1. Home
  2. Job
  3. Openings
  4. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1673 ಹುದ್ದೆಗಳು – ಪದವೀಧರರು ಅರ್ಜಿ‌ ಸಲ್ಲಿಸಬಹುದು, ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1673 ಹುದ್ದೆಗಳು – ಪದವೀಧರರು ಅರ್ಜಿ‌ ಸಲ್ಲಿಸಬಹುದು, ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1673 ಹುದ್ದೆಗಳು – ಪದವೀಧರರು ಅರ್ಜಿ‌ ಸಲ್ಲಿಸಬಹುದು, ವಿವರ ಇಲ್ಲಿದೆ.
0

ನ್ಯೂಸ್ ಆ್ಯರೋ : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ 1673 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೆ ಎಸ್‌ ಬಿ ಐ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಆನ್ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ( SBI Recruitment 2022 ) ಸುವರ್ಣಾವಕಾಶ ಕಲ್ಪಿಸಿದೆ. ಈ ಹುದ್ದೆಗೆ ಕುರಿತಾದ ವಿವರ ಈ ಕೆಳಗಿನಂತಿವೆ.

ವಿದ್ಯಾರ್ಹತೆ : ಯಾವುದೇ ಬೋರ್ಡ್‌ ಅಥವಾ ವಿಶ್ವವಿದ್ಯಾಲದಿಂದ ಮಾನ್ಯತೆ ಹೊಂದಿರುವ ಡಿಗ್ರಿ ಮುಗಿದಿರುವ ಅಭ್ಯರ್ಥಿಗಳು ಅರ್ಜಿಯನ್ನು ನೀಡಬಹುದಾಗಿದೆ.

ವಯಸ್ಸಿನ ಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು.

ಅರ್ಜಿ ಶುಲ್ಕ :

SC/ST/PwBD ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ, ಆದರೆ EWS/ OBC /ಜನರಲ್‌ ಕೆಟಗರಿಯ ಅಭ್ಯರ್ಥಿಗಳು 750 ರೂ. ಪಾವತಿಸಬೇಕಿದ್ದು, ಆನ್‌ ಲೈನ್‌ ಮೂಲಕ ಶುಲ್ಕ ಪಾವತಿ ಮಾಡಬೇಕಿದೆ.

ಆಯ್ಕೆ ಪ್ರಕ್ರಿಯೆ : ಪೂರ್ವಭಾವಿ ಪರೀಕ್ಷೆ , ಮೈನ್‌ ಪರೀಕ್ಷೆ, ಸೈಕೊಮೆಟ್ರಿಕ್‌ ಟೆಸ್ಟ್‌ ಮತ್ತು ಸಂದರ್ಶನಗಳೊಂದಿಗೆ ಅಭ್ಯರ್ಥಿ ಪ್ರಕ್ರಿಯೆ ನೀಡಲಿದೆ.

ಅರ್ಜಿ ಸಲ್ಲಿಸುವುದು ಹೇಗೆ ?

ಮೊದಲು ಎಸ್‌ ಬಿ ಐ ನ ಅಧಿಕೃತ ವೆಬ್ ಸೈಟ್‌ ನ ಮೂಲಕ ಅರ್ಜಿ ಸಲ್ಲಿಸಲು ಕೊಟ್ಟಿರುವ ಲಿಂಕ್‌ ಕ್ಲಿಕ್‌ ಮಾಡಿ . ನಂತರ ಅಗತ್ಯವಿರುವ ಮಾಹಿತಿಗಳನ್ನು ತುಂಬಿಸಿ . ಮಾಹಿತಿಗಳನ್ನು ತುಂಬಿಸುವ ಮೊದಲು ನಿಮ್ಮ ಮೊಬೈಲ್‌ ಸಂಖ್ಯೆ ಮತು ಇಮೇಲ್‌ ಸರಿಯಾಗಿದೆಯಾ ಎಂದು ಕಾತರಿಪಡಿಸಿಕೊಳ್ಳಿ.

ನಂತರ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಲಗತ್ತಿಸಿ. ಅಗತ್ಯ ಮಾಹಿತಿಗಳನ್ನು ಲಗತ್ತಿಸಿದ ನಂತರ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ. ಆದ ನಂತರ ಅರ್ಜಿ ಶುಲ್ಕವನ್ನು ನೀಡಿ. ಎಲ್ಲಾ ದಾಖಲೆಗಳನ್ನು ನೀಡಿದ ಮೇಲೆ ಕೊನೆಯಲ್ಲಿ ಸಬ್ಮಿಟ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ. ಮುಖ್ಯವಾಗಿ ಅದರಲ್ಲಿ ತೋರಿಸಿರುವ ಅರ್ಜಿಯ ನಂಬರ್‌ ಅನ್ನು ಹಿಡಿದಿಟ್ಟುಕೊಳ್ಳಿ.

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಅ.12ರಂದು ಕೊನೆಯ ದಿನವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..