ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ನ್ಯೂಸ್ ಆ್ಯರೋ : ಹಿಂದೆಂದೂ ಇರದಷ್ಟು ಚಳಿ ಈ ವರ್ಷ ಕಾಡುತ್ತಿದೆ. ಜೊತೆಗೆ ಹಲವಾರು ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗಿದೆ. ಜನರು ಮನೆಯಿಂದ ಹೊರಗೆ ಬರಲು ಕಷ್ಟ ಪಡುತ್ತಿದ್ದಾರೆ. ಜೊತೆಗೆ ಆಗಾಗ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಲವುಕಡೆ ಜನಸಾಮಾನ್ಯರನ್ನು ಹೈರಾಣು ಮಾಡಿದೆ. ಹೀಗಾಗಿ ಎಷ್ಟೋ ಜನರು ಮನೆಯಿಂದ ಹೊರಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾಕಂದ್ರೆ ಎಲ್ಲಿ ಮನೆಯಿಂದ ಹೊರಗೆ ಬಂದರೆ ಸಂಕ್ರಮಿಕ ರೋಗಗಳ ಜೊತೆಗೆ ಚಳಿಗಾಲದ ಹಾವಳಿಗೆ ಸಿಲುಕಿ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಸಬೇಕಾಗುತ್ತದೆ ಎಂಬ ಭಯ ಕಾಡುತ್ತಿದೆ. ಹೀಗಿರುವಾಗಲೇ ಮನೆಯಲ್ಲಿ ಮಕ್ಕಳು ಇದ್ದರೆ ಅವರ ಆರೋಗ್ಯ ಕಾಪಾಡುವುದು ಚಳಿಗಾಲದಲ್ಲಿ ದೊಡ್ಡ ಸಮಸ್ಯೆ. ಇತರ ಎಲ್ಲಾ ಕಾಲಕ್ಕೆ ಹೋಲಿಕೆ ಮಾಡಿದರೆ ಚಳಿಗಾಲದಲ್ಲಿ ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಒಂದು ಚೂರು ಎಚ್ಚರ ತಪ್ಪಿದರೂ ಮಗುವಿನಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲಸಗಳನ್ನು ತಪ್ಪದೇ ಮಾಡಿ.
ಚಳಿಗಾಲದಲ್ಲಿ ಮಕ್ಕಳಿಗೆ ನೀಡಿ ಪೌಷ್ಟಿಕ ಆಹಾರ
ಚಳಿಗಾಲದಲ್ಲಿ ಮಕ್ಕಳನ್ನು ಎಷ್ಟು ಬೆಚ್ಚಗೆ ಇಡುತ್ತದೆ ಅಷ್ಟೇ ಅವರ ಆಹಾರ ಪದ್ಧತಿಯ ಮೇಲೆ ನಾವು ಗಮನ ಕೊಡಬೇಕು. ಚಳಿಗಾಲದಲ್ಲಿ ಮಕ್ಕಳಿಗೆ ನಾವು ನೀಡುವ ಆಹಾರಗಳು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಋತುಮಾನದ ಕಾಯಿಲೆಗಳಿಂದ ರಕ್ಷಣೆ ಮಾಡುತ್ತವೆ.. ಹೀಗಾಗಿ ಚಳಿಗಾಲದಲ್ಲಿ ಮಕ್ಕಳು ಆಹಾರದ ಸೇವನೆ ಮಾಡಿದರೆ ಆರೋಗ್ಯದಿಂದ ತುಂಬಿರಲು ಸಾಧ್ಯ.
1) ಮೊಟ್ಟೆ:
ಮೊಟ್ಟೆ ಕೇವಲ ವಯಸ್ಕರ ಆರೋಗ್ಯ ಮಾತ್ರವಲ್ಲ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಚಳಿಗಾಲದ ಸಮಯದಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಪೌಷ್ಟಿಕಾಂಶ ಲಭಿಸಲಿದೆ. ಮೊಟ್ಟೆಯಲ್ಲಿ ಪ್ರೊಟೀನ್, ವಿಟಮಿನ್-ಬಿ, ವಿಟಮಿನ್-ಡಿ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಫೋಲಿಕ್ ಆಮ್ಲವಿದ್ದು ಮಕ್ಕಳ ಮೆದುಳನ್ನು ಚುರುಕುಗೊಳಿಸುತ್ತದೆ. ಅಲ್ಲದೆ ಚಳಿಗಾಲದಲ್ಲಿ ಸದಾ ಮಕ್ಕಳು ಸಕ್ರಿಯರಾಗಿರುವಂತೆಯೇ ನೋಡಿಕೊಳ್ಳುತ್ತದೆ.
2)ಡ್ರೈ ಫ್ರೂಟ್ಸ್:
ಡ್ರೈಫ್ರೂಟ್ಸ್ ಸೇವನೆ ಸರ್ವಕಾಲಕ್ಕೂ ಮಕ್ಕಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಬಾದಾಮಿ ಗೋಡಂಬಿ ಅಂಜೂರದ ಹಣ್ಣು ಹಾಗೂ ವಾಲ್ನಟ್ ಇವನೇ ಮಾಡುವುದರಿಂದ ಪ್ರತಿನಿತ್ಯ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಜೊತೆಗೆ ಡ್ರೈ ಫ್ರೂಟ್ಸ್ ಮಕ್ಕಳನ್ನು ಚಳಿಯಿಂದ ರಕ್ಷಿಸುತ್ತದೆ, ಜೊತೆಗೆ ಅವರಿಗೆ ಶಕ್ತಿಯನ್ನು ನೀಡುವ ಮೂಲಕ ಅವರನ್ನು ಆರೋಗ್ಯವಾಗಿಡುತ್ತದೆ.
