ನಿವೃತ್ತಿ ಜೀವನದ ಉಳಿತಾಯಕ್ಕಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ ಬೆಸ್ಟ್ – ಏನಿದು ಯೋಜನೆ? ವಿವರ ಇಲ್ಲಿದೆ…

ನ್ಯೂಸ್ ಆ್ಯರೋ : ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ಇದಾಗಿದೆ. NPS ಯೋಜನೆಯು ಪಿಂಚಣಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಷ್ಟೇ ಅಲ್ಲದೆ, ಜನರಲ್ಲಿ ನಿವೃತ್ತಿ ಜೀವನಕ್ಕೆ ಉಳಿತಾಯ ಮಾಡುವ ಅಭ್ಯಾಸವನ್ನು ಪ್ರೇರೇಪಿಸುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ NPS ಅಡಿಯಲ್ಲಿ, ನೀವು ವೈಯಕ್ತಿಕ ನಿವೃತ್ತಿ ಖಾತೆಯನ್ನು ತೆರೆಯಬಹುದು. NPS ಯೋಜನೆಯು ಎಲ್ಲರಿಗೂ ಮುಕ್ತವಾಗಿದೆ, ಆದರೆ ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿದೆ.
ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡಲು ಇರುವ ಉತ್ತಮ ಆಯ್ಕೆ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಾಗಿದ್ದು, ಉದ್ಯೋಗವನ್ನು ಆರಂಭಿಸಿದ ತಕ್ಷಣ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದಲ್ಲಿ ನೀವು 34 ಲಕ್ಷ ರೂ.ಗಳಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದು. ಇದಕ್ಕಾಗಿ ದೊಡ್ಡ ಮಟ್ಟದ ಹೂಡಿಕೆಯ ಅಗತ್ಯವೂ ಇಲ್ಲ. ಪ್ರತಿದಿನ 50 ರೂ. ಹೂಡಿಕೆ ಮಾಡಿದರೆ ಸಾಕು.
ಜನರ ನಿವೃತ್ತಿಯ ನಂತರದ ಅಗತ್ಯಗಳನ್ನು ಪೂರೈಸಲು NPS ಯೋಜನೆಯನ್ನು ವಿಶೇಷವಾಗಿ ರೂಪಿಸಲಾಗಿದ್ದು, ಜನರು ಸಾಮಾನ್ಯವಾಗಿ ನಿಯಮಿತ ಆದಾಯ ಹೊಂದಿರದಿದ್ದಾಗ ವೃದ್ಧಾಪ್ಯದಲ್ಲಿ ಪಿಂಚಣಿ ಯೋಜನೆಗಳು ಆರ್ಥಿಕ ಸ್ಥಿರತೆ ಮತ್ತು ಭದ್ರತೆ ಖಚಿತಪಡಿಸುತ್ತವೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ NPS ಅಂತಹ ಯೋಜನೆಗಳಲ್ಲಿ ಒಂದಾಗಿದ್ದು, ಹಣ ಹೂಡಿಕೆಗೆ ಉತ್ತಮ ಅವಕಾಶವಾಗಿದ್ದು, ಪ್ರತಿ ದಿನ 50 ರೂ ಹೂಡಿಕೆ ಮಾಡಿದರೆ 34 ಲಕ್ಷ ರೂ. ಸಿಗಲಿದೆ.
27.9 ಲಕ್ಷ ಬಡ್ಡಿ ಪಡೆಯಬಹುದು..!!
ಈ ಯೋಜನೆಯಡಿಯಲ್ಲಿ ಹೂಡಿಕೆ ಆರಂಭಿಸಲು ಕನಿಷ್ಠ 25 ವರ್ಷ ವಯಸ್ಸು ಆಗಿರಬೇಕು. ಮಾನಸಿಕವಾಗಿ 1,500 ರೂ ಹೂಡಿಕೆ ಮಾಡಬಹುದಾಗಿದ್ದು, 35 ವರ್ಷಗಳು ಕಾಲ ಮಿತಿಯಾಗಿದೆ. 35 ವರ್ಷಗಳಲ್ಲಿ ಒಟ್ಟು 6.30 ಲಕ್ಷ ಹೂಡಿಕೆ ಮಾಡ ಬಹುದಾಗಿದ್ದು, ಹೂಡಿಕೆಯ ಮೊತ್ತದ ಮೇಲೆ 27.9 ಲಕ್ಷ ಬಡ್ಡಿ ಪಡೆಯ ಬಹುದು.
