1. Home
  2. Health
  3. Tips
  4. ಯಮಯಾತನೆ ಕೊಡುವ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? – ಮನೆಯಲ್ಲೇ ಇವೆ ಮದ್ದು, ಯಾವುವು ಗೊತ್ತಾ…!?

ಯಮಯಾತನೆ ಕೊಡುವ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? – ಮನೆಯಲ್ಲೇ ಇವೆ ಮದ್ದು, ಯಾವುವು ಗೊತ್ತಾ…!?

ಯಮಯಾತನೆ ಕೊಡುವ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? – ಮನೆಯಲ್ಲೇ ಇವೆ ಮದ್ದು, ಯಾವುವು ಗೊತ್ತಾ…!?
0

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಯಾರಿಗೆ ನೋಡಿದರೂ ಕಾಲು ನೋವು, ಮಂಡಿ ನೋವು ಹಾಗೆಯೇ ಮೂಳೆಗಳ ನೋವು ಸರ್ವೇ ಸಾಮಾನ್ಯ. ಅವರು ಕೆಲಸ ಮಾಡಲಿ ಬಿಡಲಿ ನೋವು ಮಾತ್ರ ಕಾಡದೆ ಬಿಡದು. ಹಲವರಿಗೆ ಹಗಲಿನ ಸಮಯದಲ್ಲಿ ನೋವು ಉಂಟಾದರೆ ಕೆಲವರಿಗೆ ರಾತ್ರಿ ಆಗುತ್ತಿದ್ದಂತೆ ನೋವು ಪ್ರಾಣ ಹಿಂಡುತ್ತದೆ. ನೋವು ಅನೇಕ ಕಾರಣಗಳಿಗೆ ಉಂಟಾಗಬಹುದು. ಅದರಲ್ಲಿ ಮುಖ್ಯವಾದುದು ಭಾರ. ನಿಮ್ಮ ದೇಹದ ಮೇಲೆ ನೀವು ಹೇರುವ ಬಲವಾದ ದೈಹಿಕ ಒತ್ತಡದಿಂದ ನಿಮ್ಮ ದಿನ ನಿತ್ಯದ ಜೀವನದಲ್ಲಿ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ.

ಏಕೆಂದರೆ ನಿಮ್ಮ ಸಂಪೂರ್ಣ ಭಾರ ನೀವು ನಡೆಯಲು ಸಹಾಯ ಮಾಡುವ ನಿಮ್ಮ ಮುಖ್ಯ ಅಂಗಗಳಾದ ಕಾಲುಗಳ ಮತ್ತು ಪಾದಗಳ ಮೇಲೆ ಬೀಳುತ್ತದೆ. ಆದರೆ ಭಾರವನ್ನು ತಡೆಯುವಷ್ಟು ಶಕ್ತಿಯನ್ನು ಮೀರಿದ ಒತ್ತಡ ಏನಾದರೂ ಕಾಲುಗಳ ಮೇಲೆ ಬಿದ್ದಿದ್ದೇ ಆದರೆ, ಕಾಲುಗಳು ತಮ್ಮ ಅಸಹಜತೆಯನ್ನು ನೋವಿನ ಮುಖಾಂತರ ಹೊರ ಹಾಕಲು ಪ್ರಾಂಭ ಮಾಡುತ್ತವೆ. ಮೊಣಕಾಲು ಕೀಲು ನೋವು ಅಂತಹ ಒಂದು ಸಮಸ್ಯೆಯಾಗಿದ್ದು, ಅದು ಕೆಲವರಿಗೆ ಅಲ್ಪ ಸಮಯದವರೆಗೆ ಕಾಡಿದರೆ ಇನ್ನೂ ಕೆಲವರಿಗೆ ದೀರ್ಘಕಾಲದ ಸಮಸ್ಯೆಯಾಗಿ ತೊಂದರೆ ಕೊಡುತ್ತದೆ.

ಮೂಳೆಯ ರಚನೆಯ ಸ್ಥಿರ ದೌರ್ಬಲ್ಯದಿಂದಾಗಿ ಮತ್ತು ದಿನ ಕಳೆದಂತೆ ನಮಗೆ ವಯಸ್ಸಾದಂತೆ ಎದುರಾಗುವ ಮೊಣಕಾಲಿನಲ್ಲಿನ ಕೀಲುಗಳ ಸವೆತ ಮತ್ತು ಹರಿತದಿಂದಾಗಿ ನೀವು ಅನುಭವಿಸುವ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಇದೂ ಸಹ ಒಂದಾಗಿದೆ. ಇತರ ಕೆಲವು ಸಾಮಾನ್ಯ ಕಾರಣಗಳಲ್ಲಿ ಮುರಿತಗಳು, ಅಸ್ಥಿರಜ್ಜು ಉಳುಕು, ಚಂದ್ರಾಕೃತಿ ಗಾಯಗಳು, ಮೊಣಕಾಲಿನ ಒಳಾಂಗಣದ ಪ್ರದೇಶದ ಸ್ಥಳಾಂತರ ಮತ್ತು ಸಂಧಿವಾತ, ಲೂಪಸ್ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದಾಗಿ ಕೀಲುಗಳಲ್ಲಿ ನೋವು ಕಾಣಿಸುತ್ತದೆ.