3)ತುಪ್ಪ:
ಕೆಲವರು ಚಳಿಗಾಲದ ಸಮಯದಲ್ಲಿ ಮಕ್ಕಳಿಗೆ ತುಪ್ಪ ನೀಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಈ ಚಳಿಗಾಲದ ಸಮಯದಲ್ಲಿ ಮಕ್ಕಳಿಗೆ ಬ್ಯಾಕ್ಟೀರಿಯಾಗಳು ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಮಕ್ಕಳು ಬೇಗ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಚಳಿಗಾಲದಲ್ಲಿ ಮಕ್ಕಳು ತುಪ್ಪ ಸೇವನೆ ಮಾಡುವುದರಿಂದ ಅದು ಬಲಶಾಲಿಯಾಗಿದೆ. ಜೊತೆಗೆ ಕೊಬ್ಬಿನ ಜೊತೆಗೆ ತುಪ್ಪವು ಆಂಟಿಫಂಗಲ್, ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಮಕ್ಕಳ ಕಣ್ಣುಗಳು, ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ತ್ವರಿತವಾಗಿ ಜೀರ್ಣವಾಗುತ್ತದೆ, ಜೊತೆಗೆ ಮಕ್ಕಳ ಮೂಳೆಗಳನ್ನು ಬಲಪಡಿಸುತ್ತದೆ.
4) ಹಾಲು
ಪುಟ್ಟ ಮಕ್ಕಳ ಪ್ರಿಯ ಆಹಾರವಾಗಿರುವ ಹಾಲಿನ ಸೇವನೆಯಿಂದ ಮಕ್ಕಳಿಗೆ ಸಮೃದ್ಧವಾದ ಕ್ಯಾಲ್ಸಿಯಂ ವಿಟಮಿನ್ ಗಳು ದೊರೆಯಲಿದೆ.ಚಳಿಗಾಲದಲ್ಲಿ ನಿಯಮಿತವಾಗಿ ಮಕ್ಕಳು ಹಾಲು ಸೇವನೆ ಮಾಡುತ್ತಾ ಬಂದರೆ ಮಕ್ಕಳ ಮೂಳೆ ಉಗುರು ಹಾಗೂ ಹಲ್ಲುಗಳು ಆರೋಗ್ಯಕರವಾಗಿ ಇರಲಿದೆ. ಇನ್ನು ಚಳಿಗಾಲದಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಬೀಳುತ್ತಿರುವುದರಿಂದ ಡಿ ವಿಟಮಿನ್ ಸರಿಯಾಗಿ ದೊರಕುವುದಿಲ್ಲ. ಆದ್ರೆ ಹಾಲು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದರಲ್ಲಿ ಅಯೋಡಿನ್, ನಿಯಾಸಿನ್, ವಿಟಮಿನ್-ಬಿ6, ವಿಟಮಿನ್-ಎ, ಬಿ2 ಮತ್ತು ಜಿಂಕ್ ಅಂಶಗಳಿದ್ದು, ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ.
5) ಹಸಿ ತರಕಾರಿಗಳು ಹಾಗೂ ಹಣ್ಣು:
ಚಳಿಗಾಲ ಮಾತ್ರವಲ್ಲದೆ ಬೇರೆ ಎಲ್ಲ ಕಾಲದಲ್ಲೂ ಹಸಿ ತರಕಾರಿ ಹಾಗೂ ಹಣ್ಣುಗಳ ಸೇವನೆ ಮಕ್ಕಳಿಗೆ ಉತ್ತಮವಾದ ಆಹಾರ ಪದಾರ್ಥವಾಗಿದೆ. ಪ್ರತಿ ಋತುಮಾನದಲ್ಲಿ ಮಕ್ಕಳ ಆರೋಗ್ಯವನ್ನು ಸಂದರ್ಭಕ್ಕೆ ತಕ್ಕಂತೆ ಕಾಪಾಡಲು ತರಕಾರಿ ಹಾಗೂ ಹಣ್ಣು ಸಹಾಯಕ. ಬೆಳೆಯುತ್ತಿರುವ ಮಕ್ಕಳಿಗೆ ಹಣ್ಣು ಹಾಗೂ ತರಕಾರಿಗಳ ನಿಯಮಿತ ಸೇವನೆ ಮಾಡಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಅದರಲ್ಲೂ ಚಳಿಗಾಲದಲ್ಲಿ ದೇಹಕ್ಕೆ ಸುಲಬವಾಗಿ ಹರಡುವ ಸೋಂಕು ಹಾಗೂ ರೋಗಗಳಿಂದ ಹಣ್ಣು ಹಾಗೂ ತರಕಾರಿ ರಕ್ಷಣೆ ಮಾಡಲಿವೆ. . ಹಣ್ಣುಗಳು ಮತ್ತು ತರಕಾರಿಗಳು ಪೋಷಕಾಂಶಗಳು, ವಿಟಮಿನ್ಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ, ಇದರಿಂದಾಗಿ ಅವುಗಳ ಜೀರ್ಣಕ್ರಿಯೆಯು ಉತ್ತಮವಾಗಿ ಉಳಿಯುತ್ತದೆ.