ಖಾತೆ ತೆರೆಯುವುದು ಹೇಗೆ?
NPS ಖಾತೆಯನ್ನು ತೆರೆಯಲು ಎರಡು ಮಾರ್ಗಗಳಿದ್ದು, POP-SP (ಪಾಯಿಂಟ್ ಆಫ್ ಪ್ರೆಸೆನ್ಸ್ ಸರ್ವಿಸ್ ಪ್ರೊವೈಡರ್)ಗೆ ಭೇಟಿ ನೀಡುವ ಮೂಲಕ ಬ್ಯಾಂಕ್ ಶಾಖೆ, ಪೋಸ್ಟ್ ಆಫೀಸ್‌ಗಳಲ್ಲಿ ಖಾತೆ ತೆರೆಯಬಹುದು.
PAN ಮತ್ತು ಬ್ಯಾಂಕ್ ವಿವರಗಳನ್ನು ಬಳಸಿಕೊಂಡು eNPS ವೆಬ್‌ಸೈಟ್ (https://enps.nsdl.com/eNPS/NationalPensionSystem.html) ಮೂಲಕ ಆನ್‌ಲೈನ್‌ನಲ್ಲಿ ಖಾತೆ ತೆರೆಯಬಹುದು.
ಯೋಜನೆ ಪ್ರಯೋಜನಗಳು
ತೆರಿಗೆ ಪ್ರಯೋಜನಗಳು: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾಡಿದ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80CCD ಅಡಿ ತೆರಿಗೆ ಕಡಿತಕ್ಕೆ ಒಳಪಡುತ್ತದೆ. ಉದ್ಯೋಗಿಯ ಸಂಬಳದ ಶೇ.10ರಷ್ಟು (ಉದ್ಯೋಗಿಗಳಿಗೆ) ಅಥವಾ ಸ್ವಯಂ ಉದ್ಯೋಗಿಗಳಿಗಾದರೆ ಒಟ್ಟು ಆದಾಯದ ಶೇ.20ರಷ್ಟು ಹಣವನ್ನು ಹೂಡಿಕೆ ಮಾಡಬಹದು. ಈ ಯೋಜನೆಯಡಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಮೊತ್ತಕ್ಕೆ ತೆರಿಗೆ ಕಡಿತ ಲಭ್ಯವಿದೆ.
ಅಗ್ಗದ ಯೋಜನೆ
NPS ಯೋಜನೆಯಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಕನಿಷ್ಠ ಮೊತ್ತವು ವಾರ್ಷಿಕ ₹6,000 ಆಗಿದೆ. ಹೀಗಾಗಿ ಕಡಿಮೆ ವಾರ್ಷಿಕ ಉಳಿತಾಯ ಹೊಂದಿರುವವರು ಕೂಡ ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಅಲ್ಲದೆ, ಫಂಡ್ ಮ್ಯಾನೇಜರ್‌ಗಳು ಹಣ ನಿರ್ವಹಿಸುವ ಶುಲ್ಕ ಕಡಿಮೆ. ಏಕೆಂದರೆ, ಇದು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ.
ಚಂದಾದಾರರ ಮರಣದ ಸಂದರ್ಭದಲ್ಲಿ ಹಿಂತೆಗೆದುಕೊಳ್ಳಲಾದ ಕಾರ್ಪಸ್ ಅನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಸಂಪೂರ್ಣ ಸಂಗ್ರಹವಾದ ಸಂಪತ್ತನ್ನು ಬಳಕೆದಾರರ ಕಾನೂನುಬದ್ಧ ನಾಮಿನಿಗೆ ಪಾವತಿಸಲಾಗುವುದು. ಆದರೆ, ಸರ್ಕಾರಿ ನೌಕರರ ವಿಷಯದಲ್ಲಿ ಸಂಪೂರ್ಣ ಹಣವನ್ನು ಹಿಂಪಡೆಯುವಂತಿಲ್ಲ. ನಾಮಿನಿಯಿಂದ ವರ್ಷಾಶನ ಯೋಜನೆಯನ್ನು ಖರೀದಿಸುವುದು ಕಡ್ಡಾಯವಾಗಿದೆ.