ಇದಕ್ಕೆ ಇಂತಹದೇ ವಯಸ್ಸಿನ ವರ್ಗದ ಜನರು ಎಂದೇನಿಲ್ಲ. ವಯಸ್ಸಾದ ಜನರು, ಯುವ ವಯಸ್ಕರು ಮತ್ತು ಮಕ್ಕಳು ಎಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಮೊಣಕಾಲು ನೋವಿಗೆ ಗುರಿಯಾಗುತ್ತಾರೆ. ಇನ್ನು ಈ ಮೊಣಕಾಲಿನ ನೋವನ್ನು ಉಪಶಮನ ಮಾಡಲು ಕೆಲವು ಮನೆ ಮದ್ದುಗಳಿದ್ದು, ಆ ಕುರಿತಾದ ಮಾಹಿತಿ ಇಲ್ಲಿದೆ.

ಶುಂಠಿ
ಶುಂಠಿಯಲ್ಲಿ ಜಿಂಜರಾಲ್ ನಂತಹ ಸಂಯುಕ್ತಗಳ ಉಪಸ್ಥಿತಿಯು ಉರಿಯೂತದ ಮತ್ತು ನೋವು ನಿವಾರಕ ಚಿಕಿತ್ಸೆಯನ್ನು ಕೊಡುವ ಒಂದು ಅದ್ಬುತ ಆಹಾರ ಪದಾರ್ಥವಾಗಿ ಶುಂಠಿಯನ್ನು ಮಾರ್ಪಡಿಸಿದೆ. ಸಂಧಿವಾತ, ಸ್ನಾಯು ಒತ್ತಡ ಅಥವಾ ಗಾಯದಂತಹ ಆರೋಗ್ಯ ಸಮಸ್ಯೆಗಳಿಗೆ, ಶುಂಠಿಯು ಪ್ರಬಲ ಪರಿಹಾರ ಒದಗಿಸುತ್ತದೆ.

ಏಕೆಂದರೆ ಇದು ಎಂತಹದೇ ನೋವು ನಿವಾರಣೆಗೆ ಬೇಕಾದರೂ ಸಹಾಯ ಮಾಡುತ್ತದೆ. ಒಂದು ಕಪ್ ಶುದ್ಧ ನೀರಿಗೆ ಸಣ್ಣ ತುಂಡು ತಾಜಾ ಶುಂಠಿಯನ್ನು ಸೇರಿಸಿ ಅದನ್ನು ಒಲೆಯ ಮೇಲೆ ಚೆನ್ನಾಗಿ ಕುದಿಸಿ. ನಿಮಗೆ ಉತ್ತಮ ರುಚಿಯ ಅವಶ್ಯಕತೆ ಇದ್ದಲ್ಲಿ, ನೀವು ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆ ರಸವನ್ನು ಕೂಡ ಸೇರಿಸಬಹುದು. ನೋವು ಹೋಗುವವರೆಗೆ ನೀವು ಪ್ರತಿ ದಿನ ಎರಡರಿಂದ ಮೂರು ಕಪ್ ಈ ಶುಂಠಿ ಚಹಾವನ್ನು ಸೇವಿಸಬಹುದು.

ಇನ್ನೂ ಉತ್ತಮ ಫಲಿತಾಂಶಕ್ಕಾಗಿ ಶುಂಠಿ ರಸದ ಸೇವನೆಯೊಂದಿಗೆ, ನೋವು ಪೀಡಿತ ಮೊಣಕಾಲು ಪ್ರದೇಶವನ್ನು ದಿನಕ್ಕೆ ಎರಡು ಬಾರಿ ಶುಂಠಿ ಎಣ್ಣೆಯಿಂದ ಮಸಾಜ್ ಕೂಡ ಮಾಡಬಹುದು.

ನಿಂಬೆ ಹಣ್ಣು
ನಿಂಬೆ ಹಣ್ಣು ಮತ್ತು ಅದರ ರಸ ನಮಗೆಲ್ಲಾ ತಿಳಿದಿರುವ ಹಾಗೆ ಅನೇಕ ಆರೋಗ್ಯ ಪ್ರಯೋಜನ ಗಳನ್ನು ಹೊಂದಿದೆ. ನಿಂಬೆ ಹಣ್ಣುಗಳಲ್ಲಿ ಉರಿಯೂತದ ಲಕ್ಷಣಗಳು, ಮೊಣಕಾಲು ನೋವಿಗೆ ಮಾರ್ಗದರ್ಶನ ನೀಡುವ ಉರಿಯೂತ, ನೋವು ಮತ್ತು ಊತವನ್ನು ಕಡಿಮೆ ಮಾಡುವ ಗುಣ ಲಕ್ಷಣಗಳು ಇವೆ. ಕೆಲವು ರೀತಿಯ ಸಂಧಿವಾತಕ್ಕೆ ಕಾರಣವಾಗುವ ಯೂರಿಕ್ ಆಸಿಡ್ ಹರಳುಗಳಿಗೆ ಮಾಡರೇಟರ್ ಆಗಿ ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲದ ಅಂಶ ಕೆಲಸ ಮಾಡುತ್ತದೆ.

