1. Home
  2. Health
  3. Tips
  4. ವಿರಾಟ್ ಕೊಹ್ಲಿ, ಮಲೈಕಾ ಅರೋರಾ ಸೇರಿದಂತೆ ಹಲವು ತಾರೆಯರ ಆರೋಗ್ಯದ ಗುಟ್ಟು ಈ ಬ್ಲ್ಯಾಕ್ ವಾಟರ್ – ಏನಿದು ಬ್ಲ್ಯಾಕ್ ವಾಟರ್? ಬೆಲೆ ಎಷ್ಟು ಗೊತ್ತಾ…!?

ವಿರಾಟ್ ಕೊಹ್ಲಿ, ಮಲೈಕಾ ಅರೋರಾ ಸೇರಿದಂತೆ ಹಲವು ತಾರೆಯರ ಆರೋಗ್ಯದ ಗುಟ್ಟು ಈ ಬ್ಲ್ಯಾಕ್ ವಾಟರ್ – ಏನಿದು ಬ್ಲ್ಯಾಕ್ ವಾಟರ್? ಬೆಲೆ ಎಷ್ಟು ಗೊತ್ತಾ…!?

ವಿರಾಟ್ ಕೊಹ್ಲಿ, ಮಲೈಕಾ ಅರೋರಾ ಸೇರಿದಂತೆ ಹಲವು ತಾರೆಯರ ಆರೋಗ್ಯದ ಗುಟ್ಟು ಈ ಬ್ಲ್ಯಾಕ್ ವಾಟರ್ – ಏನಿದು ಬ್ಲ್ಯಾಕ್ ವಾಟರ್? ಬೆಲೆ ಎಷ್ಟು ಗೊತ್ತಾ…!?
0

ನ್ಯೂಸ್ ಆ್ಯರೋ‌ : ಆರೋಗ್ಯಕ್ಕೆ ಒಳ್ಳೆದು, ಇದ್ರಿಂದ ಸಿಕ್ಕಾಪಟ್ಟೆ ಪ್ರಯೋಜನ ಇದೆ ಅಂತ ಆದ್ರೆ ಅದನ್ನು ಮೊದಲು ಶುರು ಮಾಡೋದು ನಮ್ಮ ಸೆಲೆಬ್ರಿಟಿಗಳು. ಹೊಸಾ ಬಗೆ ಡಯೆಟ್ ಇರ್ಲಿ, ಕಂಡು ಕೇಳರಿಯದ ಆಹಾರ ಪದ್ಧತಿ ಇರ್ಲಿ ಅವರು ಅದೆಲ್ಲಿಂದಲೋ ತಿಳಿದುಕೊಂಡು ಫಾಲೋ ಮಾಡೋಕೆ ಶುರು ಮಾಡುತ್ತಾರೆ. ತಮ್ಮ ನೆಚ್ಚಿನ ತಾರೆಯರು ಏನೋ ಮಾಡುತ್ತಿದ್ದಾರೆ ಅಂದ್ರೆ ಜನ ಸುಮ್ಮನೆ ಇರ್ತಾರಾ? ತಾವೂ ಇದನ್ನ ಟ್ರೈ ಮಾಡೋಣ ಅಂತ ಅವರು ಹೊರಟುಬಿಡ್ತಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಾ ಇರೋದು ಬ್ಲಾಕ್ ವಾಟರ್ ಅಥವಾ ಬ್ಲಾಕ್ ಆಲ್ಕಲೈನ್ ವಾಟರ್ ಎನ್ನುವ ವಿಶೇಷ ನೀರಿನ ಬಗ್ಗೆ. ಬಾಲಿವುಡ್ ತಾರೆ ಮಲೈಕಾ ಅರೋರಾ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಶೃತಿ ಹಾಸನ್ ಸೇರಿದಂತೆ ಅನೇಕ ಖ್ಯಾತನಾಮರು ಈಗ ಈ ಕಪ್ಪು ನೀರನ್ನೇ ಕುಡಿಯೋದಂತೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್? ಎಲ್ಲಿ ಸಿಗುತ್ತೆ? ಇದ್ರಿಂದ ಏನು ಪ್ರಯೋಜನ? ಫುಲ್ ಡೀಟೆಲ್ಸ್ ಇಲ್ಲಿದೆ.

