1. Home
  2. Health
  3. Tips
  4. ಬಿಸಿಲಿನ ಶಾಖಕ್ಕೆ ಚರ್ಮ ಕಪ್ಪಾಗುವ ಭಯವೇ..!? ಈ ಮನೆಮದ್ದು ಬಳಸಿ, ಹೊಳೆಯುವ ಚರ್ಮ ನಿಮ್ಮದಾಗಿಸಿ…

ಬಿಸಿಲಿನ ಶಾಖಕ್ಕೆ ಚರ್ಮ ಕಪ್ಪಾಗುವ ಭಯವೇ..!? ಈ ಮನೆಮದ್ದು ಬಳಸಿ, ಹೊಳೆಯುವ ಚರ್ಮ ನಿಮ್ಮದಾಗಿಸಿ…

ಬಿಸಿಲಿನ ಶಾಖಕ್ಕೆ ಚರ್ಮ ಕಪ್ಪಾಗುವ ಭಯವೇ..!? ಈ ಮನೆಮದ್ದು ಬಳಸಿ, ಹೊಳೆಯುವ ಚರ್ಮ ನಿಮ್ಮದಾಗಿಸಿ…
0

ನ್ಯೂಸ್ ಆ್ಯರೋ‌ : ಆಗಲೇ ಬೇಸಿಗೆ ಬಿಸಿಲಿನ ಝಳ ತಟ್ಟುತ್ತಿದೆ. ಇನ್ನು ಮುಂದೆ ಸೂರ್ಯನ ಹಾನಿಕಾರಕ ಯುವಿ ಕಿರಣಗಳ ವಿರುದ್ಧ ಮುಖ ಮತ್ತು ಕುತ್ತಿಗೆಯನ್ನು ರಕ್ಷಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ನಾವು ಅದೆಷ್ಟೇ ಟ್ರಿಕ್ ಮಾಡಿದರೂ ಚರ್ಮವು ಕಪ್ಪಾಗುವುದು ತಪ್ಪುವುದಿಲ್ಲ. ಇದಲ್ಲದೆ ಅತಿಯಾದ ಮಾಲಿನ್ಯದಿಂದಾಗಿಯೂ ಡಾರ್ಕ್ ಸ್ಕಿನ್ ಟೋನ್’ಗೆ ಕಾರಣವಾಗಬಹುದು.

ಬಹಳಷ್ಟು ಜನರು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಸ್ಕಾರ್ಫ್ ಧರಿಸಲು ಸಲಹೆ ನೀಡುತ್ತಾರೆ. ಆದರೆ ಸುಡುವ ಸೂರ್ಯನ ಶಾಖದಿಂದ ತಲೆಯಿಂದ ಪಾದವನ್ನು ಸಂರಕ್ಷಿಸಿಕೊಳ್ಳಲು ಸ್ಕಾರ್ಫ್ ಧರಿಸುವುದು ಬಿಟ್ಟು ಬೇರೆ ಐಡಿಯಾ ಕೂಡ ಇದೆ. ಈಗ ಮಾರುಕಟ್ಟೆಗಳಲ್ಲಿ ಪಾದ, ಕೈ ಮತ್ತು ಮುಖದ ಕ್ರೀಂಗಳು ಲಭ್ಯವಿರುವುದರಿಂದ ಬಹುತೇಕರಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡುವುದಿಲ್ಲ. ಆದರೆ ಎಷ್ಟು ಬಾರಿ ಅಂತ ನೀವು ಹಣ ಖರ್ಚು ಮಾಡುತ್ತೀರಿ. ಆದ್ದರಿಂದ ನೀವು ಸರಳವಾದ ಮನೆಮದ್ದು ಗಳನ್ನು ಬಳಸಿ.

ಇವು ಸುರಕ್ಷಿತವಾಗಿದ್ದು, ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕಗಳಿಂದ ನಿಮ್ಮನ್ನು ಮುಕ್ತವಾಗಿಸುತ್ತದೆ. ಸದ್ಯ ನಿಮ್ಮ ಅಡುಗೆಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿಕೊಂಡು ನಿಮ್ಮ ಚರ್ಮವನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಹಸಿ ಹಾಲು