ಇನ್ನು ಮೊಣಕಾಲು ನೋವಿಗೆ ನೀವು ಮಾಡಬೇಕಾಗಿರುವುದು ನಿಂಬೆ ಹಣ್ಣಿನ ಸಣ್ಣ ಸಣ್ಣ ತುಂಡುಗಳನ್ನು ಹತ್ತಿ ಬಟ್ಟೆಯಲ್ಲಿ ಹಾಕಿ ಸ್ವಲ್ಪ ಬೆಚ್ಚಗಿನ ಎಳ್ಳು ಎಣ್ಣೆಯಲ್ಲಿ ನೆನೆಸಿ. ಪೀಡಿತ ಮೊಣಕಾಲಿನ ಮೇಲೆ ಆ ಬಟ್ಟೆಯನ್ನು 5 ರಿಂದ 10 ನಿಮಿಷಗಳ ಕಾಲ ಇರಿಸಿ. ನೋವು ಸಂಪೂರ್ಣವಾಗಿ ಹೋಗುವವರೆಗೆ ಇದನ್ನು ಪ್ರತಿ ದಿನ ಎರಡು ಬಾರಿ ಮಾಡಿ. ಇದಲ್ಲದೆ, ನೀವು ನಿಂಬೆ ಚಹಾವನ್ನು ಸಹ ಕುಡಿಯ ಬಹುದು, ನಿಂಬೆ ಮಿಶ್ರಿತ ನೀರನ್ನು ಬೆರೆಸಿ ನಿಮ್ಮ ದೇಹದ ಜೀರ್ಣಾಂಗದ ಉತ್ತಮ ಚಯಾಪಚಯ ಕ್ರಿಯೆಗೆ ಪ್ರತಿ ದಿನವೂ ಸೇವಿಸಬಹುದು.

ಕೆಂಪು ಮೆಣಸು
ಕೆಂಪು ಮೆಣಸು (ಲಾಲ್ ಮಿರ್ಚ್) ನಲ್ಲಿ ” ಕ್ಯಾಪ್ಸೈಸಿನ್ ” ಇರುವಿಕೆಯು ಮೊಣಕಾಲು ಕೀಲು ನೋವಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ಆಂಟಿ ಡೋಟ್ ಆಗಿದೆ. ಇದು ತನ್ನ ಉರಿಯೂತದ ಮತ್ತು ನೋವು ನಿವಾರಕ ಗುಣಗಳಿಂದಾಗಿ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಅರ್ಧ ಕಪ್ ಬೆಚ್ಚಗಿನ ಆಲಿವ್ ಎಣ್ಣೆಯಲ್ಲಿ ಎರಡು ಚಮಚ ಕೆಂಪು ಮೆಣಸು ಪುಡಿಯನ್ನು ಸೇರಿಸಿ ನೀವು ಈ ಮಿಶ್ರಣವನ್ನು ತಯಾರಿಸಬಹುದು. ಈ ಪೇಸ್ಟ್ ಅನ್ನು ಗಾಯಗೊಂಡ ಪ್ರದೇಶದ ಮೇಲೆ ಪ್ರತಿ ದಿನ ಎರಡು ಬಾರಿಯಂತೆ ಕನಿಷ್ಠ ಒಂದು ವಾರ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಆಪಲ್ ಸೈಡರ್ ವಿನೆಗರ್
ನಿಮ್ಮ ಮೊಣಕಾಲು ನೋವು ಕಡಿಮೆ ಮಾಡಲು ಆಪಲ್ ಸೈಡರ್ ವಿನೆಗರ್ ಅತ್ಯುತ್ತಮ ಮೂಲವಾಗಿದೆ. ನೀವು ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಮಲಗುವ ಮುನ್ನ ಪ್ರತಿ ದಿನ ಬೇಕಾದರೂ ಕುಡಿಯಬಹುದು.

ಇನ್ನೊಂದು ವಿಧಾನದಲ್ಲಿ ನಿಮ್ಮ ನೀರಿನ ಸ್ನಾನದ ತೊಟ್ಟಿಯಲ್ಲಿ ನೀವು ಸ್ವಲ್ಪ ಪ್ರಮಾಣದ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ ಮತ್ತು ಅದರಲ್ಲಿ ಸುಮಾರು 20 – 25 ನಿಮಿಷಗಳ ಕಾಲ ಮೊಣಕಾಲು ಮುಳುಗಿಸಬಹುದು. ಆಪಲ್ ಸೈಡರ್ ವಿನೆಗರ್ ಬಳಸುವ ಮತ್ತೊಂದು ವಿಧಾನವೆಂದರೆ, ಅದನ್ನು ತೆಂಗಿನ ಎಣ್ಣೆಯಿಂದ ಬೆರೆಸಿ ಮೊಣಕಾಲಿನ ಪೀಡಿತ ಪ್ರದೇಶದ ಮೇಲೆ ಹಚ್ಚುವುದು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..