ಕಪ್ಪು ನೀರಿನಲ್ಲಿ ಅದ್ಭುತವಾದ ಆರೋಗ್ಯಕಾರಿ ಲಾಭಗಳು ಅಡಗಿದ್ದು, ಕಪ್ಪು ನೀರಿನ ಪ್ರಯೋಜನಗಳು ನಾವು ಕುಡಿಯುವ ಸಾಮಾನ್ಯ ನೀರು ಅಥವಾ ಎಳನೀರಿನ ಪಿಎಚ್ ಮಟ್ಟವು 7 ಆಗಿದ್ದರೆ, ಈ ಕಪ್ಪು ನೀರು ಅದಕ್ಕಿಂತ ಹೆಚ್ಚಿನ ಪಿಎಚ್ ಅಂಶವನ್ನು ಹೊಂದಿದೆ. ಅಲ್ಲದೆ, ಈ ಕಪ್ಪು ನೀರು ದೇಹವನ್ನು ಹೈಡ್ರೇಟ್ ಮತ್ತು ಫಿಟ್ ಆಗಿ ಇರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಶೇ.70 ರಷ್ಟು ಖನಿಜಾಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಈ ನೀರನ್ನು ದೇಹಕ್ಕೆ ಬೇಕಾದಷ್ಟು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಜಠರಗರುಳಿನ ಸಮಸ್ಯೆಗಳು ಬರುವುದಿಲ್ಲ. ಹೆಚ್ಚು ಕಪ್ಪು ನೀರನ್ನು ಸೇವಿಸುವುದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ. ಚರ್ಮದ ಶುಷ್ಕತೆಯನ್ನು ತಡೆಯುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಕಪ್ಪು ನೀರು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಈ ನೀರು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಬೇಸಿಗೆಯಲ್ಲಿ ಈ ನೀರನ್ನು ಹೆಚ್ಚು ಸೇವಿಸಿದರೆ ಸನ್ ಸ್ಟ್ರೋಕ್ ನಿಂದ ಮುಕ್ತಿ ಪಡೆಯಬಹುದು.

ಕಪ್ಪು ನೀರು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಮತ್ತು ಕೀಲುಗಳಲ್ಲಿ ಅಂಟು ಪ್ರಮಾಣವನ್ನು ಹೆಚ್ಚಿಸುವಂತಹ ದೇಹದ ಪ್ರಮುಖ ಕಾರ್ಯಗಳಲ್ಲಿ ಕಪ್ಪು ನೀರು ತೊಡಗಿಸಿಕೊಂಡಿದೆ. ಚಯಾಪಚಯ ಮತ್ತು ನರವೈಜ್ಞಾನಿಕ ಕಾರ್ಯಗಳನ್ನು ಬದಲಾಯಿಸುತ್ತದೆ.

ನಾವು ದಿನನಿತ್ಯ ಕುಡಿಯುವ ನೀರು ಸಾಮಾನ್ಯವಾಗಿ ಅಜೈವಿಕ ಲವಣಗಳನ್ನು ಹೊಂದಿರುತ್ತದೆ. ಆದರೆ ಕಪ್ಪು ನೀರಿನಲ್ಲಿನ ನೀರು ಹೆಚ್ಚು ಕ್ಷಾರೀಯವಾಗಿರುತ್ತದೆ. ಹಾಗಾಗಿ ಕಪ್ಪು ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು.

ಈ ಕಾರಣಕ್ಕಾಗಿಯೇ ಮಲೈಕಾ ಅರೋರಾ, ಊರ್ವಶಿ ರೌಟೇಲಾ, ಶ್ರುತಿ ಹಾಸನ್ ಮುಂತಾದ ಅನೇಕ ತಾರೆಯರು ಕೂಡ ಈ ಕಪ್ಪು ನೀರನ್ನು ಕುಡಿಯುತ್ತಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ, ಪ್ರಸ್ತುತ ಭಾರತದಲ್ಲಿ ಬ್ಲ್ಯಾಕ್ ವಾಟರ್ ಕುಡಿಯುತ್ತಿರುವವರ ಪಟ್ಟಿಯು ಕಳೆದ ಕೆಲವು ತಿಂಗಳುಗಳಿಂದ ಸ್ಥಿರವಾಗಿ ಹೆಚ್ಚುತ್ತಿದೆ.

ಇನ್ನೂ ಗುಜರಾತ್ನ ವಡೋದರಾದಲ್ಲಿರುವ ಸ್ಟಾರ್ಟ್ ಅಪ್ ಒಂದು ಬ್ಲಾಕ್ ವಾಟರ್ ನ್ನು ಭಾರತದಲ್ಲಿ ಪರಿಚಯಿಸಿದೆ. ಒಂದು ಬಾಟಲ್ ಬ್ಲಾಕ್ ವಾಟರ್ ಬೆಲೆ 100 ರೂ ಇದೆ. ಇದು ಹೆಸರಿಗೆ ತಕ್ಕಂತೆ ನೋಡೋಕೆ ಕಪ್ಪಗೆ ಇರೋದು ಮಾತ್ರವಲ್ಲ, ಅದರಲ್ಲಿ ಸುಮಾರು 70 ವಿವಿಧ ಬಗೆಯ ಖನಿಜಾಂಶಗಳಿವೆ ಎನ್ನಲಾಗಿದೆ. ಇವು ದೇಹದ ಜೀರ್ಣಶಕ್ತಿ ಹೆಚ್ಚಿಸಿ, ಅಸಿಡಿಟಿ ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎನ್ನಲಾಗಿದೆ. ಈ ನೀರಿನ ಪಿಎಚ್ ಪ್ರಮಾಣ 7ಕ್ಕಿಂತ ಹೆಚ್ಚಿದ್ದು ವಯಸ್ಸಾಗುವುದನ್ನು ನಿಧಾನಿಸುತ್ತದೆ ಎನ್ನುತ್ತದೆ ತಯಾರಿಕಾ ಸಂಸ್ಥೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..