ಡೆಡ್ ಸ್ಕಿನ್ ಮತ್ತು ಕೊಳೆಯನ್ನು ತೆಗೆದುಹಾಕಲು ಅತ್ಯಂತ ಉಪಯುಕ್ತವಾದ ಪರಿಹಾರವೆಂದರೆ ಹಸಿ ಹಾಲು. ಕಪ್ಪಾದ ಕೈ ಕಾಲುಗಳನ್ನು ಬೆಳ್ಳಗಾಗಿಸಲು ಹಿಂದಿನಿಂದಲೂ ಹಸಿ ಹಾಲನ್ನು ಹಿಂದಿನಿಂದಲೂ ಬಳಸುತ್ತಾರೆ. ಹಾಲಿನಲ್ಲಿ ಲ್ಯಾಕ್ಟಿಕ್ ಇರುವುದರಿಂದ, ನಿಮ್ಮ ಚರ್ಮದಿಂದ ಡೆಡ್ ಸ್ಕಿನ್ ತೆಗೆಯಲು ಸುಲಭವಾಗಿ ಸಹಾಯ ಮಾಡುತ್ತದೆ. ರಂಧ್ರಗಳೊಳಗೆ ಹೋಗಿ ಒಳಗಿನಿಂದ ಅದನ್ನು ಸ್ವಚ್ಛಗೊಳಿಸುತ್ತದೆ. ಹಾಲು ಬ್ಲೀಚಿಂಗ್ ಏಜೆಂಟ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ, ಕಪ್ಪಾದ ಬಣ್ಣವನ್ನು ತಿಳಿಗೊಳಿಸುವುದಲ್ಲದೆ, ಚರ್ಮವನ್ನು ಮೃದುಗೊಳಿಸುತ್ತದೆ.

ಕಡಲೆ ಹಿಟ್ಟು ಪ್ಯಾಕ್

ಎರಡು ಚಮಚ ಕಡಲೆ ಹಿಟ್ಟು, ಒಂದು ಟೀಸ್ಪೂನ್ ಅರಿಶಿನ, ಎರಡು ಚಮಚ ಹಾಲು ಮತ್ತು ಕೆಲವೇ ಹನಿ ನಿಂಬೆ ರಸ ಮಿಶ್ರಣ ಮಾಡಿ, ಗಟ್ಟಿಯಾದ ಪ್ಯಾಕ್ ತಯಾರಿಸಿ. ಇದನ್ನು ಹಿಂದಿಯಲ್ಲಿ ಉಬ್ತಾನ್ ಎಂದು ಕರೆಯಲಾಗುತ್ತದೆ . ನಿಮ್ಮ ಚರ್ಮದಿಂದ ಟ್ಯಾನಿಂಗ್ ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಈ ಪ್ಯಾಕ್ ಸಾಕಷ್ಟು ಕೆಲಸ ಮಾಡುತ್ತದೆ. ಈ ಪ್ಯಾಕ್ ಅನ್ನು ಶುಚಿಗೊಳಿಸಿದ ನಂತರ ಮೊಯಿಶ್ಚರೈಸರ್ ಬಳಸಿ, ಇಲ್ಲದಿದ್ದರೆ ಪ್ಯಾಕ್ ತ್ವಚತೆಯ ಶುಷ್ಕತೆಗೆ ಕಾರಣವಾಗಬಹುದು.

ನಿಂಬೆ

ವಿಟಮಿನ್ ‘ಸಿ’ ಒಳಗೊಂಡಿರುವ ನಿಂಬೆಹಣ್ಣು ಸಹ ತ್ವಚೆಯ ಉತ್ತಮ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ತ್ವಚೆಯನ್ನು ಸ್ವಚ್ಛಗೊಳಿಸಲು ಮತ್ತು ಹಗುರಗೊಳಿಸಲು ನಿಂಬೆ ಬಹಳ ಉಪಯುಕ್ತ ಪರಿಹಾರವಾಗಿದೆ. ಆದ್ದರಿಂದ ನೀವು ಅರ್ಧ ಹೋಳು ನಿಂಬೆ ಹಣ್ಣು ತೆಗೆದುಕೊಂಡು, ಅದರ ಮೇಲೆ ಸ್ವಲ್ಪ ಸಕ್ಕರೆ ಹಾಕಿ. ಇದನ್ನು ನಿಮ್ಮ ಕೈ ಮತ್ತು ಕಾಲುಗಳ ಮೇಲೆ ಸ್ಕ್ರಬ್ ಮಾಡಿ, 10 ನಿಮಿಷಗಳ ನಂತರ ತೊಳೆಯಿರಿ. ಶುಷ್ಕತೆಯನ್ನು ತಪ್ಪಿಸಲು ನಂತರ ಮೊಯಿಶ್ಚರೈಸರ್ ಹಚ್ಚಿ. ಉತ್ತಮ ಫಲಿತಾಂಶ ಸಿಗುವವರೆಗೆ ವಾರಕ್ಕೊಮ್ಮೆ ಇದನ್ನು ಮಾಡಿ

