದ ಜನಸಂಖ್ಯೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಅದಕ್ಕೆ ಈ ಫೋಟೋ ಸಾಕ್ಷಿ ಅಂತ ಕಾಂಗ್ರೆಸ್ ಕಾರ್ಯಕರ್ತರು ಫೋಟೋ ಹಂಚಿಕೊಂಡಿದ್ದರು. ಆದ್ರೆ ಇದು ಫೇಕ್, ಬಳ್ಳಾರಿ ಸಮಾವೇಶದಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಅಷ್ಟಕ್ಕೂ ಈ ಫೋಟೋ ಬಳ್ಳಾರಿದ್ದಾ? ನಿಜವಾಗಿಯೂ ಕಾಂಗ್ರೆಸ್ ಸಮಾವೇಶದಲ್ಲಿ ಅಷ್ಟೊಂದು ಜನ ಸೇರಿದ್ರಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಅಸಲಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೋ ಕಾಂಗ್ರೆಸ್ ಸಮಾವೇಶದ್ದಲ್ಲ. ಫ್ಯಾಕ್ಟ್ ಚೆಕ್ ಮಾಡಿದಾಗ ಈ ಫೋಟೋ ನೈಜೀರಿಯಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋ ಎಂದು ತಿಳಿದು ಬಂದಿದೆ. 2020ರ ಮಾರ್ಚ್’ನಲ್ಲಿ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ನೈಜೀರಿಯಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋವನ್ನು Eagles Arusha ಎಂಬುವರು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. Eagles Arusha ತನ್ನ ಫೇಸ್ಬುಕ್ ಪ್ರೊಫೈಲ್’ಗೆ ಈ ಫೋಟೋವನ್ನು ಹಾಕಿದ್ದರು ಎಂದು ತಿಳಿದು ಬಂದಿದೆ.