ಅಲೋವೆರಾ

ಮನೆಮದ್ದುಗಳ ಬಗ್ಗೆ ಮಾತನಾಡುವಾಗ ಅಲೋವೆರಾವನ್ನು ಮೆರೆಯಲು ಸಾಧ್ಯವೇ? ಅಲೋವೆರಾ ಗಿಡದಿಂದ ಎಲೆಗಳನ್ನು ಕಿತ್ತು, ಅದರಿಂದ ರಸ ಮಾತ್ರ ಹೊರತೆಗೆದು, ನಿಮ್ಮ ಕೈ ಮತ್ತು ಕಾಲುಗಳಿಗೆ ಹಚ್ಚಿ, 10 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಉತ್ತಮ ಫಲಿತಾಂಶ ಸಿಗಲು ದಿನಕ್ಕೆ ಎರಡು ಬಾರಿ ಇದನ್ನು ಹಚ್ಚಿ. ಇದೇ ರೀತಿ ನೀವು ಬಾದಾಮಿ ಎಣ್ಣೆಯನ್ನು ಸಹ ಬಳಸಬಹುದು.

ಟೊಮೆಟೊ ಸ್ಕ್ರಬ್

ಟೊಮೆಟೊ ಕೇವಲ ಬ್ಲೀಚಿಂಗ್ ಏಜೆಂಟ್ ಮಾತ್ರವಲ್ಲ, ನಿಮ್ಮ ಚರ್ಮಕ್ಕೆ ಯುವಿನಿಂದ ಆಗುವ ಹಾನಿ ತಗ್ಗಿಸುತ್ತದೆ. ಟೊಮೆಟೊ ಜ್ಯೂಸ್ ಅಥವಾ ಅರ್ಧ ಟೊಮೆಟೊವನ್ನು ಹಾನಿಗೊಳಗಾಗಿರುವ ಚರ್ಮದ ಮೇಲೆ ಹಚ್ಚಿ ಸ್ಕ್ರಬ್ ಮಾಡಿ, ಉತ್ತಮ ಫಲಿತಾಂಶಕ್ಕಾಗಿ ಒಂದೆರಡು ನಿಮಿಷಗಳ ನಂತರ ತೊಳೆಯಿರಿ. 2 ರಿಂದ 3 ನಿಮಿಷಗಳವರೆಗೆ ಸ್ಕ್ರಬ್ ಮಾಡಿದರೂ ಸಾಕು.

ಅಮೂಲ್ಯ ಸಲಹೆಗಳು…

  • ಹೊರಗಡೆ ಸೂರ್ಯನ ಬಿಸಿಲಿನಲ್ಲಿ ಓಡಾಡಿದಾಗ ಟ್ಯಾನ್ ಆಗುವುದು ಖಚಿತ. ಆದ್ದರಿಂದ ತಕ್ಷಣವೇ ಟ್ಯಾನ್ ಆದ ಜಾಗಕ್ಕೆ ಮೇಲೆ ಹೇಳಿದ ಪರಿಹಾರಗಳನ್ನು ಪ್ರಯತ್ನಿಸಿ.
  • ಐಸ್ ಬಳಸುವಾಗ ಚರ್ಮದ ಮೇಲೆ ನೇರವಾಗಿ ಇಡಬೇಡಿ. ಏಕೆಂದರೆ ಐಸ್ ತ್ವಚೆಯ ಮೇಲೆ ಮತ್ತಷ್ಟು ಹಾನಿಯನ್ನುಂಟುಮಾಡಬಹುದು.
  • ಹಾನಿಗೊಳಗಾದ ತ್ವಚೆಯನ್ನು ಸಾಬೂನು ಮತ್ತು ನೀರಿನಿಂದ ಪ್ರತಿದಿನ ಸ್ವಚ್ಛಗೊಳಿಸಿ, ಪ್ರತಿದಿನ ಮನೆಮದ್ದುಗಳನ್ನು ಹಚ್ಚುತ್ತಾ ಉತ್ತಮ ಫಲಿತಾಂಶ ಬರುವವರೆಗೂ ಪ್ರಯತ್ನಿಸಿ.
  • ಹಾನಿಗೊಳಗಾದ ಚರ್ಮವನ್ನು ಪುನರುತ್ಪಾದಿಸಲು ವಿಟಮಿನ್ ಇ ಕ್ರೀಮ್ ಅಥವಾ ಅಲೋವೆರಾ ಉಪಯೋಗಿಸಿ.
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..